ಮುಂಬಯಿ: ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸಾಕಷ್ಟು ಸಂದರ್ಭದಲ್ಲಿ ತಪ್ಪು ಹೆಸರನ್ನು ಕರೆದ ಬಳಿಕ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಕ್ಕೆ ನಿರ್ಧರಿಸಿಕೊಂಡರು. ಇಂಗ್ಲೆಂಡ್ ಪರ 57 ಟೆಸ್ಟ್, 181 ಏಕದಿನ ಹಾಗೂ 114 ಟಿ20 ಪಂದ್ಯಗಳನ್ನು ಆಡಿದ್ದಾರೆ ಜೋಸ್ ಬಟ್ಲರ್. ಜೂನ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರೀಗ ಏಕಾಏಕಿ ಹೆಸರನ್ನು ಬದಲಿಸಿಕೊಂಡಿದ್ದಾರೆ.
Official statement… pic.twitter.com/r3Kjgdnldu
— England Cricket (@englandcricket) April 1, 2024
ಬಟ್ಲರ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ಋತುವಿನ ಮೊದಲ ಎರಡು ಪಂದ್ಯಗಳಲ್ಲಿ ಅವರು ಕೇವಲ ೧೧ ರನ್ ಗಳಿಸಿದ್ದಾರೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದರು. ರಾಜಸ್ಥಾನ್ ವಿರುದ್ಧದ ಪಂದ್ಯದ ಮೂಲಕ ಬಟ್ಲರ್ ಫಾರ್ಮ್ಗೆ ಮರಳುವುದನ್ನು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಆಶಿಸುತ್ತಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡವು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಬಟ್ಲರ್ ಹೆಸರು ಬದಲಾಯಿಸಿಕೊಂಡಿರುವುದು ಗೊತ್ತಾಗಿದೆ. ಈಗ ನನ್ನನ್ನು ಜೋಸ್ ಬಟ್ಲರ್ ಎಂದು ಕರೆಯದೆ “ಜೋಶ್ ಬಟ್ಲರ್’ ಎಂದು ಅವರು ವಿನಂತಿಸಿಕೊಂಡಿದ್ದಾರೆ.
ತಪ್ಪು ಹೆಸರಿನಿಂದ ಕರೆಯಬೇಡಿ
ನಾನು ಇಂಗ್ಲೆಂಡ್ ತಂಡದ ವೈಟ್ ಬಾಲ್ ನಾಯಕ. ಇಲ್ಲಿಯವರೆಗೆ ನನ್ನನ್ನು ತಪ್ಪು ಹೆಸರಿನೊಂದಿಗೆ ಕರೆಯಲಾಗುತ್ತಿತ್ತು . ನನ್ನ ಹುಟ್ಟುಹಬ್ಬದ ಕಾರ್ಡ್ ನಲ್ಲಿ ಬೀದಿಯಲ್ಲಿರುವ ಜನರಿಂದ ಹಿಡಿದು ನನ್ನ ತಾಯಿಯವರೆಗೆ. ಪ್ರಿಯ ಜೋಶ್ ಎಂದು ಕರೆಯಬೇಕು. ಇಂಗ್ಲೆಂಡ್ ಪರ 13 ವರ್ಷಗಳ ಕಾಲ ಆಡಿದ ನಂತರ ಮತ್ತು ಎರಡು ವಿಶ್ವಕಪ್ ಪಂದ್ಯಗಳನ್ನು ಗೆದ್ದ ನಂತರ, ನಾನು ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದ್ದೇನೆ. ನಾನು ಅಧಿಕೃತವಾಗಿ ಜೋಶ್ ಬಟ್ಲರ್ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Rohit Sharma : ಲಂಕಾ ವಿರುದ್ಧ ಬಾರಿಸಿದ 264 ರನ್ಗಳೇ ರೋಹಿತ್ ಕಾರಿನ ನಂಬರ್! ಇಲ್ಲಿದೆ ವಿಡಿಯೊ
ಇದು ಏಪ್ರಿಲ್ ಫೂಲ್ಸ್ ಡೇ ಸಂದರ್ಭದಲ್ಲಿ ಇಂಗ್ಲೆಂಡ್ ತಂಡ ಮತ್ತು ಜೋಸ್ ಬಟ್ಲರ್ ತಮಾಷೆ ಮಾಡಿರಬಹುದು ಎಂದೂ ಹೇಳಲಾಗುತ್ತಿದೆ.
ಏಪ್ರಿಲ್ 1ರ ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಅವರು ಐದು ಬಾರಿಯ ಚಾಂಪಿಯನ್ಸ್ ವಿರುದ್ಧ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ ಮತ್ತು ಫಾರ್ಮ್ಗೆ ಮರಳಬಹುದು.
ಅವರು ಎಂಟು ಪಂದ್ಯಗಳಲ್ಲಿ 485 ರನ್ ಗಳಿಸಿದ್ದಾರೆ, ಮುಂಬೈ ವಿರುದ್ಧ ಸುಮಾರು 70 ಸರಾಸರಿಯಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. ಮುಂಬೈ ವಿರುದ್ಧದ ಕೊನೆಯ ಮೂರು ಪಂದ್ಯಗಳಲ್ಲಿ ಬಟ್ಲರ್ 100, 67 ಮತ್ತು 18 ರನ್ ಗಳಿಸಿದ್ದಾರೆ.
ಅಜೇಯ ಆರ್ಆರ್ ತಂಡ
ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿರುವ ರಾಜಸ್ಥಾನ್ ತಂಡ ಅಜೇಯ ಓಟ ಮುಂದುವರಿಸಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ಗುಜರಾತ್ ಟೈಟಾನ್ಸ್ ಮತ್ತು ಹೈದರಾಬಾದ್ ವಿರುದ್ಧ ಸೋತಿದೆ.
ಬಟ್ಲರ್ 2022 ರಲ್ಲಿ ಅತ್ಯುತ್ತಮ ಐಪಿಎಲ್ ಋತುವನ್ನು ಹೊಂದಿದ್ದರು/ ಇದರಲ್ಲಿ ಅವರು 17 ಪಂದ್ಯಗಳಲ್ಲಿ 57.53 ಸರಾಸರಿ ಮತ್ತು 149.05 ಸ್ಟ್ರೈಕ್ ರೇಟ್ನಲ್ಲಿ 863 ರನ್ ಗಳಿಸಿದ್ದರು. ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶತಕಗಳನ್ನು ಬಾರಿಸಿದ್ದರು. 2022ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿದ್ದ ರಾಜಸ್ಥಾನ ಫೈನಲ್ ಪ್ರವೇಶಿಸಿತ್ತು.