Site icon Vistara News

Ishan Kishan : ನನ್ನನ್ನು ಹೊರಗಿಟ್ಟಿರುವ ತೀರ್ಮಾನ ಮೂರ್ಖತನದ್ದು; ಜಯ್​ ಶಾಗೆ ಟಾಂಗ್​ ಕೊಟ್ಟ ಇಶಾನ್​ ಕಿಶನ್​

ishan Kishan

ನವದೆಹಲಿ: ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಸೂಚನೆ ನೀಡಿದರೂ ರಣಜಿ ಟ್ರೋಫಿಯಲ್ಲಿ ಏಕೆ ಆಡಲಿಲ್ಲ ಎಂಬ ಬಗ್ಗೆ ಭಾರತದ ವಿಕೆಟ್ ಕೀಪರ್ ಬ್ಯಾಟರ್​ ಇಶಾನ್ ಕಿಶನ್ (Ishan Kishan) ಮಾತನಾಡಿದ್ದಾರೆ. ವಿರಾಮದ ನಡುವೆ ದೇಶೀಯ ಕ್ರಿಕೆಟ್​ನಲ್ಲಿ ಆಡುವುದು ಯಾವುದೇ ಅರ್ಥವಿಲ್ಲ ಎಂದು ಹೇಳುವ ಜತೆಗೆ ಈ ನಿರ್ಧಾರ ತೆಗೆದುಕೊಂಡ ಜಯ್​ ಶಾ ಅವರ ಯೋಚನೆ ಸರಿಯಿಲ್ಲ ಎಂಬುದಾಗಿ ಹೇಳಿದ್ದಾರೆ.

ಭಾರತದ ವಿಕೆಟ್ ಕೀಪರ್-ಬ್ಯಾಟರ್​ ಇಶಾನ್ ಕಿಶನ್​ಗೆ ಕಳೆದ ಕೆಲವು ತಿಂಗಳುಗಳು ಉತ್ತಮವಾಗಿಲ್ಲ. ಭಾರತೀಯ ಇಲೆವೆನ್​ನಲ್ಲಿ ಹಿಡಿದು ಭಾರತ ತಂಡದ ಸೆಟ್​ಅಪ್​​ನಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ಅವರನ್ನು ಮೊದಲಿಗೆ ತಂಡದಿಂದ ಕೈಬಿಡಲಾಗಿತ್ತು. ಬಳಿಕ ಬಿಸಿಸಿಐನ ಕೇಂದ್ರ ಒಪ್ಪಂದದಿಂದ ತೆಗೆದುಹಾಕಲಾಗಿತ್ತು.

ಇಶಾನ್ ಕಿಶನ್ ದಕ್ಷಿಣ ಆಫ್ರಿಕಾ ಟೆಸ್ಟ್​​ನಿಂದ ವಿರಾಮ ತೆಗೆದುಕೊಂಡ ನಂತರ ಅಂದಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಭಾರತೀಯ ತಂಡಕ್ಕೆ ಮರಳಲು, ಕೀಪರ್-ಬ್ಯಾಟರ್​​ ದೇಶೀಯ ಕ್ರಿಕೆಟ್ ಆಡುವ ಅಗತ್ಯವಿದೆ ಎಂದು ಹೇಳಿದ್ದರು. ಬಿಸಿಸಿಐ ಕೂಡ ದ್ರಾವಿಡ್ ಹೇಳಿಕೆಗೆ ಸಮ್ಮತಿ ಸೂಚಿಸಿತ್ತು. ದೇಶೀಯ ಕ್ರಿಕೆಟ್ ಆಡುವ ಮಹತ್ವವನ್ನು ಎತ್ತಿ ತೋರಿಸಿದ್ದರು. ಆದಾಗ್ಯೂ, ಇಶಾನ್ ಕಿಶನ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಮಾತನ್ನು ಕೇಳಲಿಲ್ಲ ಮತ್ತು ದೇಶೀಯವಾಗ ಜಾರ್ಖಂಡ್ ಪರ ಆಡಲಿಲ್ಲ. ಕೀಪರ್ ಬ್ಯಾಟರ್​​ ಅಹಂಕಾರ ತೋರಿಸಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಗೊಂಡ ಬಳಿಕ ಆಡಳಿತ ಮಂಡಳಿ ಕ್ರಮ ಕೈಗೊಂಡಿತು. ಅವರನ್ನು ವಾರ್ಷಿಕ ಗುತ್ತಿಗೆಯಿಂದ ವಜಾಗೊಳಿಸಲಾಯಿತು.

