ಪ್ಯಾರಿಸ್ : ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗಾಗಿ (Paris Olympics 2024) ಅಥ್ಲೀಟ್ಗಳು ಸಜ್ಜಾಗುತ್ತಿವೆ. ಕ್ರೀಡಾಪಟುಗಳು ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅಂದ ಹಾಗೆ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವುದು ಕ್ರೀಡಾಪಟುವೊಬ್ಬರ ಉನ್ನತ ಆಸೆಯಾಗಿರುತ್ತದೆ. ಹೀಗಾಗಿ ತಮ್ಮ ಜೀವಮಾನದಲ್ಲಿ ಕಲಿತಿರುವ ಎಲ್ಲ ವಿದ್ಯೆಗಳನ್ನು ಈ ವೇದಿಕೆಯಲ್ಲಿ ಪ್ರಯೋಗಿಸುತ್ತಾರೆ. ಅಥ್ಲೀಟ್ಗಳೀಗೆ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ನಿಯಮಗಳನ್ನು ಹೇಳಲಾಗುತ್ತದೆ. ಅದನ್ನು ಉಲ್ಲಂಘಿಸಿದರೆ ಅವರು ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುತ್ತಾರೆ. ಅಂತೆಯೇ ಜಪಾನ್ ಮಹಿಳಾ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ತಂಡದ ನಾಯಕಿ ಶೋಕೊ ಮಿಯಾಟಾ ಅವರು ಪ್ಯಾರಿಸ್ ಗೇಮ್ಸ್ ಗಾಗಿ ತಂಡದಿಂದ ಕ್ಷುಲ್ಲಕ ಕಾರಣಕ್ಕೆ ಹಿಂದೆ ಸರಿದಿದ್ದಾರೆ. ಅವರು ಕೂಟದ ನಿಯಮವನ್ನು ಉಲ್ಲಂಗಿಸಿ ಸಿಗರೇಟ್ ಸೇದಿದ್ದರು. ಹೀಗಾಗಿ ಅವರನ್ನು ವಾಪಸ್ ಕಳುಹಿಸಲಾಗಿದೆ ಎಂದು ಜಪಾನಿನ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್ ಶುಕ್ರವಾರ ತಿಳಿಸಿದೆ.
ಮೊನಾಕೊದಲ್ಲಿನ ತಂಡದ ತರಬೇತಿ ಶಿಬಿರದಿಂದ ಮಿಯಾಟಾ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ. ಅವರು ಗುರುವಾರ ಜಪಾನ್ ಗೆ ಆಗಮಿಸಿದ್ದು ತನಿಖೆ ಎದುರಿಸಲಿದ್ದಾರೆ ಎಂದು ಜೆಜಿಎ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಮದ್ಯಪಾನ ನಿಯಂತ್ರಣ ನಿಯಮವನ್ನೂ ಉಲ್ಲಂಘನೆಯನ್ನೂ ಮಾಡಿದ್ದಾರೆ.
ಮಹಿಳಾ ತಂಡವು ಐದು ಕ್ರೀಡಾಪಟುಗಳ ಬದಲು ನಾಲ್ಕು ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಲಿದೆ ಎಂದು ಜೆಜಿಎ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. “ಘಟನೆಯ ಬಗ್ಗೆ ನಾವು ನಮ್ಮ ಹೃದಯದಾಳದಿಂದ ಕ್ಷಮೆಯಾಚಿಸುತ್ತೇವೆ” ಎಂದು ಜೆಜಿಎ ಅಧ್ಯಕ್ಷ ತಡಾಶಿ ಫ್ಯುಜಿಟಾ ಮಿಯಾಟಾ ಅವರ ವೈಯಕ್ತಿಕ ತರಬೇತುದಾರ ಮುತ್ಸುಮಿ ಹರಾಡಾ ಸೇರಿದಂತೆ ಇತರ ಅಧಿಕಾರಿಗಳು ಹೇಳಿದ್ದಾರೆ.
