ಬೆಂಗಳೂರು : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೆ ಸಾಕಷ್ಟು ಅಂತರ ಇರುವ ರೀತಿಯಲ್ಲಿ ಐಪಿಎಲ್ ಫೈನಲ್ ಪಂದ್ಯ ಆಯೋಜಿಸಲಾಗುವುದು ಎಂದು ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಫೈನಲ್ನಲ್ಲಿ ಆಡಿ ಹೆಚ್ಚು ದಿನಗಳ ಅಂತರವಿಲ್ಲದೇ ಡಬ್ಲ್ಯುಟಿಸಿಗೆ ಹೋದ ಭಾರತವು ಗೆಲ್ಲಲು ವಿಫಲವಾದ ನಂತರ ಐಪಿಎಲ್ ವೇಳಾಪಟ್ಟಿಯನ್ನು ತೀವ್ರವಾಗಿ ಟೀಕೆಗೆ ಒಳಪಟ್ಟಿತ್ತು. ಹೀಗಾಗಿ ಬಿಸಿಸಿಐ ವೇಳಾಪಟ್ಟಿಯನ್ನು ಹೆಚ್ಚು ದಿನಗಳ ಅಂತರದೊಂದಿಗೆ ಮಾಡಲು ಮುಂದಾಗಿದೆ.
Jay Shah confirms a 15 day break at least between IPL Final and WTC Final. (TOI). pic.twitter.com/UAPUsSuepg
— Mufaddal Vohra (@mufaddal_vohra) August 15, 2024
ಜಯ್ ಶಾ ಐಪಿಎಲ್ ಫೈನಲ್ ಮತ್ತು ಡಬ್ಲ್ಯುಟಿಸಿ ಫೈನಲ್ ನಡುವೆ 15 ದಿನಗಳ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಐಪಿಎಲ್ ವೇಳಾಪಟ್ಟಿಯನ್ನು ಲೆಕ್ಕಿಸದೆ ತಂಡವು ಯಾವಾಗಲೂ ಸಮಯಕ್ಕೆ ಸರಿಯಾಗಿ ಫೈನಲ್ ಪಂದ್ಯಕ್ಕೆ ತಲುಪಿತ್ತು ಬಿಸಿಸಿಐ ಕಾರ್ಯದರ್ಶಿ ಶಾ ಸಮರ್ಥಿಸಿಕೊಂಡಿದ್ದರು. ಇಲ್ಲಿಯವರೆಗೆ ಎರಡೂ ಸಂದರ್ಭಗಳಲ್ಲಿ ಫೈನಲ್ ತಲುಪಿದ್ದಕ್ಕಾಗಿ ತಂಡವನ್ನು ಶ್ಲಾಘಿಸಿದ್ದಾರೆ.
ಹಿಂದಿನ ಎರಡು ಡಬ್ಲ್ಯುಟಿಸಿ ಫೈನಲ್ಸ್ಗೆ ತಂಡ ತಡವಾಗಿ ತಲುಪಿರಲಿಲ್ಲ. ನಮಗೆ ಬೇರೆ ಆಯ್ಕೆ ಇರಲಿಲ್ಲ. ಇಂದಿನಿಂದ, ಐಪಿಎಲ್ ಅಂತ್ಯ ಮತ್ತು ಡಬ್ಲ್ಯುಟಿಸಿ ಫೈನಲ್ ನಡುವೆ ನಾವು 15 ದಿನಗಳ ಅಂತರವನ್ನು ಪಡೆಯಲಿದ್ದೇವೆ. ನಾವು ಎರಡು ಬಾರಿ ಫೈನಲ್ಗೆ ಅರ್ಹತೆ ಪಡೆದಿದ್ದೇವೆ ಎಂಬ ಅಂಶವನ್ನು ನಾವು ಅರಿಯಬೇಕು ” ಎಂದು ಜಯ್ ಶಾ ಹೇಳಿದ್ದಾರೆ.
