Site icon Vistara News

Jagan Reddy : ಚುನಾವಣಾ ರ್ಯಾಲಿಯಲ್ಲಿ ಆಂಧ್ರ ಸಿಎಂ ಜಗನ್​​ ತಲೆಗೆ ಕಲ್ಲೆಸೆತ

Jagan Reddy

ವಿಜಯವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ (Jagan Reddy) ಅವರ ಬಸ್ ಚುನಾವಣಾ ರ್ಯಾಲಿ ವೇಳೆ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಅವರ ಹಣೆಗೆ ಗಾಯಗಳಾಗಿವೆ. ಅವರ ಎಡ ಹುಬ್ಬಿನ ಬಳಿ ಗಾಯವಾಗಿತ್ತು ಮತ್ತು ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಅವರು ತಮ್ಮ ಯಾತ್ರೆಯನ್ನು ಮುಂದುವರೆಸಿದ್ದಾರೆ. ಮುಖ್ಯಮಂತ್ರಿ ಮೇಲಿನ ದಾಳಿಗೆ ತೆಲುಗು ದೇಶಂ ಮತ್ತು ಅದರ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕಾರಣ ಎಂದು ವೈಎಸ್ಆರ್​​ಸಿಪಿ ಪಕ್ಷ ಆರೋಪಿಸಿದೆ. ಇದು ಹೇಡಿತನದ ಕೃತ್ಯ ಎಂಬುದಾಗಿ ಹೇಳಿದೆ.

“ವಿಜಯವಾಡದ ಸಿಂಗ್ ನಗರದ ವಿವೇಕಾನಂದ ಶಾಲಾ ಕೇಂದ್ರದಲ್ಲಿ ಬಸ್ ಪ್ರವಾಸದ ಭಾಗವಾಗಿ ಜನಸಂದಣಿ ನಡುವೆ ಹೋಗುತ್ತಿದ್ದಾಗ ಕಲ್ಲು ಹೊಡೆಯಲಾಗಿದೆ ” ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಹೇಳಿಕೆಯಲ್ಲಿ ತಿಳಿಸಿದೆ. ಕಲ್ಲು ರೆಡ್ಡಿಗೆ ಅತ್ಯಂತ ಹೆಚ್ಚಿನ ವೇಗದಲ್ಲಿ ಅಪ್ಪಳಿಸಿದೆ. ಅದನ್ನು ಕವಣೆಯಿಂದ ಉಡಾಯಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಬಸ್​ನ ಮೇಲಿನಿಂದ ಜನರಿಗೆ ಕೈ ಬೀಸುತ್ತಿದ್ದಾಗ ಮುಖ್ಯಮಂತ್ರಿಯ ಮೇಲೆ ಕಲ್ಲೆಸೆಯಲಾಗಿದೆ. ಮಾರ್ಚ್​ನಲ್ಲಿ ಜಗನ್ ತಮ್ಮ ಪಕ್ಷದ ಚುನಾವಣಾ ಪ್ರಚಾರದ ಭಾಗವಾಗಿ ತಮ್ಮ ಬಸ್ ಯಾನ ‘ಮೆಮಂತ ಸಿದ್ದಂ’ (ನಾವೆಲ್ಲರೂ ಸಿದ್ಧರಾಗಿದ್ದೇವೆ) ಪ್ರಾರಂಭಿಸಿದ್ದರು.. 21 ದಿನಗಳ ಬಸ್ ಪ್ರವಾಸವು ಎಲ್ಲಾ ಜಿಲ್ಲೆಗಳನ್ನು ದಾಟಿ ಹೋಗು ಗುರಿಯನ್ನು ಹೊಂದಿದೆ. ಏಕೆಂದರೆ ಈ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆಯ ಹೊರತಾಗಿ ಬಿಜೆಪಿ ತೆಲುಗು ದೇಶಂ ಮತ್ತು ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಇದನ್ನೂ ಓದಿ: Kangana Ranaut : ಕ್ವೀನ್​ಗೆ ಪ್ರತಿಸ್ಪರ್ಧಿ ಕಿಂಗ್​​ ; ಮಂಡಿಯಲ್ಲಿ ಕಂಗನಾ ವಿರುದ್ಧ ವಿಕ್ರಮಾದಿತ್ಯ ಸಿಂಗ್

Exit mobile version