Site icon Vistara News

Joe Root : ವೆಸ್ಟ್​ ಇಂಡೀಸ್ ವಿರುದ್ಧ ಶತಕ ಬಾರಿಸಿ ಸ್ಟೀವ್​ ವಾ ದಾಖಲೆ ಸರಿಗಟ್ಟಿದ ಜೋ ರೂಟ್​

Joe Root

ಬೆಂಗಳೂರು: ಇಂಗ್ಲೆಂಡ್​​ನ ನಾಟಿಂಗ್ಹಮ್​ ಟ್ರೆಂಟ್ ಬ್ರಿಜ್​​ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಇಂಗ್ಲೆಂಡ್​​ನ ಸ್ಟಾರ್ ಬ್ಯಾಟರ್​ ಜೋ ರೂಟ್ (Joe Root ) ತಮ್ಮ 32 ನೇ ಟೆಸ್ಟ್ ಶತಕ ದಾಖಲಿಸಿದ್ದಾರೆ. ಇಂಗ್ಲೆಂಡ್​​ನ ಮಾಜಿ ನಾಯಕ ದಿನದ ಎರಡನೇ ಸೆಷನ್​​ನಲ್ಲಿ ಅವರು ಶತಕ ದಾಖಲಿಸಿದರು. ಈ ಮೂಲಕ ಅವರು ಆಸ್ಟ್ರೇಲಿಯಾದ ಕ್ರಿಕೆಟ್​ ದಿಗ್ಗಜ ಸ್ಟೀವ್​ ವಾ ಅವರ 32ಟೆಸ್ಟ್​ ಶತಕದ ದಾಖಲೆ ಮುರಿದರು.

ಸ್ಟೀವ್ ವಾ ಅವರಲ್ಲದೆ, ಹಾಲಿ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಅವರೊಂದಿಗೆ ರೂಟ್ ಸಾರ್ವಕಾಲಿಕ ಶತಕಗಳ ಪಟ್ಟಿಯಲ್ಲಿ ಸರಿಗಟ್ಟಿದರು. ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಅಲಸ್ಟೇರ್ ಕುಕ್ (33 ಶತಕಗಳು) ಅವರಿಗಿಂತ ಹಿಂದಿದ್ದಾರೆ. ಅಗ್ರಸ್ಥಾನಕ್ಕೆ ಏರಿಸಲು 33 ವರ್ಷದ ಅವರಿಗೆ ಒಂದು ಶತಕ ಬೇಕಾಗಿದೆ.

ಮೂರನೇ ದಿನ ಇಂಗ್ಲೆಂಡ್ 127 ರನ್​​ ಗಳಿಸುವಷ್ಟರಲ್ಲಿ ಒಲಿ ಪೋಪ್ (51 ರನ್​) ಅವರನ್ನು ಕಳೆದುಕೊಂಡ ನಂತರ ಅವರು ಕ್ರೀಸ್​ಗೆ ಬಂದ ರೂಟ್​​ , ಹ್ಯಾರಿ ಬ್ರೂಕ್ ಅವರೊಂದಿಗೆ ನಿರ್ಣಾಯಕ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಜೇಡನ್ ಸೀಲ್ಸ್ ಅವರ ಆರನೇ ಎಸೆತದಲ್ಲಿ ಬೌಂಡರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. ನಂತರ ಅವರು ಸ್ಟ್ರೈಕ್ ಅನ್ನು ಬದಲಾಯಿಸುವುದನ್ನು ಮುಂದುವರೆಸಿದರು. ಹ್ಯಾರಿ ಬ್ರೂಕ್ ಅವರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಇವರಿಬ್ಬರು ಯಾವುದೇ ವಿಕೆಟ್ ಕಳೆದುಕೊಳ್ಳದೆ ದಿನದ ಅಂತ್ಯದ ತನಕ ಆಡಿದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ ಸ್ಪರ್ಧೆಗೆ ಹೊರಟಿರುವ ಅಥ್ಲೀಟ್​ಗೆ 8.5 ಕೋಟಿ ರೂ. ಪ್ರೋತ್ಸಾಹಧನ ನೀಡಿದ ಬಿಸಿಸಿಐ

4 ನೇ ದಿನದಂದು, ಅವರು 37 ರನ್​ಗಳಿಂದ ತಮ್ಮ ಇನ್ನಿಂಗ್ಸ್ ಅನ್ನು ಮುಂದುವರಿಸಿದರು. ಅವರು ಮೊದಲ ಸೆಷನ್​ನಲ್ಲಿ 91 ಎಸೆತಗಳಲ್ಲಿ 63 ನೇ ಅರ್ಧಶತಕವನ್ನು ಗಳಿಸಿದರು, ಸಚಿನ್ ತೆಂಡೂಲ್ಕರ್ (68) ಮತ್ತು ಶಿವನಾರಾಯಣ್ ಚಂದ್ರಪಾಲ್ (66) ನಂತರ ಟೆಸ್ಟ್​​ನಲ್ಲಿ ಅತಿ ಹೆಚ್ಚು ಅರ್ಧಶತಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದರು.

ಟೆಸ್ಟ್ ಕ್ರಿಕೆಟ್​​ನಲ್ಲಿ 5ನೇ ಶತಕ ಸಿಡಿಸಿದ ಹ್ಯಾರಿ ಬ್ರೂಕ್

ಟೆಸ್ಟ್ ಕ್ರಿಕೆಟ್​್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಚಂದ್ರಪಾಲ್ (11,867 ರನ್) ಅವರನ್ನು ಹಿಂದಿಕ್ಕಿದ್ದಾರೆ. ಕುಕ್, ಆಂಡ್ರ್ಯೂ ಸ್ಟ್ರಾಸ್, ಅಲನ್ ಲ್ಯಾಂಬ್ ಮತ್ತು ಕಾಲಿನ್ ಕೌಡ್ರಿ ಅಗ್ರಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಅವರು ತಮ್ಮ ಆರನೇ ಟೆಸ್ಟ್ ಶತಕ ದಾಖಲಿಸಿದ್ದಾರೆ. ಟ್ರೆಂಟ್ ಬ್ರಿಜ್​​ನಲ್ಲಿ ಮೈಕ್ ಅಥರ್ಟನ್ ಮತ್ತು ಡೆನಿಸ್ ಕಾಂಪ್ಟನ್ ಅವರೊಂದಿಗೆ ಸಮಬಲ ಸಾಧಿಸಿದ ಸ್ಟಾರ್ ಬ್ಯಾಟರ್​​ ಇದು ಐದನೇ ಟೆಸ್ಟ್ ಶತಕ ಇದಾಗಿದೆ.

ರೂಟ್ ಐದನೇ ವಿಕೆಟ್​ಗೆ ಹ್ಯಾರಿ ಬ್ರೂಕ್ ಅವರೊಂದಿಗೆ 189 ರನ್​​ಗಳನ್ನು ಸೇರಿಸಿದರು. ಅವರು ತಮ್ಮ ಐದನೇ ಟೆಸ್ಟ್ ಶತಕ ಬಾರಿಸಿದರು. ಅವರಿಬ್ಬರ ಬೃಹತ್ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ನಾಲ್ಕನೇ ಇನ್ನಿಂಗ್ಸ್​​ನಲ್ಲಿ 350 ರನ್​ಗಳ ಮುನ್ನಡೆ ಪಡೆದಿದೆ.

Exit mobile version