ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ (KKR) ಐಪಿಎಲ್ 2024ಕ್ಕೆ (IPL 2024) ಕೆಲವೇ ದಿನಗಳು ಬಾಕಿ ಇರುವಂತೆಯೇ ಆಟಗಾರರೊಬ್ಬರನ್ನು ಬದಲಿಸಿದೆ. ಜೇಸನ್ ರಾಯ್ (Jason Roy) ಬದಲಿಗೆ ವಿಶ್ವದ ನಂಬರ್ 2 ಟಿ20 ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಹೆಸರಿಸಿದೆ. ಇಂಗ್ಲೆಂಡ್ ಆರಂಭಿಕ ಆಟಗಾರ ರಾಯ್ ವೈಯಕ್ತಿಕ ಕಾರಣಗಳನ್ನು ನೀಡಿ ಋತುವಿನಿಂದ ಹಿಂದೆ ಸರಿದಿದ್ದಾರೆ. ಇದು ಕೆಕೆಆರ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಹೊಸ ಐಪಿಎಲ್ ಋತುವಿನಲ್ಲಿ ಅವರ ಮೇಲೆ ಹೆಚ್ಚು ಅವಲಂಬಿತರಾಗಿದ್ದ ಫ್ರಾಂಚೈಸಿಗೆ ಇದು ದೊಡ್ಡ ಹೊಡೆತ. ಏತನ್ಮಧ್ಯೆ, ರಾಯ್ ಅವರ ಬದಲಿ ಆಟಗಾರನಾಗಿ ಬರಲಿರುವ ಫಿಲ್ ಸಾಲ್ಟ್ ಕಳೆದ ವರ್ಷ ಡಿಸೆಂಬರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ 20ಐ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ್ದರು.
🚨 NEWS 🚨
— IndianPremierLeague (@IPL) March 10, 2024
KKR name Phil Salt as replacement for Jason Roy.
Details 🔽 #TATAIPL | @KKRiders https://t.co/KjezlTn4b8
ಕೆಕೆಆರ್ ಈಗ ರಹಮಾನುಲ್ಲಾ ಗುರ್ಬಾಜ್ ಮತ್ತು ಸಾಲ್ಟ್ ಅವರ ನಡುವೆ ಆಯ್ಕೆ ಮಾಡಲಿದೆ. ಇಬ್ಬರೂ ವಿಕೆಟ್ಕೀಪರ್ ಬ್ಯಾಟರ್ಗಳು. ಬ್ಯಾಟ್ನೊಂದಿಗೆ ಸಾಲ್ಟ್ ಅವರ ಸ್ಫೋಟಕ ಸಾಮರ್ಥ್ಯವು ಕಳೆದ ಎರಡು ಋತುಗಳಿಂದ ತಮ್ಮ ಆರಂಭಿಕ ಸಂಯೋಜನೆಯನ್ನು ಬದಲಾಯಿಸುವಲ್ಲಿ ಕೆಕೆಆರ್ಗೆ ಉತ್ತಮ ಬದಲಿ ಆಯ್ಕೆಯಾಗಿದೆ.
ವೈಯಕ್ತಿಕ ಕಾರಣಗಳಿಂದಾಗಿ ಮುಂಬರುವ ಟಾಟಾ ಐಪಿಎಲ್ 2024 ರಿಂದ ಹೊರಗುಳಿದ ನಂತರ ಜೇಸನ್ ರಾಯ್ ಅವರ ಬದಲಿಯಾಗಿ ಕೋಲ್ಕತಾ ನೈಟ್ ರೈಡರ್ಸ್ ಫಿಲ್ ಸಾಲ್ಟ್ ಅವರನ್ನು ಹೆಸರಿಸಿದೆ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ ನಂತರ ಹರಾಜಿನಲ್ಲಿ ಮಾರಾಟವಾಗದೆ ಉಳಿದಿರುವ ಸಾಲ್ಸ್ಗೆ ಇದು ಐಪಿಎಲ್ನಲ್ಲಿ ಎರಡನೇ ಋತುವಾಗಿದೆ.
