Site icon Vistara News

Kangana Ranaut: ಕಂಗನಾಗೆ ಏರ್​ಪೋರ್ಟ್​ ಭದ್ರತಾ ಸಿಬ್ಬಂದಿಯಿಂದಲೇ ಕಪಾಳಮೋಕ್ಷ! ಇದು ರೈತ ಚಳವಳಿಯ ಸೇಡಂತೆ!

Kangana Ranaut

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದ ನಟಿ ಕಂಗನಾ ರಣಾವತ್ (Kangana Ranaut )​​ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಮಹಿಳಾ ಸಿಬ್ಬಂದಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಭದ್ರತಾ ತಪಾಸಣೆಯ ಸಮಯದಲ್ಲಿ ನಟ-ರಾಜಕಾರಣಿ ತನ್ನ ಫೋನ್ ಅನ್ನು ಟ್ರೇಯಲ್ಲಿ ಇಡಲು ನಿರಾಕರಿಸಿದ್ದರು. ಅಲ್ಲದೆ ಆ ಬಳಿಕ ಭದ್ರತಾ ಸಿಬ್ಬಂದಿಯನ್ನು ತಳ್ಳಿದ್ದರು. ಇದರಿಂದ ಕೋಪಗೊಂಡ ಅವರು ಮುಖದ ಮೇಲೆ ಹೊಡೆದಿದ್ದಾರೆ ಎನ್ನಲಾಗಿದೆ. ಆದರೆ ಇನ್ನೊಂದು ಮೂಲಗಳ ಪ್ರಕಾರ ನಟಿ ಈ ಹಿಂದೆ ರೈತ ಸಂಘಟನೆಗಳು ಡೆಲ್ಲಿಯಲ್ಲಿ ಪ್ರತಿಭಟನೆ ನಡೆಸುವಾಗ ಅವರ ವಿರುದ್ಧ ಹೇಳಿಕೆ ನೀಡಿದ್ದರು. ಈ ಕೋಪ ರೈತ ಕುಟುಂಬಕ್ಕೆ ಸೇರಿದ್ದ ಭದ್ರತಾ ಸಿಬ್ಬಂದಿಗೆ ಇತ್ತು. ಏರ್​ಪೋರ್ಟ್​ನಲ್ಲಿ ಅವರು ಎದುರಾದಾಗ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದಿಲ್ಲಿಯಲ್ಲಿ ಧರಣಿ ಕುಳಿತ ರೈತರ ವಿರುದ್ಧ ಕಂಗನಾ ಹೇಳಿಕೆ ನೀಡಿದ್ದಳು, ಆ ರೈತರ ಗುಂಪಿನಲ್ಲಿ ನನ್ನ ಅಮ್ಮ ಕೂಡ ಇದ್ದರು ಎಂದು ಆ ಮಹಿಳಾ ಭದ್ರತಾ ಸಿಬ್ಬಂದಿ ಹೇಳಿಕೆ ನೀಡಿದ್ದಾಳೆ.

ಕಂಗನಾ ರಣಾವತ್​ ಈ ಬಗ್ಗೆ ದೂರು ನೀಡಿದ್ದು, ಮಹಿಳಾ ಅಧಿಕಾರಿಯನ್ನು ಕೆಲಸದಿಂದ ತೆಗೆದುಹಾಕಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕಂಗನಾ ಅವರಿಗೆ ಹೊಡೆದ ಮಹಿಳೆಯನ್ನು ಕುಲ್ವಿಂದರ್ ಕೌರ್ ಎಂದು ಹೆಸರಿಸಲಾಗಿದೆ. ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಸಭೆಯಲ್ಲಿ ಭಾಗವಹಿಸಲು ಕಂಗನಾ ರಣಾವತ್​ ವಿಮಾನದ ಮೂಲಕ ದೆಹಲಿಗೆ ಹೊರಟಿದ್ದರು.

ಇದನ್ನೂ ಓದಿ: Prajwal Revanna : ಪ್ರಜ್ವಲ್​ ರೇವಣ್ಣ ಮತ್ತೆ ನಾಲ್ಕು ದಿನ ಎಸ್​​ಐಟಿ ಕಸ್ಟಡಿಗೆ

ಕಂಗನಾ ಅವರು ಗುರುವಾರ ಮಧ್ಯಾಹ್ನ 3.30ಕ್ಕೆ ಏರ್​ಪೋರ್ಟ್​ಗೆ ಬಂದಿದ್ದರು. ಕಂಗನಾ ರಣಾವತ್​ ವಿಮಾನ ನಿಲ್ದಾಣದ ಭದ್ರತಾ ತಪಾಸಣೆಗಾಗಿ ಬರುತ್ತಿದ್ದಾಗ ಕುಲ್ವಿಂದರ್ ಕೌರ್​ ಕೈ ಎತ್ತಿದರು. ಕಂಗನಾ ಕೂಡ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಸಿಬ್ಬಂದಿ ರೈತರ ಚಳವಳಿ ಕುರಿತು ನೀಡಿದ್ದ ಹೇಳಿಕೆಯಿಂದ ನನಗೆ ನೋವಾಗಿತ್ತು ಎಂದು ವಿಚಾರಣೆ ವೇಳೆ ಹೇಳಿದ್ದಾರೆ. ಅವರನ್ನು ಪ್ರಸ್ತುತ, ವಿಮಾನ ನಿಲ್ದಾಣದಲ್ಲಿರುವ ಕಮಾಂಡೆಂಟ್ ಕೋಣೆಯಲ್ಲಿ ಕುಳಿತಿರಿಸಲಾಗಿದೆ. ಕಂಗನಾ ದೆಹಲಿಗೆ ತೆರಳಿದ್ದಾರೆ.

