Site icon Vistara News

Ind vs Eng : ಎರಡನೇ ಪಂದ್ಯಕ್ಕೆ ಜಡೇಜಾ, ರಾಹುಲ್ ಔಟ್​; ಇನ್ನಿಬ್ಬರಿಗೆ ಅವಕಾಶ

Ravindra jadeja

ಬೆಂಗಳೂರು: ಹೈದರಾಬಾದ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ (Ind vs Eng) ಟೆಸ್ಟ್​​ ಸರಣಿಯ ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿದ ಭಾರತಕ್ಕೆ ಡಬಲ್ ಹೊಡೆತ ಬಿದ್ದಿದೆ. ಆಲ್​ರೌಂಡರ್​ ರವೀಂದ್ರ ಜಡೇಜಾ ಮತ್ತು ವಿಕೆಟ್​ಕೀಪರ್​ ಬ್ಯಾಟರ್​ ಕೆಎಲ್ ರಾಹುಲ್ ಫೆಬ್ರವರಿ 2ರಿಂದ ವಿಶಾಖಪಟ್ಟಣಂನಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್​ನಿಂದ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ.

ಹೈದರಾಬಾದ್ ವಿರುದ್ಧದ ಪಂದ್ಯದ ನಾಲ್ಕನೇ ದಿನದಂದು ಜಡೇಜಾ ಬ್ಯಾಟಿಂಗ್ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ತಂಡದ ಮ್ಯಾನೇಜ್ಮೆಂಟ್ ಸ್ಕ್ಯಾನ್​ಗಾಗಿ ಕಾಯುತ್ತಿದೆ ಎಂದು ಹಿಂದೆ ವರದಿಯಾಗಿತ್ತು. ಇದೀಗ ವರದಿ ಬಂದಿತ್ತು. ಈಗ ಅವರನ್ನು ಆಟದಿಂದ ಹೊರಗಿಟ್ಟಿದೆ. ಏತನ್ಮಧ್ಯೆ, ರಾಹುಲ್ ಬಲ ಕ್ವಾಡ್ರಿಸೆಪ್ಸ್ ನೋವಿನಿಂದ ಬಳಲುತ್ತಿದ್ದಾರೆ ಮತ್ತು ಆಟದಿಂದ ಹೊರಗುಳಿಯಲಿದ್ದಾರೆ.

ಇವರಿಬ್ಬರು ಹೊರಗುಳಿದ ನಂತರ, ಆಯ್ಕೆ ಸಮಿತಿಯು ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಎರಡನೇ ಟೆಸ್ಟ್​ ತಂಡಕ್ಕೆ ಸೇರಿಸಿದೆ.

ಎರಡನೇ ಪಂದ್ಯಕ್ಕೆ ತಂಡ ಹೀಗಿದೆ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್.

ಇಂಗ್ಲೆಂಡ್ ವಿರುದ್ಧ ಸೋಲು; 91 ವರ್ಷಗಳ ಬಳಿಕ ಭಾರತದ ಕಳಪೆ ದಾಖಲೆ

ಹೈದರಾಬಾದ್: ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ (Ind vs Eng) 28 ರನ್​ಗಳ ಸೋಲು ಅನುಭವಿಸಿ ಮುಖಭಂಗಕ್ಕೆ ಈಡಾಗಿದೆ. ಇದರ ಜತೆಗೆ ಭಾರತ 91 ವರ್ಷಗಳ ಬಳಿಕ ಕಳಪೆ ದಾಖಲೆಯೊಂದನ್ನು ಮಾಡಿದೆ. 100 ಅಥವಾ ಅದಕ್ಕಿಂತ ಹೆಚ್ಚು ರನ್​ಗಳ ಮುನ್ನಡೆ ಸಾಧಿಸಿದ ನಂತರ ಭಾರತ ತಂಡವು ಟೆಸ್ಟ್​ ಪಂದ್ಯದಲ್ಲಿ ಸೋಲುತ್ತಿರುವುದು 91 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ.

