Site icon Vistara News

Jay Shah : ”ನಾನವನಲ್ಲ, ನಾನವನಲ್ಲ”; ಶ್ರೇಯಸ್​, ಇಶಾನ್ ವಿವಾದಕ್ಕೆ ಸ್ಪಷ್ಟನೆ ನೀಡಿದ ಜಯ್​ ಶಾ

Jay Shah

ಬೆಂಗಳೂರು: ಎಡಗೈ ವಿಕೆಟ್​ಕೀಪರ್ ಬ್ಯಾಟರ್​ ಇಶಾನ್ ಕಿಶನ್ (Ishan Kishan) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಶಕ್ತಿ ಶ್ರೇಯಸ್ ಅಯ್ಯರ್ (Shreya Iyer) ಅವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ (BCCI Central Contract list) ಕೈಬಿಡಲು ನಿರ್ಧರಿಸಿದವರು ಯಾರು ಎಂಬುದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಬಹಿರಂಗಪಡಿಸಿದ್ದಾರೆ. ದೇಶೀಯ ಕ್ರಿಕೆಟ್ ಆಡಲು ಬಿಸಿಸಿಐ ಮತ್ತು ಭಾರತ ತಂಡದ ಮ್ಯಾನೇಜ್ಮೆಂಟ್​​ನ ನಿರ್ದೇಶನವನ್ನು ಈ ಆಟಗಾರರು ನಿರ್ಲಕ್ಷಿಸಿದ ನಂತರ ಇದನ್ನು ಮಾಡಲಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳ ಬಳಿಕ ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದ ಬಳಲುತ್ತಿದ್ದರು. ಮುಂದಿನ ಮೂರು ಟೆಸ್ಟ್ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಿರಲಿಲ್ಲ. ಅಯ್ಯರ್ ಅವರು ತಮ್ಮ ತವರಿನ ಮುಂಬೈ ತಂಡವು ರಣಜಿ ಟ್ರೋಫಿ ಪಂದ್ಯವನ್ನು ಆಡುವಲ್ಲಿ ನಿರತರಾಗಿದ್ದಾಗ ಮುಂಬೈನಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ಶಿಬಿರದಲ್ಲಿ ಭಾಗವಹಿಸಿದ್ದರು ಎಂದು ಆರೋಪಿಸಲಾಗಿದೆ.

ವಿಚಾರ ಬಹಿರಂಗಗೊಂಡಿ ಅಯ್ಯರ್ ನಾಕೌಟ್ ಹಂತಗಳಲ್ಲಿ ಮುಂಬೈ ಪರ ಆಡಿದ್ದರೂ, ಅವರನ್ನು ಬಿಸಿಸಿಐ ಕೇಂದ್ರ ಒಪ್ಪಂದಗಳಲ್ಲಿ ಆಯ್ಕೆ ಮಾಡಲಾಗಿಲ್ಲ.

ನೆಪ ಹೇಳಿದ್ದ ಇಶಾನ್​

ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದಿರುಗಿದ ನಂತರ ಇಶಾನ್ ಕಿಶನ್ ಮಾನಸಿಕ ಆರೋಗ್ಯ ವಿರಾಮದಲ್ಲಿದ್ದರು. ಆಯ್ಕೆಗಾಗಿ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮುಂಚಿತವಾಗಿ ರಣಜಿ ಟ್ರೋಫಿ ಆಡುವಂತೆ ಭಾರತ ತಂಡದ ಮ್ಯಾನೇಜ್ಮೆಂಟ್ ಒತ್ತಾಯಿಸಿದ ಹೊರತಾಗಿಯೂ ಅವರು ಬಿಸಿಸಿಐ ಮತ್ತು ಅವರ ತವರಿನ ರಾಜ್ಯ ಮಂಡಳಿ ಜಾರ್ಖಂಡ್​ ಕ್ರಿಕೆಟ್​ ಸಂಸ್ಥೆ ಯಾವುದೇ ಸಂಪರ್ಕ ಸಾಧಿಸಿರಲಿಲ್ಲ.

ಅವರು ಐಪಿಎಲ್ 2024 ಕ್ಕೆ ಮುಂಚಿತವಾಗಿ ಕ್ರಿಕೆಟ್​ಗೆ ಮರಳಿದ್ದರು. ಇದರರ್ಥ ಇಬ್ಬರೂ ಆಟಗಾರರನ್ನು ಬಿಸಿಸಿಐ ಕೇಂದ್ರ ಗುತ್ತಿಗೆ ಆಟಗಾರರ ಪಟ್ಟಿಯಿಂದ ಹೊರಗಿಡಲಾಗಿದೆ.

ಇದು ಅಗರ್ಕರ್ ನಿರ್ಧಾರ

ಈ ವರ್ಷದ ಬಿಸಿಸಿಐ ಕೇಂದ್ರ ಒಪ್ಪಂದದಿಂದ ಭಾರತದ ಆಟಗಾರರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡುವ ನಿರ್ಧಾರವನ್ನು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತೆಗೆದುಕೊಂಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ.

