Site icon Vistara News

Ishan Kishan : ಇಶಾನ್ ಕಿಶನ್ ಅಶಿಸ್ತಿಗೆ ಧೋನಿ ಸಲಹೆ ಕಾರಣವೇ?

ishan kishan

ಬೆಂಗಳೂರು: ಇಶಾನ್ ಕಿಶನ್ (Ishan Kishan) ಎಲ್ಲಿದ್ದಾರೆ? ಅವರು ರಣಜಿ ಟ್ರೋಫಿಯನ್ನು ಏಕೆ ಆಡುತ್ತಿಲ್ಲ? ಭಾರತ ಕ್ರಿಕೆಟ್ ತಂಡದಲ್ಲಿ ಅವರಿಗೆ ಯಾಕೆ ಅವಕಾಶಗಳು ಸಿಗುತ್ತಿಲ್ಲ ಎಂಬೆಲ್ಲ ಪ್ರಶ್ನೆಗಳು ಜೋರಾಗಿವೆ. ಜತೆಗೆ ಅವರು ತಮ್ಮ ರಾಜ್ಯ ತಂಡವಾಗಿರುವ ಜಾರ್ಖಂಡ್​ ಪರ ರಣಜಿ ಟ್ರೋಫಿಯಲ್ಲೂ ಆಡುತ್ತಿಲ್ಲ. ಇಶಾನ್ ಕಿಶನ್ ಅವರ ಈ ಅಲಭ್ಯತೆಗೆ ಅವರ ಅಶಿಸ್ತು ಕಾರಣ ಎಂದು ಹೇಳಲಾಗುತ್ತಿದೆ. ಇದಕ್ಕಿಂತಲೂ ಮಿಗಿಲಾಗಿ ಈ ಅಶಿಸ್ತಿಗೆ ಧೋನಿಯೇ ಪ್ರೇರಣೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇಬ್ಬರೂ ವಿಕೆಟ್ ಕೀಪರ್-ಬ್ಯಾಟರ್​ಗಳು ಜಾರ್ಖಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇಬ್ಬರೂ ದೇಶೀಯ ಕ್ರಿಕೆಟ್ ಆಡುವ ಬಗ್ಗೆ ಆಯ್ಕೆದಾರರ ಸಲಹೆಯನ್ನು ನಿರ್ಲಕ್ಷಿಸಿದವರು ಎಂಬ ಅಪವಾದವೂ ಕೇಳಿ ಬರುತ್ತಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮಧ್ಯದಲ್ಲಿ ವಿರಾಮ ಕೋರಿದ ನಂತರ ಆಯ್ಕೆದಾರರು ಇಶಾನ್ ಕಿಶನ್ ಅವರನ್ನು ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ತಂಡದಿಂದ ಕೈಬಿಟ್ಟಿದ್ದರು. ಆಯ್ಕೆದಾರರು ಮತ್ತು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ದೇಶೀಯ ಕ್ರಿಕೆಟ್​​ನಲ್ಲಿ ಆಡಲು ಕಿಶನ್​ಗೆ ಸಲಹೆ ನೀಡಿದ್ದರು. ಜಾರ್ಖಂಡ್ ತಂಡ ರಣಜಿ ಟ್ರೋಫಿ 2024 ರಲ್ಲಿ ತನ್ನ ನಾಲ್ಕನೇ ಪಂದ್ಯವನ್ನು ಆಡುತ್ತಿದೆ. ಆದರೆ ಕಿಶನ್ ಎಲ್ಲಿಯೂ ಕಾಣಿಸುತ್ತಿಲ್ಲ.

ಧೋನಿಯನ್ನು ಫಾಲೋ ಮಾಡುತ್ತಿದ್ದ ಇಶಾನ್ ಕಿಶನ್?

2018 ರಲ್ಲಿ, ಎಂಎಸ್​ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯೂ ಟಿ20ಮತ್ತು ಏಕದಿನ ಪಂದ್ಯಗಳಲ್ಲಿ ಆಯ್ಕೆ ಮಾಡುವ ಮೊದಲು ಸ್ಪರ್ಧಾತ್ಮಕ ಕ್ರಿಕೆಟ್​ನೊಂದಿಗೆ ಸಂಪರ್ಕದಲ್ಲಿರಲು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವಂತೆ ಎಂಎಸ್ ಧೋನಿಗೆ ಸಲಹೆ ನೀಡಿತ್ತು. ಆದರೆ ಧೋನಿ ಆ ಸಲಹೆಗಳನ್ನು ತಿರಸ್ಕರಿಸಿದರು. ದೇಶೀಯ ಕ್ರಿಕೆಟ್​ನಲ್ಲಿ ಆಡದಿರಲು ನಿರ್ಧರಿಸಿದ್ದರು. 2018ರಲ್ಲಿ ವೆಸ್ಟ್ ಇಂಡೀಸ್​​ ತಂಡವನ್ನು ಘೋಷಿಸುವಾಗ ಎಂಎಸ್​ಕೆ ಪ್ರಸಾದ್. ಧೋನಿ ವಿಜಯ್ ಹಜಾರೆ ನಾಕೌಟ್​ ಹಂತದಲ್ಲಿ ಜಾರ್ಖಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದೂ ಹೇಳಿದ್ದರು. ಆದರೆ ಅವರು ಆಡಿರಲಿಲ್ಲ.

