Site icon Vistara News

Ravindra Jadeja : ಜಡೇಜಾ ಔಟ್ ಅಲ್ಲ; ಅಂಪೈರ್​ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು!

Ravindra Jadeja

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂದು ರವೀಂದ್ರ ಜಡೇಜಾ ಶತಕ ಗಳಿಸಲು ವಿಫಲರಾಗಿದ್ದಾರೆ. ರವೀಂದ್ರ ಜಡೇಜಾ (Ravindra Jadeja) ಅವರು 87 ರನ್ ಬಾರಿಸಿ ಅರೆಕಾಲಿಕ ಸ್ಪಿನ್ನರ್ ಜೋ ರೂಟ್ ಅವರಿಗೆ ಎಲ್ ಬಿಡಬ್ಲ್ಯು ರೂಪದಲ್ಲಿ ವಿಕೆಟ್ ಒಪ್ಪಿಸಿದರು. ಅವರು ತಮ್ಮ ಇನ್ನಿಂಗ್ಸ್​ನಲ್ಲಿ 7 ಬೌಂಡರಿಗಳು ಮತ್ತು 2 ಸಿಕ್ಸರ್​ಗಳನ್ನು ಬಾರಿಸಿದ್ದರು. ಆದರೆ, ಶತಕದ ಕಡೆಗೆ ಸಾಗುತ್ತಿದ್ದ ಅವರು ಯಾಮಾರಿ ಔಟಾದರು.

ರವೀಂದ್ರ ಜಡೇಜಾ ಅವರ ಔಟ್ ವಿವಾದಾತ್ಮಕವಾಗಿತ್ತು. ಇದು ಟ್ವಿಟರ್​​ ನಲ್ಲಿ (ಈಗ ಎಕ್ಸ್) ಅಭಿಮಾನಿಗಳ ಕೋಪ ಕಾಣಿಸಿಕೊಂಡಿತು. ಆನ್ ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಅವರ ನಿರ್ಧಾರದಿಂದ ಅಭಿಮಾನಿಗಳು ನಿರಾಶರಾದರು. ತೀರ್ಪು ಪರಾಮರ್ಶೆ ಮಾಡಿದಾಗಲೂ ಚೆಂಡು ವಿಕೆಟ್​ಗೆ ಸಂಪೂರ್ಣವಾಗಿ ಬಡಿಯುವುದು ಕಂಡು ಬರಲಿಲ್ಲ. ಚೆಂಡು ಬೇಲ್ಸ್​​ಗಿಂತ ಸಾಕಷ್ಟು ಎತ್ತರಕ್ಕೆ ತಾಗುತ್ತಿತ್ತು. ಡಿಆರ್​​ಎಸ್​ ಕೂಡ ಆನ್​ಫೀಲ್ಡ್​ ಅಂಪೈರ್ ತೀರ್ಪನ್ನು ಬೆಂಬಲಿಸಿತು. ಹೀಗಾಗಿ ರವೀಂದ್ರ ಜಡೇಜಾ ಮೈದಾನ ತೊರೆಯಬೇಕಾಯಿತು. ಆದಾಗ್ಯೂ, ಆನ್ ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಅವರ ವಿವಾದಾತ್ಮಕ ನಿರ್ಧಾರದಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲವಾದರು.

ಆನ್ ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ವಿರುದ್ಧ ಕ್ರಿಕೆಟ್​ ಅಭಿಮಾನಿಗಳು ತಿರುಗಿಬಿದ್ದರು. ಕೆಲವು ಅಭಿಮಾನಿಗಳು ಅವರನ್ನು ಮೋಸಗಾರ ಎಂದು ಕರೆದರು ಮತ್ತು ಟೀಮ್ ಇಂಡಿಯಾ ವಿರುದ್ಧ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು. ತಪ್ಪು ಕರೆಯಿಂದಾಗಿ ರವೀಂದ್ರ ಜಡೇಜಾ ಶತಕವನ್ನು ಕಳೆದುಕೊಂಡಿರುವುದಕ್ಕೆ ಕೆಲವು ಅಭಿಮಾನಿಗಳು ಸಂಪೂರ್ಣ ನಿರಾಸೆಯಿಂದ ಕೂಡಿದ ಟ್ವೀಟ್​ಗಳನ್ನು ಮಾಡಿದರು.

ಎರಡನೇ ದಿನವೂ ಔಟ್ ನೀಡಿದ್ದರು

ಆಘಾತಕಾರಿ ಸಂಗತಿಯೆಂದರೆ, ರವೀಂದ್ರ ಜಡೇಜಾ ಅವರಿಗೂ 2 ನೇ ದಿನವೂ ಅಂಪೈರ್ ಎಲ್ಬಿಡಬ್ಲ್ಯು ನೀಡಿದ್ದರು. ಆದಾಗ್ಯೂ, ಜಡೇಜಾ ಬ್ಯಾಟ್​ಗೆ ಮೊದಲು ಚೆಂಡು ತಾಗಿದ್ದ ಕಾರಣ ಅವರು ಡಿಆರ್​ಎಸ್​ ಸಲ್ಲಿಸಿದ್ದರು. ಪರಿಣಾಮವಾಗಿ ಅವರು ತಮ್ಮ ವಿಕೆಟ್​ ಉಳಿಸಿಕೊಂಡರು.

ಇದನ್ನೂ ಓದಿ : Ind vs Eng : ಇಂಗ್ಲೆಂಡ್​ ತಂಡಕ್ಕೆ ಆಘಾತ, ಮಾರಕ ಸ್ಪಿನ್ನರ್​ಗೆ ಗಾಯದ ಸಮಸ್ಯೆ

ಅದೇನೇ ಇದ್ದರೂ ರವೀಂದ್ರ ಜಡೇಜಾ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎಡಗೈ ಸ್ಪಿನ್ನರ್ 87 ರನ್ ಬಾರಿಸುವ ಜತೆಗೆ 3 ವಿಕೆಟ್​ ಕೂಡ ಪಡೆದರು. ವಿಶೇಷವೆಂದರೆ, ಯಶಸ್ವಿ ಜೈಸ್ವಾಲ್ (80) ಮತ್ತು ಕೆಎಲ್ ರಾಹುಲ್ (86) ಕೂಡ 80 ರ ಸ್ಕೋರ್ ಮಾಡಿದರು ಹಾಗೂ ತಮ್ಮ ತಮ್ಮ ಶತಕಗಳನ್ನು ಕಳೆದುಕೊಂಡರು.

ಇಂಗ್ಲೆಂಡ್​ನ 246 ರನ್​ಗಳೀಗೆ ಉತ್ತರವಾಗಿ ಭಾರತವು ಮೊದಲ ಇನ್ನಿಂಗ್ಸ್ನಲ್ಲಿ 436 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಅದೇ ರೀತಿ 190 ರನ್​ಗಳ ಮುನ್ನಡೆ ಸಾಧಿಸಿದೆ. ಕೊನೆಯಲ್ಲಿ ಅಕ್ಷರ್ ಪಟೇಲ್ 44 ರನ್ ಸೇರಿಸಿದ್ದಾರೆ. ಇಂಗ್ಲೆಂಡ್ ಪರ ಜೋ ರೂಟ್ 4 ವಿಕೆಟ್ ಪಡೆದರು.

Exit mobile version