ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಮುಖಾಮುಖಿಯಾಗಿವೆ. ಪಂದ್ಯ ಆರಂಭವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ (Virat Kohli) ಮಾಡಿದ ವಿಭಿನ್ನ ದೃಶ್ಯವೊಂದು ಮೈದಾನದಲ್ಲಿ ಪ್ರೇಕ್ಷಕರ ಮತ್ತು ಕ್ಯಾಮೆರಾಮ್ಯಾನ್ಗಳ ಗಮನ ಸೆಳೆಯಿತು.
Virat Kohli teasing Eden Gardens' crowd by Marking his Run-up for Bowling.pic.twitter.com/SqpkFbMNGK
— CricketGully (@thecricketgully) April 21, 2024
ಮೊದಲ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲು ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಂಡರು. ತಮ್ಮ ಕ್ಯಾಪ್ ಅನ್ನು ತೆಗೆದು ಅಂಪೈರ್ಕ ಕೈಗೆ ಕೊಟ್ಟರು. ಈ ವೇಳೆ ಅವರು ಮೊದಲ ಓವರ್ ಬೌಲಿಂಗ್ ಮಾಡುವರೆಂದು ಎಲ್ಲರೂ ನಂಬಿದ್ದರು. ಆದರೆ, ಅವರಿಗೆ ನಾಯಕ ಬೌಲಿಂಗ್ ಕೊಟ್ಟಿರಲಿಲ್ಲ. ಸುಮ್ಮನೆ ಆ ರೀತಿ ಮಾಡುವ ಮೂಲಕ ಪ್ರೇಕ್ಷಕರನ್ನು ಗೇಲಿ ಮಾಡಿದ್ದರು. ಸಿರಾಜ್ ಮೊದಲ ಓವರ್ ಎಸೆದಿದ್ದರು. ಈ ತಮಾಷೆಯ ವೀಡಿಯೊ ತಕ್ಷಣವೇ ಇಂಟರ್ನೆಟ್ನಲ್ಲಿ ಜೋರು ಹರಿದಾಡಿದವು.
ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಗ್ರೀನ್, ಸಿರಾಜ್ ಮತ್ತು ಕರಣ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ತಮ್ಮ ಪ್ಲೇಯಿಂಗ್ ಇಲೆವೆನ್ನಲ್ಲಿ ಮೂರು ಬದಲಾವಣೆಗಳನ್ನು ಮಾಡಿದೆ. ಪಂದ್ಯ ಆರಂಭಕ್ಕೂ ಮುನ್ನ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಚೇಸಿಂಗ್ಗೆ ಆದ್ಯತೆ ನೀಡಿದ್ದರು. ಸಾಮಾನ್ಯವಾಗಿ ಬಿಸಿ ಪರಿಸ್ಥಿತಿಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆದ್ಯತೆ ನೀಡಿದ್ದರೂ, ಹಿಂದಿನ ದಿನ ತಾಪಮಾನದಲ್ಲಿ ಕುಸಿತವನ್ನು ಅವರು ಗಮನಿಸಿದ್ದರು. ಅವರ ಬಲವಾದ ಬ್ಯಾಟಿಂಗ್ ಲೈನ್ಅಪ್ ಮತ್ತು ಪ್ರಮುಖ ಆಟಗಾರರ ಮರಳುವಿಕೆಯ ಬಗ್ಗೆ ವಿಶ್ವಾಸದೊಂದಿಗೆ, ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದರು.
ಚೇಸಿಂಗ್ ಮೈದಾನ
“ನಾವು ಬೆನ್ನಟ್ಟುತ್ತೇವೆ. ಇದು ಬಹುಶಃ ಚೇಸಿಂಗ್ ಮೈದಾನವಾಗಿದೆ. ನಾನು ವಾತಾವರಣ ಬಿಸಿಯಾಗಿರುವಾಗ ಮೊದಲು ಬ್ಯಾಟಿಂಗ್ ಮಾಡುವ ಅಭಿಮಾನಿಯಾಗಿದ್ದೇನೆ. ಆದರೆ ಮುಂಬೈ ಅಥವಾ ಚೆನ್ನೈಗಿಂತ ಭಿನ್ನವಾಗಿ ನಿನ್ನೆ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯದ ನಂತರ ತಾಪಮಾನವು ಇಳಿಯಿತು. ಬ್ಯಾಟಿಂಗ್ ಎಷ್ಟು ಪ್ರಬಲವಾಗಿದೆಯೆಂದರೆ ಬ್ಯಾಟಿಂಗ್ ಪವರ್ಪ್ಲೇ ಸಮಯದಲ್ಲಿ ಸಾಮಾನ್ಯ ಸ್ಕೋರ್ ಅಥವಾ 60-70 ಅನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ನಾವು ಕೆಲವು ಕೆಲಸಗಳನ್ನು ಮರಳಿ ಮಾಡಿದರೆ ಪರಿಸ್ಥಿತಿ ಸುಧಾರಣೆಯಾಗಬಹುದು ಎಂದು ಫಾಪ್ ಡು ಪ್ಲೆಸಿಸ್ ಹೇಳಿದ್ದಾರೆ.
ಇದನ್ನೂ ಓದಿ: Womens Cricket : ಕೌರ್ ಕೋಪಕ್ಕೆ ಗುರಿಯಾಗಿದ್ದ ಅಂಪೈರ್ ತನ್ವೀರ್ ಗೆ ಮುಂಬರುವ ಸರಣಿಯಲ್ಲಿ ಇಲ್ಲ ಚಾನ್ಸ್
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್ಸಿಬಿ ತಂಡ ಆಡಿರುವ 7 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆಲುವು ಸಾಧಿಸಿದ್ದು, 6ರಲ್ಲಿ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದಕ್ಕೆ ವಿರುದ್ಧವಾಗಿ, ಕೆಕೆಆರ್ ತನ್ನ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲಿನ ಹೊರತಾಗಿಯೂ ಉತ್ತಮ ಫಾರ್ಮ್ನಲ್ಲಿದೆ. ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.