1964ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ತವಕದಲ್ಲಿದ್ದ ಜಪಾನ್ ಮಹಿಳಾ ಜಿಮ್ನಾಸ್ಟಿಕ್ಸ್ ತಂಡದ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದರೆ ನಾಯಕಿಯೇ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಅವರ ಪದಕದ ಸವಾಲು ಹೆಚ್ಚಾಗಿದೆ.
ಅಥ್ಲೀಟ್ ಗಳ ಕ್ರೀಡಾಗ್ರಾಮಕ್ಕೆ ಲಭಿಸಿತು ಅಧಿಕೃತ ಚಾಲನೆ
ಪ್ಯಾರಿಸ್: ವಿಶ್ವ ಮಟ್ಟದಲ್ಲಿ ಪ್ರಮುಖ ಕ್ರೀಡಾಕೂಟವಾದ ಒಲಿಂಪಿಕ್ಸ್ (Paris Olympics 2024) ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿವೆ. ಕ್ರೀಡಾಕೂಟದ ಆತಿಥ್ಯ ವಹಿಸಿಕೊಂಡಿರುವ ಫ್ರಾನ್ಸ್ ಸರ್ವ ಸನ್ನದ್ಧವಾಗಿದೆ. ಎಲ್ಲ ದೇಶದ ಕ್ರೀಡಾಪಟುಗಳು ಇದೀಗ ಫ್ರಾನ್ಸ್ಗೆ ಆಗಮಿಸುತ್ತಿದ್ದಾರೆ. ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಹೊಂದಿರುವ ಕ್ರೀಡಾಗ್ರಾಮ ಅಧಿಕೃತವಾಗಿ(Paris Olympic Village) ತೆರೆದುಕೊಂಡಿದೆ. ಈ ಕ್ರೀಡಾಗ್ರಾಮವನ್ನು ಪ್ಯಾರಿಸ್ನ ಉತ್ತರ ಭಾಗದಲ್ಲಿ ನಿರ್ಮಿಸಲಾಗಿದ್ದು, ಇದು ಗರಿಷ್ಠ 14,500 ಮಂದಿಗೆ ಅತಿಥ್ಯವಹಿಸಲು ಸಿದ್ಧವಾಗಿದೆ. ಆಸ್ಟ್ರೇಲಿಯ ಹಾಗೂ ಬ್ರೆಝಿಲ್ ತಮ್ಮ ತಂಡದ ಸದಸ್ಯರನ್ನು ಕ್ರೀಡಾಗ್ರಾಮಕ್ಕೆ ಕಳುಹಿಸಿಕೊಟ್ಟ ಮೊದಲ ದೇಶಗಳಾಗಿವೆ.
ಕ್ರೀಡಾಗ್ರಾಮವು ಕ್ರೀಡಾಪಟುಗಳಿಗೆ ವಿಶ್ರಾಂತಿ ಹಾಗೂ ಅವರ ಸ್ಪರ್ಧೆಗಳಿಗೆ ತಯಾರಿ ಮಾಡಲು ಆರಾಮದಾಯಕ ಹಾಗೂ ಸುರಕ್ಷಿತ ವಾತಾವರಣ ಒದಗಿಸುತ್ತದೆ. ಒಲಿಂಪಿಕ್ಸ್ ವಿಲೇಜ್, ಕ್ರೀಡಾಕೂಟ ಸಂಘಟಕರಿಗೆ ಹೆಮ್ಮೆಗೆ ಕಾರಣವಾಗಿದ್ದು, ಇದು ಒಂದು ವಿಶಿಷ್ಟ ವೈಶಿಷ್ಟವನ್ನು ಹೊಂದಿದೆ. ಗ್ರಾಮದ ನಿವಾಸಿಗಳಿಗೆ ಅರಾಮದಾಯಕವಾದ ತಾಪಮಾನ ನಿರ್ವಹಿಸಲು ಹವಾನಿಯಂತ್ರಣವನ್ನು ಅವಲಂಬಿಸಿಲ್ಲ. ಬೇಸಿಗೆಯ ಸಮಯದಲ್ಲಿ ಹೊರಭಾಗಕ್ಕಿಂತ ಕನಿಷ್ಠ 6 ಡಿಗ್ರಿ ಸೆಲ್ಸಿಯಸ್ ತಂಪಾಗಿರುವಂತೆ ಗ್ರಾಮದ ಒಳಭಾಗವನ್ನು ವಿನ್ಯಾಸಗೊಳಿಸಲಾಗಿದೆ.