ಜೂನ್ 18 ರಿಂದ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ 2021ಗಾಗಿ ಭಾರತ ಜೂನ್ 3 ರಂದು ಇಂಗ್ಲೆಂಡ್ ತಲುಪಿತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ತಂಡವು ಪಂದ್ಯಕ್ಕೆ ಮುಂಚಿತವಾಗಿ ಇಂಟ್ರಾ ಸ್ಕ್ವಾಡ್ ಪಂದ್ಯವನ್ನು ಆಡಿತ್ತು . ಆದಾಗ್ಯೂ, ಫೈನಲ್ನಲ್ಲಿ ಎಂಟು ವಿಕೆಟ್ಗಳಿಂದ ಸೋತು ಟೆಸ್ಟ್ ಕ್ರಿಕೆಟ್ನ ಮೊದಲ ಚಾಂಪಿಯನ್ ಪಟ್ಟ ಪಡೆಯುವ ಅವಕಾಶವನ್ನು ಅವರು ಕಳೆದುಕೊಂಡಿತ್ತು.
ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಭಾರತಕ್ಕೆ ಅಗ್ರಸ್ಥಾನ
2023 ರಲ್ಲಿ ಆಡಿದ ಎರಡನೇ ಫೈನಲ್ನಲ್ಲಿ ಆಟಗಾರರು ಐಪಿಎಲ್ ಪ್ಲೇಆಫ್ನಿಂ ತಮ್ಮ ತಂಡದ ನಾಕೌಟ್ ಪಂದ್ಯಗಳನ್ನು ಅವಲಂಬಿಸಿ ಬ್ಯಾಚ್ಗಳಲ್ಲಿ ಇಂಗ್ಲೆಂಡ್ ತಲುಪಿದ್ದರು ಜೂನ್ 7ರಿಂದ ಫೈನಲ್ ಪ್ರಾರಂಭಗೊಂಡಿತ್ತು ಹಾಗೂ 2021 ಕ್ಕೆ ಹೋಲಿಸಿದರೆ ತಯಾರಿ ನಡೆಸಲು ಕಡಿಮೆ ಸಮಯ ಸಿಕ್ಕಿತು. ರೋಹಿತ್ ಶರ್ಮಾ ನೇತೃತ್ವದ ತಂಡವು 209 ರನ್ಗಳಿಂದ ಆಸ್ಟ್ರೇಲಿಯಾ ವಿರುದ್ಧ ಪಂದ್ಯವನ್ನು ಕಳೆದುಕೊಂಡಿತು. ಡಬ್ಲ್ಯುಟಿಸಿ ಪ್ರಶಸ್ತಿ ಗೆಲ್ಲುವ ಸತತ ಎರಡನೇ ಅವಕಾಶವನ್ನು ವ್ಯರ್ಥ ಮಾಡಿಕೊಂಡಿತು.
ಡಬ್ಲ್ಯುಟಿಸಿ ಫೈನಲ್ 2025 ರ ದಿನಾಂಕ ಪ್ರಕಟಗೊಂಡಿಲ್ಲ. ಆದರೆ ಪಂದ್ಯವು ಜೂನ್ನಲ್ಲಿ ನಡೆಯುವ ಸಾಧ್ಯತೆಯಿದೆ. 68.51 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಮತ್ತೊಮ್ಮೆ ಫೈನಲ್ ತಲುಪುವ ನೆಚ್ಚಿನ ತಂಡವಾಗಿದೆ. ಸತತ ಮೂರನೇ ಬಾರಿಗೆ ಅರ್ಹತೆ ಪಡೆದರೆ ಟೀಮ್ ಇಂಡಿಯಾ ದೊಡ್ಡ ಪಂದ್ಯಕ್ಕೆ ತಮ್ಮನ್ನು ಸಿದ್ಧಪಡಿಸಲು ಸಾಕಷ್ಟು ಸಮಯ ದೊರೆಯಬಹುದು.