Site icon Vistara News

Jos Butler: ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​ ತಂಡದ ನಾಯಕ ಬಟ್ಲರ್​

Jos Butler

ಬೆಂಗಳೂರು: ಬಲಗೈ ಬ್ಯಾಟರ್​ ಜೋಸ್ ಬಟ್ಲರ್ ಆಧುನಿಕ ಪೀಳಿಗೆಯ ಅತ್ಯುತ್ತಮ ವೈಟ್-ಬಾಲ್ ಬ್ಯಾಟರ್​ಗಳಲ್ಲಿ ಒಬ್ಬರು. ಅವರು ಜೂನ್ 2 ರಿಂದ ಪ್ರಾರಂಭವಾಗಲಿರುವ ಟಿ 20 ವಿಶ್ವಕಪ್ 2024 ರಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ವಿಶ್ವ ಕಪ್​ ಟ್ರೋಫಿಯನ್ನು ಉಳಿಸಿಕೊಳ್ಳುವುದಕ್ಕೆ ಯತ್ನಿಸಲಿದೆ. ಹಿಂದಿನ ಬಾರಿ ಬೆನ್​ಸ್ಟೋಕ್ಸ್ ನೇತೃತ್ವದಲ್ಲಿ ಇಂಗ್ಲೆಂಡ್​ ತಂಡ ಹಿಂದಿನ ಆವೃತ್ತಿಯಲ್ಲಿ ಕಪ್​ ಗೆದ್ದಿತ್ತು. ಅವರೀಗ ಟಿ20ಐನಲ್ಲಿ 3000 ರನ್ ಗಡಿ ದಾಟಿದ ಇಂಗ್ಲೆಂಡ್​ನ ಮೊದಲ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಬಟ್ಲರ್ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ 2 ನೇ ಟಿ 20 ಪಂದ್ಯದಲ್ಲಿ ಜೋಸ್ ಬಟ್ಲರ್ ಕೇವಲ 51 ಎಸೆತಗಳಲ್ಲಿ 84 ರನ್ ಗಳಿಸಿ ಪಾಕಿಸ್ತಾನ ವಿರುದ್ಧದ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಟ್ಲರ್ ಈಗ ಟಿ 20 ಪಂದ್ಯಗಳಲ್ಲಿ ಒಂಬತ್ತನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. 106 ಇನ್ನಿಂಗ್ಸ್​ಗಳಲ್ಲಿ 35.42 ಸರಾಸರಿ ಮತ್ತು 145.10 ಸ್ಟ್ರೈಕ್ ರೇಟ್​ಪ್ರಕಾರ 3011 ರನ್ ಗಳಿಸಿದ್ದಾರೆ.

ಬಟ್ಲರ್ ಟಿ 20 ಪಂದ್ಯಗಳಲ್ಲಿ ತಮ್ಮ ಹೆಸರಿನಲ್ಲಿ ಒಂದು ಶತಕದ ದಾಖಲೆಯನ್ನೂ ಹೊಂದಿದ್ದಾರೆ. ಈ ಬಾರಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರನಾಗಲಿದ್ದಾರೆ. ಅವರ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿರುವ ಕಾರಣ ಅವಕಾಶ ಹೆಚ್ಚಿದೆ.

ಇದನ್ನೂ ಓದಿ: Virat kohli : ಬ್ರೇಕ್​ ತೆಗೆದುಕೊಂಡ ಕೊಹ್ಲಿ, ಅಭ್ಯಾಸ ಪಂದ್ಯಕ್ಕೆ ಅನುಮಾನ

ಐಪಿಎಲ್ಗೂ ಮುನ್ನ ಬಟ್ಲರ್ ಐಪಿಎಲ್ 2024ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಅಲ್ಲಿ ಅವರು ಎರಡು ಶತಕಗಳನ್ನು ಬಾರಿಸಿದ್ದರು. ಲೀಡ್ಸ್​​ನಲ್ಲಿ ನಡೆದ ಮೊದಲ ಪಂದ್ಯ ರದ್ದಾದ ನಂತರ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟಿ 20 ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಕಾರ್ಡಿಫ್​​ನಲ್ಲಿ ನಡೆಯಲಿದ್ದು, ಉಳಿದ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ನಾಯಕ ತನ್ನ ಬ್ಯಾಟಿಂಗ್ ಪ್ರದರ್ಶನ ಹೇಗೆ ನೀಡುತ್ತಾರೆ ಎಂದು ಕಾದು ನೋಡಬೇಕಷ್ಟೆ.

ಐಪಿಎಲ್​ ನಡುವೆಯೇ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್​

ಮುಂಬಯಿ: ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸಾಕಷ್ಟು ಸಂದರ್ಭದಲ್ಲಿ ತಪ್ಪು ಹೆಸರನ್ನು ಕರೆದ ಬಳಿಕ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಕ್ಕೆ ನಿರ್ಧರಿಸಿಕೊಂಡರು. ಇಂಗ್ಲೆಂಡ್ ಪರ 57 ಟೆಸ್ಟ್, 181 ಏಕದಿನ ಹಾಗೂ 114 ಟಿ20 ಪಂದ್ಯಗಳನ್ನು ಆಡಿದ್ದಾರೆ ಜೋಸ್ ಬಟ್ಲರ್​. ಜೂನ್​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ವಿಕೆಟ್ ಕೀಪರ್ ಬ್ಯಾಟರ್​ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರೀಗ ಏಕಾಏಕಿ ಹೆಸರನ್ನು ಬದಲಿಸಿಕೊಂಡಿದ್ದಾರೆ.

ನಾನು ಇಂಗ್ಲೆಂಡ್ ತಂಡದ ವೈಟ್ ಬಾಲ್ ನಾಯಕ. ಇಲ್ಲಿಯವರೆಗೆ ನನ್ನನ್ನು ತಪ್ಪು ಹೆಸರಿನೊಂದಿಗೆ ಕರೆಯಲಾಗುತ್ತಿತ್ತು . ನನ್ನ ಹುಟ್ಟುಹಬ್ಬದ ಕಾರ್ಡ್ ನಲ್ಲಿ ಬೀದಿಯಲ್ಲಿರುವ ಜನರಿಂದ ಹಿಡಿದು ನನ್ನ ತಾಯಿಯವರೆಗೆ. ಪ್ರಿಯ ಜೋಶ್ ಎಂದು ಕರೆಯಬೇಕು. ಇಂಗ್ಲೆಂಡ್ ಪರ 13 ವರ್ಷಗಳ ಕಾಲ ಆಡಿದ ನಂತರ ಮತ್ತು ಎರಡು ವಿಶ್ವಕಪ್ ಪಂದ್ಯಗಳನ್ನು ಗೆದ್ದ ನಂತರ, ನಾನು ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದ್ದೇನೆ. ನಾನು ಅಧಿಕೃತವಾಗಿ ಜೋಶ್ ಬಟ್ಲರ್​ ಎಂದು ಹೇಳಿಕೊಂಡಿದ್ದಾರೆ.

Exit mobile version