ಕಂಗನಾ ರನೌತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ನಟಿಯ ಮುಂದೆ ಕಾಂಗ್ರೆಸ್ ಪಕ್ಷದ ನಾಯಕ ವಿಕ್ರಮಾದಿತ್ಯ ಸಿಂಗ್ ಇದ್ದರು. ಕಂಗನಾ ಅವರನ್ನು 74,755 ಮತಗಳಿಂದ ಸೋಲಿಸಿದರು.

ನೇರಳೆ ಬಣ್ಣದ ಸೀರೆಯುಟ್ಟು ದೆಹಲಿಗೆ ಹೊರಟ ಕಂಗನಾ ರಣಾವತ್!

ಬೆಂಗಳೂರು: ಕಂಗನಾ ರಣಾವತ್ (Kangana Ranaut) ಅವರು ರಾಜಕೀಯದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಇದೀಗ ಬಣ್ಣದ ಲೋಕಕ್ಕೆ ಬೈಬೈ ಹೇಳುತ್ತಿದ್ದಾರೆ ಎಂದು ವರದಿಯಾಗಿದೆ. ಕಂಗನಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ದೆಹಲಿಗೆ ಹೊರಡುವ ಮೊದಲು ತಾಯಿ ಆಶಾ ರಣಾವತ್‌ ಅವರಿಂದ ಆಶೀರ್ವಾದ ಪಡೆದು ಹೋಗುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ನೇರಳೆ-ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ಮಿಂಚಿದ್ದಾರೆ.

ಮೊದಲ ಚಿತ್ರಕ್ಕೆ “ದೆಹಲಿ ಕರೆಯುತ್ತಿದೆ” ಎಂದು ಶೀರ್ಷಿಕೆ ನೀಡಿದ್ದಾರೆ. ಎರಡನೇ ಫೋಟೋದಲ್ಲಿ ತಾಯಿ ಆಶಾ ಅವರನ್ನು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಮೂರನೇ ಫೋಟೊದಲ್ಲಿ ಸೆಲ್ಫಿ ತೆಗೆದುಕೊಂಡು, “ಸಂಸತ್ತಿಗೆ ಹೋಗುವ ದಾರಿಯಲ್ಲಿʼʼ ಎಂದು ಬರೆದುಕೊಂಡಿದ್ದಾರೆ. ಕಂಗನಾ ರಣಾವತ್ ಬಾಲಿವುಡ್ ತೊರೆಯಲು ನಿರ್ಧಾರ ಮಾಡಿದ್ದರೆ, ಇಂದಿರಾ ಗಾಂಧಿಯವರ ಜೀವನಾಧಾರಿತ ‘ಎಮರ್ಜೆನ್ಸಿ’ ಸಿನಿಮಾ ಕಂಗನಾ ಅವರ ಕೊನೆಯ ಚಿತ್ರವಾಗಲಿದೆ. ಈ ಸಿನಿಮಾ ಹಲವು ದಿನಗಳಿಂದ ಚರ್ಚೆಯಲ್ಲಿದೆ. ರಿಲೀಸ್‌ಗೆ ಸಮಯ ಸಿಗುತ್ತಿಲ್ಲ. ಈಗ ರಾಜಕೀಯದ ಗದ್ದಲದಲ್ಲಿ ಕಂಗನಾ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಫ್ಯಾನ್ಸ್‌ಗೆ ಕುತೂಹಲ ಹೆಚ್ಚಿದೆ.

ಕಂಗನಾ ಬಾಲಿವುಡ್ ತೊರೆಯಲು ನಿರ್ಧರಿಸಿದರೆ, ಅಭಿಮಾನಿಗಳು ಖಂಡಿತವಾಗಿಯೂ ಅವರನ್ನು ಬೆಳ್ಳಿತೆರೆಯಲ್ಲಿ ಮಿಸ್ ಮಾಡಿಕೊಳ್ಳುತ್ತಾರೆ. ಕಂಗನಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ತೆರೆ ಮೇಲೆ ಬರುವ ಕಂಗನಾ ಸಿನಿಮಾಗಾಗಿಯೇ ಕಾಯುವ ಫ್ಯಾನ್ಸ್ ಕೂಡ ಇದ್ದಾರೆ.

Exit mobile version