2ನೇ ದಿನದಾಟದ ಅಂತ್ಯದವರೆಗೂ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ನಂತರ ಆಘಾತಕಾರಿ ತಿರುವು ಭಾರತವನ್ನು ಹತಾಶೆಗೆ ದೂಡಿತು. ರೋಹಿತ್ ಆ್ಯಂಡ್​ ಕಂಪನಿಯು ಮೊದಲ ಇನ್ನಿಂಗ್ಸ್ ರನ್​​ಗಳ ಪರ್ವತವನ್ನು ದಾಖಲಿಸುವ ಸೂಚನೆ ನೀಡಿದರೂ ಅಂತಿಮವಾಗಿ 190ಕ್ಕೆ ಅಂತರಕ್ಕೆ ಸೀಮಿತಗೊಂಡಿತು. ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್​ ಒಲಿ ಪೋಪ್ ಅವರ ಅಮೋಘ 196 ರನ್ ಗಳಿಸುವ ಮೂಲಕ ಮೂರನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ಅನ್ನು ದೊಡ್ಡ ಮೊತ್ತದೆಡೆಗೆ ಮುನ್ನಡೆಸಿದರು. ಅತೆಯೇ ಭಾರತಕ್ಕೆ 231 ರನ್​ಗಳ ಚೇಸಿಂಗ್ ಅವಕಾಶ ದೊರೆಯಿತು. ಆದರೆ, 202 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.

ಟೆಸ್ಟ್ ದಾಖಲೆ ಬರೆದ ಭಾರತ

ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನು 1932ರಲ್ಲಿ ಆಡಿತು. ಕಳೆದ 10 ದಶಕಗಳಲ್ಲಿ ಅವರು 100 ಅಥವಾ ಅದಕ್ಕಿಂತ ಹೆಚ್ಚಿನ ರನ್​ಗಳ ಮುನ್ನಡೆ ಸಾಧಿಸಿದ ನಂತರ ಸ್ಪರ್ಧೆಯಲ್ಲಿ ಸೋತಿರಲಿಲ್ಲ. ವಾಸ್ತವವಾಗಿ, ಮೊದಲ ಇನ್ನಿಂಗ್ಸ್ ಲಾಭವನ್ನು ದೊಡ್ಡ ಪ್ರಮಾಣದಲ್ಲಿ ಪಡೆದ ನಂತರ ತಂಡವೊಂದು ಟೆಸ್ಟ್ ಪಂದ್ಯವನ್ನು ಕಳೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ.

ಇದನ್ನೂ ಓದಿ : Rahul Dravid: ಮೊದಲ ಟೆಸ್ಟ್​ ಪಂದ್ಯದ ಸೋಲಿಗೆ ಕಾರಣ ತಿಳಿಸಿದ ಕೋಚ್​ ದ್ರಾವಿಡ್​

ಇದಕ್ಕೂ ಮುನ್ನ 2001ರಲ್ಲಿ ಕೋಲ್ಕತಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 274 ರನ್​​ಗಳ ಕೊರತೆಯನ್ನು ನೀಗಿಸುವ ಮೂಲಕ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಈ ಸಂದರ್ಭದಲ್ಲಿ ಇಂಗ್ಲೆಂಡ್ ತನ್ನ 190 ರನ್ ಗಳ ಕೊರತೆಯನ್ನು ನಿವಾರಿಸುವಲ್ಲಿ ಯಶಸ್ವಿಯಾಯಿತು. ಪೋಪ್ ಅವರ ಜೀವಮಾನದ ಶ್ರೇಷ್ಠ ಪ್ರದರ್ಶನ ನೀಡಿದರು. 1964ರಲ್ಲಿ ಭಾರತ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ 65 ರನ್​ಗಳ ಹಿನ್ನಡೆಗೆ ಒಳಗಾಗಿತ್ತು ಆದರೆ, ಆದಾಗ್ಯೂ ಪಂದ್ಯವನ್ನು ಗೆದ್ದಿತ್ತು. ಇದು ಭಾರತ ಪ್ರವಾಸದಲ್ಲಿ ಮೊದಲ ಇನಿಂಗ್ಸ್​ ಹಿನ್ನಡೆ ಹೊರತಾಗಿಯೂ ಗೆಲುವು ಪಡೆದ ಮೊದಲ ತಂಡ.

Exit mobile version