Site icon Vistara News

Martand Sun temple : ಜಮ್ಮು-ಕಾಶ್ಮೀರದಲ್ಲಿರುವ ಅತ್ಯಂತ ಪುರಾತನ ಸೂರ್ಯ ದೇವಸ್ಥಾನಕ್ಕೆ ನೀವು ಹೋಗಬಹುದು? ಹೇಗೆ ಗೊತ್ತಾ?

Surya temple

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಅನಂತ್​ನಾಗ್​ನಲ್ಲಿರುವ (Anantnag) 8ನೇ ಶತಮಾನದ ಮಾರ್ತಾಂಡ ಸೂರ್ಯ ದೇವಾಲಯ (Martand Sun temple) ಇನ್ನು ಕೆಲವೇ ದಿನಗಳಲ್ಲಿ ಭಕ್ತರ ದರ್ಶನಕ್ಕೆ ಸಿದ್ದಗೊಳ್ಳಲಿದೆ. ಶತಮಾನಗಳ ಹಿಂದೆ ಸುಲ್ತಾನ್ ಸಿಕಂದರ್ ಷಾ ಮಿರಿ ಈ ದೇಗುಲವನ್ನು ನಾಶ ಮಾಡಿದ್ದ. ಅದರ ಜೀರ್ಣೋದ್ಧಾರ ಕಾರ್ಯ ಮುಕ್ತಾಯಗೊಂಡಿದ್ದು ಭಕ್ತರ ಭೇಟಿಗೆ ಅನುಕೂಲ ಮಾಡಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಸೋಮವಾರ ನಡೆಯಲಿರುವ ಸರ್ಕಾರಿ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ದೇವಾಲಯದ ರಕ್ಷಣೆ ಹಾಗೂ ಭಕ್ತರ ಭದ್ರತೆ ಕುರಿತು ತೀರ್ಮಾನವಾಗಲಿದೆ. ಅಧಿಕಾರಿಗಳ ಒಪ್ಪಿಗೆ ಬಳಿಕ ಪ್ರವಾಸಿಗರು ಈ ದೇಗುಲಕ್ಕೆ ಭೇಟಿ ನೀಡಬಹುದು. ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಹೆಚ್ಚಿರುವ ಈ ಪ್ರದೇಶದಲ್ಲಿ ಭಕ್ತರ ರಕ್ಷಣೆಗೆ ಸರ್ಕಾರ ಹೊಣೆ ವಹಿಸಿಕೊಳ್ಳಲಿದೆ.

ಸಭೆಯ ಬಗ್ಗೆ ಮಾಹಿತಿ ನೀಡುವ ಅಧಿಕೃತ ನೋಟಿಸ್ ಪ್ರಕಾರ, ಮಾರ್ತಾಂಡ ಸೂರ್ಯ ದೇವಾಲಯದ ಆವರಣದಲ್ಲಿ ಚಕ್ರವರ್ತಿ ಲಲಿತಾದಿತ್ಯ ಮುಕ್ತಪಾದ ಅವರ ಪ್ರತಿಮೆಯೂ ಸ್ಥಾಪನೆಯಾಗಲಿದೆ.

“ಕಾಶ್ಮೀರದ ಪ್ರಾಚೀನ ದೇವಾಲಯಗಳ ರಕ್ಷಣೆ / ಸಂರಕ್ಷಣೆ / ಪುನಃಸ್ಥಾಪನೆಗೆ ಸಂಬಂಧಿಸಿದ ವಿಷಯದ ಬಗ್ಗೆ ಚರ್ಚಿಸಲು ಸಂಸ್ಕೃತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಭೆ ನಡೆಸಲಿದ್ದಾರೆ, ಅನಂತ್​ನಾಗ್​ನಲ್ಲಿರುವ ಮಾರ್ತಾಂಡ ಸೂರ್ಯ ದೇವಾಲಯದ ಆವರಣದಲ್ಲಿ, ಜಮ್ಮುವಿನ ಸಿವಿಲ್ ಸೆಕ್ರೆಟರಿಯೇಟ್​ ಕಚೇರಿ ಕೊಠಡಿಯಲ್ಲಿ (ಕೊಠಡಿ ಸಂಖ್ಯೆ 2/40) ಏಪ್ರಿಲ್​ 1ರಂದು ಮಧ್ಯಾಹ್ನ ಸಭೆ ನಡೆಯಲಿದೆ.