ರಣಜಿ ಟ್ರೋಫಿಯಲ್ಲಿ ಏಕೆ ಆಡಲಿಲ್ಲ ಎಂಬುದರ ಬಗ್ಗೆ ಮಾತನಾಡಿದ ಇಶಾನ್ ಕಿಶನ್, ದೇಶೀಯ ಕ್ರಿಕೆಟ್ ಆಡುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ನಾನು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡಿದ್ದೆ, ಜಾರ್ಖಂಡ್ ಪರ ಆಡಬೇಕಾದರೆ ನಾನು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಳ್ಳಬೇಕಾಗಿಲ್ಲ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: Champions Trophy 2025 : ಭಾರತ ತಂಡ ಪಾಕಿಸ್ತಾನಕ್ಕೆ ಬರಲೇಬೇಕು ಹಠ ಹಿಡಿದು ಕುಳಿತಿರುವ ಪಿಸಿಬಿ

ನಾನು ವಿರಾಮ ತೆಗೆದುಕೊಂಡಿರುವ ಕಾರಣ ಬೇರೆ ಎಲ್ಲಿಯೂ ಆಡಲು ಸಾಧ್ಯವಿಲ್ಲ. ಪುನರಾಗಮನ ಮಾಡಲು ಬಯಸಿದರೆ ನೀವು ದೇಶೀಯ ಕ್ರಿಕೆಟ್​​ನಲ್ಲಿ ಪ್ರದರ್ಶನ ನೀಡಬೇಕು ಎಂಬ ನಿಯಮವಿದೆ. ಅದು ಸರಳವಾಗಿದೆ. ಈಗ, ದೇಶೀಯ ಕ್ರಿಕೆಟ್ ಆಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.

ನಾನು ಆಡುವ ಮನಸ್ಥಿತಿಯಲ್ಲಿ ಇರಲಿಲ್ಲ ಮತ್ತು ಅದಕ್ಕಾಗಿಯೇ ನಾನು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡೆ. ನೀವು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡು ನಂತರ ದೇಶೀಯ ಪಂದ್ಯಗಳನ್ನು ಆಡಬೇಕು ಎಂದು ಅರ್ಥವಲ್ಲ. ಆಡಲೇಬೇಕಾದರೆ ನಾನು ಭಾರತಕ್ಕಾಗಿ ಆಡುವುದನ್ನು ಮುಂದುವರಿಸಬಹುದಿತ್ತು” ಎಂದು ಹೇಳಿದ್ದಾರೆ.

ತಂಡಕ್ಕೆ ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ

ಇಶಾನ್ ಕಿಶನ್ ಕೂಡ ಭಾರತ ತಂಡಕ್ಕೆ ಮರಳುವ ಬಗ್ಗೆ ಮಾತನಾಡಿದ್ದಾರೆ. ಸಾಕಷ್ಟು ಸ್ಪರ್ಧೆ ಇರುವ ಪುನರಾಗಮನ ಮಾಡುವುದು ಸುಲಭವಲ್ಲ ಎಂದು ಒಪ್ಪಿಕೊಂಡರು. ತಾವು ಅತ್ಯುತ್ತಮವಾದದ್ದನ್ನು ನೀಡುತ್ತಲೇ ಇರುತ್ತೇನೆ ಎಂದು ಹೇಳಿದರು.

ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೆ ಸ್ಪರ್ಧೆಯು ನಿಮಗೆ ತೃಪ್ತಿಯ ಭಾವನೆಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಆನಂದಿಸುತ್ತೇನೆ. ನಾನು ಅದರ ಬಗ್ಗೆ ಯಾವುದೇ ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ, “ಎಂದು ಅವರು ಮುಕ್ತಾಯಗೊಳಿಸಿದರು.

Exit mobile version