ಬಾರ್ಬಡೋಸ್: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(Jay Shah) ಅವರು ಟಿ20 ವಿಶ್ವಕಪ್(T20 World Cup 2024 Final) ಟೂರ್ನಿಯ ಆರಂಭಕ್ಕೆ ತಂಡ ಪ್ರಕಟಿಸುವ ಮುನ್ನವೇ ಭಾರತ ತಂಡ ಜೂನ್ 29ರಂದು ಬಾರ್ಬಡೋಸ್ನಲ್ಲಿ ವಿಶ್ವಕಪ್ ಗೆಲ್ಲಲಿದೆ ಎಂದು ವೇದಿಯಲ್ಲಿ ಮಾತನಾಡುವ ವೇಳೆ ಬಹಿರಂಗವಾಗಿಯೇ ಭವಿಷ್ಯ(Jay Shah Promise) ನುಡಿದಿದ್ದರು. ಇದೀಗ ಅವರ ಹೇಳಿದಂತೆ ಭಾರತ ಕಪ್ ಗೆದ್ದು ಸಂಭ್ರಮಿಸಿದೆ. ಅಂದು ಜಯ್ ಶಾ ಹೇಳಿದ ಹೇಳಿದ ಈ ಭವಿಷ್ಯದ ವಿಡಿಯೊ ಇದೀಗ ವೈರಲ್(viral video) ಆಗಿದೆ.
ಅಂದು ಸಭೆಯಲ್ಲಿ ಮಾತನಾಡಿದ್ದ ಜಯ್ ಶಾ ಅವರು ನಾನು ಭರವಸೆ ನೀಡುತ್ತಿದ್ದೇನೆ. ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತ ತಂಡ ಜೂನ್ 29ರಂದು ಬಾರ್ಬಡೋಸ್ನಲ್ಲಿ ನಡೆಯುವ ಟಿ20 ವಿಶ್ವಕಪ್ ಫೈನಲ್ನಲ್ಲಿ ಪಕ್ ಗೆದ್ದು ವಿಂಡೀಸ್ನಲ್ಲಿ ತ್ರಿವರ್ಣ ಧ್ವಜ ರಾರಾಜಿಸಲಿದೆ ಎಂದು ಹೇಳಿದ್ದರು. ಇದೀಗ ಅವರು ನುಡಿದಂತೆ ಭಾರತ 17 ವರ್ಷಗಳ ಬಳಿಕ ಭಾರತ 2ನೇ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿದೆ.
ಚಾಂಪಿಯನ್(T20 World Cup Final) ಪಟ್ಟ ಅಲಂಕರಿಸಿದ ಭಾರತ ತಂಡಕ್ಕೆ (t20 world cup winner) ಮೊತ್ತದ $ 2.45 ಮಿಲಿಯನ್ ಯುಎಸ್ ಡಿ (20,42,49,000 ರೂ) ಬಹುಮಾನ(T20 World Cup 2024 Prize Money) ಮೊತ್ತ ಲಭಿಸಿದೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗೆ ನೀಡಲಾದ ಅತ್ಯಧಿಕ ಮೊತ್ತವಾಗಿದೆ. ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡಕ್ಕೆ 1,280,000 USD (10,68,06,400 ರೂ.) ಹಣ ದೊರೆಕಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಒಟ್ಟು ಬಹುಮಾನ ಮೊತ್ತ 11.25 ಮಿಲಿಯನ್ ಯುಸ್ ಡಾಲರ್ ಆಗಿತ್ತು.
ಇದನ್ನೂ ಓದಿ Rahul Dravid: ನಾಯಕನಾಗಿ ಸೋಲಿನ ಅವಮಾನ ಎದುರಿಸಿದ್ದ ಮೈದಾನದಲ್ಲೇ ಕೋಚ್ ಆಗಿ ವಿಶ್ವಕಪ್ ಎತ್ತಿ ಹಿಡಿದ ದ್ರಾವಿಡ್
ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು.
ದ್ರಾವಿಡ್ಗೆ ಸ್ಮರಣೀಯ ಬೀಳ್ಕೊಡುಗೆ
ನಾಯಕನಾಗಿ ಗೆಲ್ಲಲಾಗದ ವಿಶ್ವಕಪ್(T20 World Cup 2024) ಟ್ರೋಫಿಯನ್ನು ರಾಹುಲ್ ದ್ರಾವಿಡ್(Rahul Dravid) ಕೊನೆಗೂ ಭಾರತ ತಂಡದ ತರಬೇತುದಾರಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ. 2007ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಿಂದಲೇ ನಿರ್ಗಮಿಸಿತ್ತು. ದುರ್ಬಲ ಬಾಂಗ್ಲಾದೇಶ ವಿರುದ್ದವೂ ಕೂಡ ಗೆಲುವು ಸಾಧಿಸಲು ಸಾಧ್ಯವಾಗ ಅವಮಾನಕ್ಕೆ ಸಿಲುಕಿತ್ತು. ಅಂದು ಅವಮಾನ ಎದುರಿಸಿದ ವಿಂಡೀಸ್ ನೆಲದಲ್ಲೇ ಇದೀಗ ದ್ರಾವಿಡ್ ತರಬೇತುದಾರನಾಗಿ ಕಪ್ ಗೆದ್ದು ಸಂಭ್ರಮಿಸಿದ್ದಾರೆ.