ಮಾರ್ತಾಂಡ ದೇವಾಲಯದ ಬಗ್ಗೆ

ಈ ಭವ್ಯವಾದ ದೇವಾಲಯವನ್ನು 8 ನೇ ಶತಮಾನದ ರಾಜ ಲಲಿತಾದಿತ್ಯ ಮುಕ್ತಪಾದ ನಿರ್ಮಿಸಿದ್ದು, ಇದು ಭಾರತದ ಅತ್ಯಂತ ಹಳೆಯ ಸೂರ್ಯ ದೇವಾಲಯವಾಗಿದೆ. ಎಎಸ್ಐ ಸಂರಕ್ಷಿತ ಸ್ಮಾರಕವು ಅಮೂಲ್ಯವಾದ ಪ್ರಾಚೀನ ಆಧ್ಯಾತ್ಮಿಕ ಪರಂಪರೆಯ ಸಂಕೇತವಾಗಿದೆ. 1200 ವರ್ಷಗಳಷ್ಟು ಹಳೆಯದಾದ ಈ ಭವ್ಯ ದೇವಾಲಯವನ್ನು ಸುಲ್ತಾನ್ ಸಿಕಂದರ್ ಷಾ ಮಿರಿ ಆದೇಶದ ಮೇರೆಗೆ ನಾಶಪಡಿಸಲಾಗಿದೆ ಎಂದು ನಂಬಲಾಗಿದೆ. ರಾಜ ಲಲಿತಾದಿತ್ಯನು ಏಳನೇ ಶತಮಾನದಲ್ಲಿ ಕಾಶ್ಮೀರವನ್ನು ಆಳಿದ ಕಾರ್ಕೋಟಾ ರಾಜವಂಶಕ್ಕೆ ಸೇರಿದವನು. ಜಮ್ಮು ಕಾಶ್ಮೀರದ ಇತಿಹಾಸದ ಸುತ್ತ ಸುತ್ತುವ ರಾಜತರಂಗಿಣಿ ಮಹಾಕಾವ್ಯವು ಕಾರ್ಕೋಟ ರಾಜವಂಶದ ಉಲ್ಲೇಖ ಹೊಂದಿದೆ.

ಇದನ್ನೂ ಓದಿ: Ayodhya Ram Mandir: ಹತ್ತಿ ಬಟ್ಟೆಯಲ್ಲಿ ಕಂಗೊಳಿಸಿದ ಅಯೋಧ್ಯೆಯ ಬಾಲಕ ರಾಮ; ಫೋಟೊ ಇಲ್ಲಿದೆ

ರಾಮಮಂದಿರದಲ್ಲಿದೆ ಇಲ್ಲಿನ ಕಲಶ

ಜನವರಿಯಲ್ಲಿ ಅಯೋಧ್ಯೆಯ ರಾಮ ದೇವಾಲಯದ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಮೊದಲು ಮಾರ್ತಾಂಡ ಸೂರ್ಯ ದೇವಾಲಯದಿಂದ ಕಲಶವನ್ನು ಸ್ಥಾಪಿಸಲಾಗಿತ್ತು. ಉತ್ತರ ಪ್ರದೇಶ ಮತ್ತು ತಮಿಳುನಾಡಿನ ಭಕ್ತರ ಸಮ್ಮುಖದಲ್ಲಿ ಸ್ಥಳೀಯ ಜನರು ‘ಕಲಶ’ವನ್ನು ಸ್ಥಾಪಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೂರ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಸುಮಾರು ಒಂದು ತಿಂಗಳ ನಂತರ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಶ್ರೀ ಮಾರ್ತಾಂಡ್ ತೀರ್ಥ ಟ್ರಸ್ಟ್ ಆಯೋಜಿಸಿದ್ದ ಮಹಾಯಜ್ಞದಲ್ಲಿ ಅವರು ಭಾಗವಹಿಸಿದ್ದರು.

Exit mobile version