“ನೀವು ಸಂವಿಧಾನವನ್ನು ಪರಿಶೀಲಿಸಬಹುದು. ನಾನು ಆಯ್ಕೆ ಸಭೆಯ ಸಂಚಾಲಕನಾಗಿದ್ದೇನೆ. ಆ ನಿರ್ಧಾರವು ಅಜಿತ್ ಅಗರ್ಕರ್ ಅವರಿಗೆ ಸಂಬಂಧಿಸಿದ್ದು. ಈ ಇಬ್ಬರು ಆಟಗಾರರು (ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್) ದೇಶೀಯ (ಕ್ರಿಕೆಟ್) ಆಡದ ಕಾರಣ ಅವರನ್ನು (ಕೇಂದ್ರ ಗುತ್ತಿಗೆ ಪಟ್ಟಿಯಿಂದ) ಕೈಬಿಡುವ ನಿರ್ಧಾರವು ಅವರದಾಗಿತ್ತು ಎಂದು ಶಾ ಹೇಳಿದ್ದಾರೆ.

ಇದನ್ನೂ ಓದಿ: Rahul Dravid : ವಿಶ್ವ ಕಪ್​ ಬಳಿಕ ದ್ರಾವಿಡ್​ ಭಾರತದ ಕೋಚ್ ಅಗಿರುವುದಿಲ್ಲ; ಮುಂದೆ ಯಾರು?

ನನ್ನ ಪಾತ್ರ ಕೇವಲ ಕಾರ್ಯಗತಗೊಳಿಸುವುದಾಗಿದೆ. ಸಂಜು ಸ್ಯಾಮ್ಸನ್ ಅವರಂತಹ ಹೊಸ ಆಟಗಾರರನ್ನು ನಾವು ಹೊಂದಿದ್ದೇವೆ. ಹೀಗಾಗಿ ಯಾರೂ ಅನಿವಾರ್ಯವಲ್ಲ, “ಎಂದು ಜಯ್ ಶಾ ಗುರುವಾರ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಹೌದು, ನಾನು ಆಟಗಾರರೊಂದಿಗೆ ಮಾತನಾಡಿದ್ದೇನೆ. ಮಾಧ್ಯಮಗಳು ಸಹ ವರದಿಗಳನ್ನು ಪ್ರಸಾರ ಮಾಡಿದ್ದವು” ಎಂದು ಅವರು ಹೇಳಿದರು. ಬಿಸಿಸಿಐ ತನ್ನನ್ನು ವೈಟ್ ಬಾಲ್ ಸ್ವರೂಪಕ್ಕೆ ಮಾತ್ರ ಪರಿಗಣಿಸಿದರೆ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವುದಾಗಿ ಹಾರ್ದಿಕ್ ಪಾಂಡ್ಯ ನನಗೆ ಹೇಳಿದ್ದಾರೆ ಎಂದೂ ಶಾ ಹೇಳಿದರು.

ಮುಂಬಯಿ ತಂಡಕ್ಕೆ ಆಡಲಿ

ಐಪಿಎಲ್​​ನಲ್ಲಿ ಯಾರು ಉತ್ತಮವಾಗಿ ಆಡುತ್ತಾರೋ ಅವರು ಮುಂದುವರಿಯುತ್ತಾರೆ ಎಂಬುದು ತಪ್ಪು. ಇಶಾನ್ ಕಿಶನ್ ಅವರಂತೆ ಹಾರ್ದಿಕ್​ ಪಾಂಡ್ಯ ಭಾರತ ತಂಡದೊಂದಿಗೆ ಭಾಗವಹಿಸಲು ಕಷ್ಟಪಡುತ್ತಾರೆ. ಅವರು ಮುಂಬೈ ಇಂಡಿಯನ್ಸ್​ನಲ್ಲಿ ಆಟಗಾರನಾಗಿ ಆಡುತ್ತಿದ್ದಾರೆ. ಯಾರೇ ಆದರೂ ಟೀಮ್ ಇಂಡಿಯಾದಲ್ಲಿ ನೀವು ನಿಮ್ಮನ್ನು ಸಾಬೀತುಪಡಿಸಬೇಕು ಮತ್ತು ಬ್ಯಾಕ್ ಟು ಬ್ಯಾಕ್ ಪ್ರದರ್ಶನವನ್ನು ನೀಡಬೇಕು. ಅದನ್ನು ನಿಭಾಯಿಸಬಲ್ಲ ವ್ಯಕ್ತಿಯನ್ನು ಸರಿಯಾದ ಆಟಗಾರ ಎಂದು ವಿವರಿಸಬಹುದು, “ಎಂದು ಅವರು ಹೇಳಿದರು.

ಗುಜರಾತ್ ಟೈಟಾನ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್ ಪಂದ್ಯದ ನಂತರ ಕಿಶನ್ ಅವರೊಂದಿಗಿನ ಸಂಭಾಷಣೆಯ ವಿವರಗಳನ್ನು ಶಾ ಬಹಿರಂಗಪಡಿಸಿದರು. ಇಲ್ಲ, ನಾನು ಇಶಾನ್​ಗೆ ಯಾವ ಸಲಹೆಯನ್ನೂ ನೀಡಿಲ್ಲ. ಅವರು ಉತ್ತಮವಾಗಿ ಆಡಬೇಕು ಎಂದು ಹೇಳಿದ್ದೆ. ಮತ್ತು ನಾನು ಎಲ್ಲಾ ಆಟಗಾರರೊಂದಿಗೆ ಆ ರೀತಿ ಮಾತನಾಡುತ್ತೇನೆ “ಎಂದು ಜಯ್​ ಶಾ ಹೇಳಿದರು.

Exit mobile version