ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ (IPL 2024) ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಇಶಾಂತ್ ಶರ್ಮಾ (Ishant Sharma) ನಡುವೆ ಗೆಳೆತನದ ಜಟಾಪಟಿ ನಡೆಯಿತು. ಈ ವಿಡಿಯೊ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು. ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಬೌಲಿಂಗ್ನಲ್ಲಿ ಅಬ್ಬರಿಸಿದ ಕೊಹ್ಲಿ ಆರ್ಸಿಬಿಗೆ ನೆರವಾಗಲು ಮುಂದಾದರು. ಆದರೆ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ ಅನ್ನು ಔಟ್ ಮಾಡುವಲ್ಲಿ ಇಶಾನ್ ಯಶಸ್ವಿಯಾದರು. ಆರ್ಸಿಬಿ ಇನ್ನಿಂಗ್ಸ್ನ ನಿದಕ ಓವರ್ನಲ್ಲಿಯೇ ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಎಸೆತಕ್ಕೆ ಹೊಡೆಯುವ ಮೂಲಕ ಮಿಂಚಿದ್ದರು.
'Qualification of both teams is on the line'
— ` (@3TimesPOTT) May 12, 2024
Meanwhile Virat Kohli & Ishant Sharma. 😭 pic.twitter.com/oH61lUrSlx
ಭಾರತದ ಮಾಜಿ ನಾಯಕ ಇನ್ನಿಂಗ್ಸ್ನ ಎರಡನೇ ಮತ್ತು ನಾಲ್ಕನೇ ಎಸೆತವನ್ನು ಎಸೆಯಲು ಬಂದಾಗ ವೇಗಿ ಇಶಾಂತ್ ವಿರುದ್ಧ ಆಕ್ರಮಣ ಮಾಡಲು ನಿರ್ಧರಿಸಿದರು. ಓವರ್ನ ಮೊದಲ ಎಸೆತದಲ್ಲಿ, ಕೊಹ್ಲಿ ಎಸೆತ ಬ್ಯಾಟ್ನ ಅಂಚಿಗೆ ತಾಗಿತು. ಅದೃಷ್ಟವಶಾತ್ ಅದು ವಿಕೆಟ್ ಕೀಪರ್ಗಿಂತ ದೂರ ಹೋಯಿತು. ಕೊಹ್ಲಿಗೆ ನಾಲ್ಕು ರನ್ಗಳು ಸಿಕ್ಕವು. ಈ ವೇಳೆ ಇಬ್ಬರೂ ಆಟಗಾರರು ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.
ಇದನ್ನೂ ಓದಿ: Ravindra Jadeja : ವಿಕೆಟ್ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್; ಇಲ್ಲಿದೆ ವಿಡಿಯೊ
ಎರಡನೇ ಎಸೆತದಲ್ಲಿ ಕೊಹ್ಲಿ ಇಶಾಂತ್ ಶರ್ಮಾಗೆ ಸಿಕ್ಸರ್ ಬಾರಿಸಿದರು. ಬಲಗೈ ವೇಗಿ ನಂತರದ ಎಸೆತವನ್ನು ಹಾಗೆಯೇ ಬಿಟ್ಟರು.ಆದರೆ, ಓವರ್ನ ನಾಲ್ಕನೇ ಎಸೆತದಲ್ಲಿ ಕೊಹ್ಲಿಯನ್ನು ಇಶಾಂತ್ ಔಟ್ ಮಾಡಿದರು. ಕೊಹ್ಲಿ ಡ್ರೈವ್ ಗೆ ಹೋದರು ಆದರೆ ಅಂತಿಮವಾಗಿ ಬ್ಯಾಟ್ಗೆ ತಾಗಿದ ಚೆಂಡು ವಿಕೆಟ್ ಕೀಪರ್ ಹಿಡಿದರು.
Ball 1: Edged and gone for 4, Virat and Ishan sledge each other.
— CricWatcher (@CricWatcher11) May 12, 2024
Ball 2: A no look six and Virat takes a dig at Ishant.
Ball 3: Swing and a miss, Ishant gives a stare to Kohli.
Ball 4: Kohli gets out, Ishant teases Kohli 😂#RCBvsDC | #IPL2024 | #ViratKohli pic.twitter.com/2TA8p0J8qq
ಇಶಾಂತ್ ಶರ್ಮಾ ಈ ವಿಕೆಟ್ನಿಂದ ಸಂತೋಷಪಟ್ಟರು. ಅದರ ಬಗ್ಗೆ ಕೊಹ್ಲಿಗೆ ತಿಳಿಸಲು ನಿರ್ಧರಿಸಿದರು. ಕೊಹ್ಲಿ ನಿರ್ಗಮಿಸುವ ಮೊದಲು ಇಬ್ಬರೂ ಆಟಗಾರರು ನಗುವನ್ನು ಹಂಚಿಕೊಂಡರು. ಕೊಹ್ಲಿ 13 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ 27 ರನ್ ಗಳಿಸಿ ನಿರ್ಗಮಿಸಿದರು. ರಜತ್ ಪಾಟಿದಾರ್ ಹಾಗೂ ವಿಲ್ ಜಾಕ್ಸ್ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ 9 ವಿಕೆಟ್ಗೆ 187 ರನ್ ಗಳಿಸಿದೆ.
— Bangladesh vs Sri Lanka (@Hanji_CricDekho) May 12, 2024
ಐಪಿಎಲ್ 2024 ರಲ್ಲಿ ಕೊಹ್ಲಿಯ ಅಭಿಯಾನದ ಬಗ್ಗೆ ಮಾತನಾಡುತ್ತಾ, ಅವರು ಅದ್ಭುತ ರನ್ ಗಳಿಸಿದ್ದಾರೆ. ಬಲಗೈ ಬ್ಯಾಟ್ಸ್ಮನ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಆಡಿರುವ 13 ಪಂದ್ಯಗಳಲ್ಲಿ 1 ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 661 ರನ್ ಗಳಿಸಿದ್ದಾರೆ.