ಎಲ್ಲ ಕ್ರೀಡಾಕೂಡ ಮುಕ್ತಾಯದ ಬಳಿಕ ಈ ಕ್ರೀಡಾಗ್ರಾಮದ ಒಳಗಿನ ಅಪಾರ್ಟ್ಮೆಂಟ್ಗಳನ್ನು ವಸತಿಗಳಾಗಿ ಪರಿವರ್ತಿಸಲಾಗುತ್ತದೆ. ಕನಿಷ್ಠ ಮೂರನೇ ಒಂದು ಭಾಗವನ್ನು ಸಾರ್ವಜನಿಕ ವಸತಿ ಉದ್ದೇಶಗಳಿಗಾಗಿ ಮೀಸಲಿಡಲಾಗುತ್ತದೆ.
ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ “ಇಂಡಿಯಾ ಹೌಸ್” ಕಾಣಬಹುದಾಗಿದೆ. ಭಾರತೀಯ ಒಲಿಂಪಿಕ್ಸ್ ಒಕ್ಕೂಟದ (ಐಒಎ) ಸಹಭಾಗಿತ್ವ ವಹಿಸಿರುವಂಥ ರಿಲಯನ್ಸ್ ಫೌಂಡೇಷನ್ ನಿಂದ ಈ “ಇಂಡಿಯಾ ಹೌಸ್” ಪರಿಕಲ್ಪನೆ ಮೂಡಿದೆ. ಈ ಇಂಡಿಯಾ ಹೌಸ್ ನಲ್ಲಿ ಭಾರತದ ಕ್ರೀಡಾ ಸಂಸ್ಕೃತಿ- ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಕ್ರೀಡೆಗೆ ಸಂಬಂಧಿಸಿ ಭಾರತದ ಭೂತ- ಭವಿಷ್ಯತ್ ಹಾಗೂ ವರ್ತಮಾನದ ಸಾಧನೆ, ಕನಸುಗಳನ್ನು ಸಹ ತೋರಿಸಲಾಗುತ್ತದೆ. ತಂತ್ರಜ್ಞಾನ ಮತ್ತು ಡಿಜಿಟಲೈಸೇಷನ್ ನಲ್ಲಿ ಭಾರತದ ಸಾಧನೆಯನ್ನು ಜಗತ್ತಿನೆದುರು ತೆರೆದಿಡಲಾಗುತ್ತದೆ. ವಿಶ್ವದ ವಿವಿಧ ಅಥ್ಲೀಟ್ ಗಳು, ಗಣ್ಯರು, ಕ್ರೀಡಾ ಉತ್ಸಾಹಿಗಳು ಈ ಇಂಡಿಯಾ ಹೌಸ್ ಗೆ ಭೇಟಿ ನೀಡುವ ನಿರೀಕ್ಷೆ ಇದೆ. ಇನ್ನು ಭಾರತದ ನೀತಿಯನ್ನು ವ್ಯಾಖ್ಯಾನಿಸುವ ಏಕತೆ, ವೈವಿಧ್ಯತೆ ಮತ್ತು ಶ್ರೇಷ್ಠತೆಯನ್ನು ಸಾರುವುದಕ್ಕೂ ಇದು ಸಹಕಾರಿ ಆಗುತ್ತದೆ.