1.5 ಕೋಟಿ ರೂ.ಗಳ ಮೂಲ ಬೆಲೆಗೆ ಖರೀದಿಸಿದ ಇಂಗ್ಲೆಂಡ್ನ ಆಕ್ರಮಣಕಾರಿ ವಿಕೆಟ್ ಕೀಪರ್ ಬ್ಯಾಟರ್ ಕಳೆದ ವರ್ಷ ಡಿಸೆಂಬರ್ನರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸತತ ಎರಡು ಟಿ 20 ಐ ಶತಕಗಳನ್ನು ಗಳಿಸಿದ್ದಾರೆ. ಟ್ರಿನಿಡಾಡ್ನಲ್ಲಿ ನಡೆದ 4ನೇ ಟಿ 20 ಪಂದ್ಯದಲ್ಲಿ ಅವರು 48 ಎಸೆತಗಳಲ್ಲಿ ಶತಕ ಬಾರಿಸಿದ್ದು ಇಂಗ್ಲೆಂಡ್ ಪರ ಜಂಟಿ ವೇಗದ ಶತಕವಾಗಿದೆ, “ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಜೇಸನ್ ರಾಯ್ ಅವರನ್ನು ಕೆಕೆಆರ್ ಉಳಿಸಿಕೊಂಡಿತ್ತು. ಕಳೆದ ವರ್ಷ 8 ಪಂದ್ಯಗಳಲ್ಲಿ 35.63ರ ಸರಾಸರಿಯಲ್ಲಿ 285 ರನ್ ಗಳಿಸಿದ್ದರು ಅವರು. ಅವರು ಋತುವಿನಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದು, 151.60 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಸಮರ್ಥ ಆಟಗಾರ
ಸಾಲ್ಟ್ ತನ್ನ ಇಂಗ್ಲೆಂಡ್ ತಂಡದ ಸಹ ಆಟಗಾರನ ಸ್ಥಾನದಲ್ಲಿ ಬಹಳ ಸಮರ್ಥ ಬದಲಿ ಆಟಗಾರನಾಗಿ ಬರಲಿದ್ದಾರೆ. ಐಪಿಎಲ್ 2023 ರಲ್ಲಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೂಲ ಬೆಲೆ 1.5 ಕೋಟಿ ರೂ.ಗೆ ಖರೀದಿಸಿತು. ಕಳೆದ ಋತುವಿನಲ್ಲಿ ಅವರು 163.91 ಸ್ಟ್ರೈಕ್ ರೇಟ್ನಲ್ಲಿ 218 ರನ್ ಗಳಿಸಿದ್ದರು. ಬ್ಯಾಟಿಂಗ್ನಲ್ಲಿ ಅವರ ಸಾಧನೆಗಳ ಹೊರತಾಗಿಯೂ, ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಋತುವಿನಲ್ಲಿ ಅವರನ್ನು ಬಿಡುಗಡೆ ಮಾಡಿತ್ತು.
ಇದನ್ನೂ ಓದಿ : IPL 2024 : ಐಪಿಎಲ್ ಆಡುವ ಕುರಿತು ಹೊಸ ಅಪ್ಡೇಟ್ ನೀಡಿದ ಸೂರ್ಯಕುಮಾರ್ ಯಾದವ್ , ಏನದು?
ಇಸಿಬಿ ತನ್ನ ಕೆಲಸದ ಹೊರೆಯನ್ನು ನಿರ್ವಹಿಸಲು ಬಯಸಿದ್ದರಿಂದ ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ಐಪಿಎಲ್ 2024 ರಿಂದ ಹಿಂದೆ ಸರಿದಿದ್ದರು. ನಂತರ ಕೆಕೆಆರ್ ಅಟ್ಕಿನ್ಸನ್ ಬದಲಿಗೆ ದುಷ್ಮಂತ ಚಮೀರಾ ಅವರನ್ನು ಹೆಸರಿಸಿತ್ತು. ಇಂಗ್ಲೆಂಡ್ ವೇಗಿ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಪ್ರಯಾಣಿಸಿದ ತಂಡದ ಭಾಗವಾಗಿದ್ದರು ಆದರೆ ಯಾವುದೇ ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಐಪಿಎಲ್ನಲ್ಲಿ 12 ಪಂದ್ಯಗಳನ್ನಾಡಿರುವ ಚಮೀರಾ 8.73ರ ಎಕಾನಮಿ ರೇಟ್ನಲ್ಲಿ 9 ವಿಕೆಟ್ ಕಬಳಿಸಿದ್ದಾರೆ. ಚಮೀರಾ ಹೊರತುಪಡಿಸಿ, ನೈಟ್ ರೈಡರ್ಸ್ ತಂಡದಲ್ಲಿ ಮಿಚೆಲ್ ಸ್ಟಾರ್ಕ್ ಮಾತ್ರ ವಿದೇಶಿ ಮುಂಚೂಣಿ ವೇಗದ ಬೌಲರ್ ಆಗಿದ್ದಾರೆ.
ರಾಯ್ ಬಗ್ಗೆ ಹೇಳುವುದಾದರೆ, ಅವರು ಪ್ರಸ್ತುತ ಪಿಎಸ್ಎಲ್ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡುತ್ತಿದ್ದಾರೆ. ಅವರು ಏಳು ಪಂದ್ಯಗಳಲ್ಲಿ 33.00 ಸರಾಸರಿಯಲ್ಲಿ 231 ರನ್ ಗಳಿಸಿದ್ದಾರೆ ಮತ್ತು 149.03 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಬಾಂಗ್ಲಾದೇಶದ ನಾಯಕ ಶಕಿಬ್ ಹಿಂದೆ ಸರಿದಿದ್ದರಿಂದ ಅವರ ಬದಲಿಗೆ ರಾಯ್ ಸೇರಿದ್ದರು.
ಕೆಕೆಆರ್ ತಂಡ
ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಫಿಲ್ ಸಾಲ್ಟ್, ಸುನಿಲ್ ನರೈನ್, ಸುಯಾಶ್ ಶರ್ಮಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕೆಎಸ್ ಭರತ್, ಚೇತನ್ ಸಕಾರಿಯಾ, ಮಿಚೆಲ್ ಸ್ಟಾರ್ಕ್, ಆಂಗ್ರಿಶ್ ರಘುವಂಶಿ, ರಮಣ್ದೀಪ್ ಸಿಂಗ್, ಶೆರ್ಫೇನ್ ರುದರ್ಫೋರ್ಡ್, ಮನೀಶ್ ಪಾಂಡೆ, ಮುಜೀಬ್ ಉರ್ ರಹಮಾನ್, ದುಸ್ಮಂತ ಚಮೀರಾ.