ಕೆಲವು ಉತ್ಸಾಹಿ ಸ್ಥಳೀಯ ಆಟಗಾರರು ನೆಟ್ ಬೌಲರ್​ಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದರೂ ಧೋನಿ ಎಲ್ಲಿಯೂ ಕಾಣಿಸಲಿಲ್ಲ. ನಂತರ ಆಗಿನ ಜಾರ್ಖಂಡ್ ತರಬೇತುದಾರ ಧೋನಿ ತಂಡವನ್ನು ಸೇರಲು ಬಯಸುವುದಿಲ್ಲ ಎಂದು ದೃಢಪಡಿಸಿದ್ದರು. ಅಂತೆಯೇ ಇದೀಗ ಅವರ ಊರಿನ ಆಟಗಾರ ಇಶಾನ್ ಕಿಶನ್ ಕೂಡ ಅದೇ ರೀತಿಯ ವರ್ತನೆ ತೋರುತ್ತಿದ್ದಾರೆ.

Bowler Celebration : ಸೂಪರ್​ ಸಂಭ್ರಮ; ವೆಸ್ಟ್​ ಇಂಡೀಸ್ ಬೌಲರ್​​ನ ಸೆಲೆಬ್ರೆಷನ್​ ವಿಡಿಯೊ ಫುಲ್​ ವೈರಲ್​

ಭಾರತ ಮತ್ತು ಅಫಘಾನಿಸ್ತಾಣ ಟಿ 20 ಸರಣಿಯ ಸಮಯದಲ್ಲಿ, ರಾಹುಲ್ ದ್ರಾವಿಡ್ ಅವರು ಕಿಶನ್​ ದೇಶೀಯ ಕ್ರಿಕೆಟ್ ಆಡುವುದಾಗಿ ದೃಢಪಡಿಸಿದರು. ಆದರೆ ಅದು ಆಗಿರಲಿಲ್ಲ. ಇದರ ಪರಿಣಾಮವಾಗಿ, ಕಿಶನ್ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್​​ ತಂಡದಲ್ಲಿ ಸ್ಥಾನ ಪಡೆದಿಲ್ಲ. ಬದಲಿಗೆ, ಧ್ರುವ್ ಜುರೆಲ್​ಗೆ ಕರೆ ಬಂದಿತ್ತು.

ಇಶಾನ್ ಕಿಶನ್ ಆಯ್ಕೆಗೆ ಲಭ್ಯವಿರಲಿಲ್ಲ. ಇಶಾನ್ ವಿರಾಮವನ್ನು ಕೋರಿದ್ದಾರೆ. ಅದನ್ನು ನಾವು ದಕ್ಷಿಣ ಆಫ್ರಿಕಾದಲ್ಲಿ ಒಪ್ಪಿಕೊಂಡಿದ್ದೇವೆ. ನಾವು ಅದನ್ನು ಬೆಂಬಲಿಸಿದ್ದೇವೆ. ಅವರು ಇನ್ನೂ ಲಭ್ಯರಿಲ್ಲ. ಅವರು ಲಭ್ಯರಾದಾಗ ಅವರು ದೇಶೀಯ ಕ್ರಿಕೆಟ್ ಆಡುತ್ತಾರೆ ಮತ್ತು ಆಯ್ಕೆಗೆ ಲಭ್ಯವಿರುತ್ತಾರೆ,” ಎಂದು ದ್ರಾವಿಡ್ ಹೇಳಿದರು.

ಈ ವಿಷಯದ ಬಗ್ಗೆ ಬಿಸಿಸಿಐ ಮೌನವಾಗಿದ್ದರೂ ಇಶಾನ್ ಕಿಶನ್ ಅವರ ಕೊನೆಯ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಮರಳಿದ್ದಾರೆ. ಆದ್ದರಿಂದ, ಅವರು ಗಾಯದ ಸಮಸ್ಯೆಯಿಂದ ಬಳಸುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತಗೊಂಡಿದೆ. ಮುಂದಿನ ಕೆಲವೇ ತಿಂಗಳಳಲ್ಲಿ ಟಿ20 ವಿಶ್ವ ಕಪ್​ ಆರಂಭವಾಗಲಿದೆ. ಹೀಗಾಗಿ ಕಿಶನ್ ಮರಳಿ ತಂಡ ಸೇರಲೇಬೇಕಾಗಿದೆ.

Exit mobile version