Site icon Vistara News

ವಿಸ್ತಾರ ನ್ಯೂಸ್ ಕಚೇರಿಗೆ ಜೆ ಡಿ ಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಭೇಟಿ

JDS State President CM Ibrahim visits Vistar News office

#image_title

ಬೆಂಗಳೂರು: ಜೆ ಡಿ ಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ (JDS STATE PRESIDENT) ಅವರು ವಿಸ್ತಾರ ನ್ಯೂಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್ ನ ಸುದ್ದಿ ಗುಣಮಟ್ಟದ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು.

ವಿಸ್ತಾರ ನ್ಯೂಸ್ ನಿಷ್ಪಕ್ಷಪಾತವಾಗಿ ಸುದ್ದಿಗಳನ್ನು ನಿರೂಪಿಸುತ್ತಿರುವುದನ್ನು ಗಮನಿಸಿದ್ದೇನೆ. ವಿಸ್ತಾರ ಮೀಡಿಯಾ ಸಂಸ್ಥೆಯ ನ್ಯೂಸ್ ವೆಬ್ ಸೈಟ್ ಮತ್ತು ಯುಟ್ಯೂಬ್ ಚಾನೆಲ್ ಗಳು ಕೂಡ ವಿಭಿನ್ನತೆಯಿಂದ ಕೂಡಿವೆ ಎಂದು ಇಬ್ರಾಹಿಂ ಹೇಳಿದರು.

ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ಇಬ್ರಾಹಿಂ ಅವರಿಗೆ ವಿಸ್ತಾರ ನ್ಯೂಸ್ ನ ಅತ್ಯಾಧುನಿಕ ಸ್ಟುಡಿಯೋವನ್ನು ಪರಿಚಯಿಸಿದರು.

ಸಿ ಎಂ ಇಬ್ರಾಹಿಂ ಅವರನ್ನು ಹೂಗುಚ್ಛ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್ ಸಂಪಾದಕ ಶರತ್ ಎಂ ಎಸ್, ಸಿಒಒ ಪರಶುರಾಮ್, ಇನ್ ಪುಟ್ – ಔಟ್ ಪುಟ್ ಮುಖ್ಯಸ್ಥ ಮಂಜುನಾಥ್ ಪಿ, ವಿಸ್ತಾರ ನ್ಯೂಸ್ ಡಿಜಿಟಲ್ ಸಂಪಾದಕ ರಮೇಶ್ ಕುಮಾರ್ ನಾಯಕ್, ಸ್ಪೆಷಲ್ ಆಪರೇಷನ್ ಎಡಿಟರ್ ಕಿರಣ್ ಕುಮಾರ್ ಡಿ ಕೆ, ರಾಜಕೀಯ ವಿಭಾಗದ ಮುಖ್ಯಸ್ಥ ಮಾರುತಿ ಪಾವಗಡ ಮತ್ತಿತರರು ಹಾಜರಿದ್ದರು.

Exit mobile version