Site icon Vistara News

Kangana Ranaut : ರೈತರನ್ನು ಬಾಂಗ್ಲಾ ಪ್ರತಿಭಟನಾಕಾರರಿಗೆ ಹೋಲಿಸಿದ ಕಂಗನಾ; ಅಂತರ ಕಾಪಾಡಿಕೊಂಡ ಬಿಜೆಪಿ

Kangana Ranaut

ನವದೆಹಲಿ: ನಟಿ ಹಾಗೂ ಮಂಡಿ ಕ್ಷೇತ್ರದ ಸಂಸದರೆ ಕಂಗನಾ ರಣಾವತ್‌ (Kangana Ranaut) ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇಂದ್ರದಲ್ಲಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ರೈತರ ಪ್ರತಿಭಟನೆ ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಕಾರಣವಾಗುತ್ತಿತ್ತು ಎಂದು ಹೇಳಿಕೆ ನೀಡಿ ಮತ್ತೊಮ್ಮೆ ರೈತರ ಕೋಪಕ್ಕೆ ಕಾರಣರಾಗಿದ್ದಾರೆ. ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಕಂಗನಾ ರಣಾವತ್‌‌ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಸಮಯದಲ್ಲಿ, “ಶವಗಳನ್ನು ನೇತುಹಾಕುತ್ತಿರುವುದು ಕಂಡುಬಂದಿದೆ ಮತ್ತು ಅತ್ಯಾಚಾರಗಳು ನಡೆಯುತ್ತಿದ್ದವು,” ಎಂದು ಆರೋಪಿಸಿದ್ದಾರೆ. ಕಾನೂನುಗಳನ್ನು ಹಿಂತೆಗೆದುಕೊಂಡ ನಂತರವೂ ಪ್ರತಿಭಟನೆಗಳು ಮುಂದುವರಿಯುತ್ತಿರುವುದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಮತ್ತು “ವಿದೇಶಿ ಶಕ್ತಿಗಳೇ ” ಕಾರಣ ಎಂದು ದೂಷಿಸಿದ್ದರು.

ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದು ಗೊತ್ತಿದೆ. ಅದು ಇಲ್ಲಿಯೂ ಸಂಭವಿಸುವ ಸಾಧ್ಯತೆಗಳಿತ್ತು. ವಿದೇಶಿ ಶಕ್ತಿಗಳ ಪಿತೂರಿ ಇದರ ಹಿಂದೆ ಇತ್ತು. ಚಲನಚಿತ್ರದ ಮಂದಿ ಅದನ್ನೇ ದಾಳವನ್ನಾಗಿಸಿದರು. ದೇಶವು ನಾಯಿಗಳ ಕೈಗೆ ಸಿಕ್ಕರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಅವರ ಹೇಳಿಕೆಗಳು ಅವರದೇ ಪಕ್ಷದೊಳಗೇ ಟೀಕೆಗೆ ಗುರಿಯಾಗಿವೆ. ಪ್ರಚೋದನಕಾರಿ ಹೇಳಿಕೆಗಳನ್ನು ನೀಡದಂತೆ ಪಂಜಾಬ್ ಹಿರಿಯ ಬಿಜೆಪಿ ನಾಯಕ ಹರ್ಜಿತ್ ಗರೇವಾಲ್ ರಣಾವತ್‌ಗೆ ಸಲಹೆ ನೀಡಿದ್ದಾರೆ.

ರೈತರ ಬಗ್ಗೆ ಮಾತನಾಡುವುದು ಕಂಗನಾ ಅವರ ಕೆಲಸವಲ್ಲ. ಕಂಗನಾ ಅವರ ಹೇಳಿಕೆ ವೈಯಕ್ತಿಕವಾಗಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರೈತ ಸ್ನೇಹಿ. ವಿರೋಧ ಪಕ್ಷಗಳು ನಮ್ಮ ವಿರುದ್ಧ ಕೆಲಸ ಮಾಡುತ್ತಿವೆ ಮತ್ತು ಕಂಗನಾ ಅವರ ಹೇಳಿಕೆಯೂ ಅದೇ ರೀತಿ ಮಾಡುತ್ತಿದೆ. ಸೂಕ್ಷ್ಮ ಅಥವಾ ಧಾರ್ಮಿಕ ವಿಷಯಗಳು, ಧಾರ್ಮಿಕ ಸಂಸ್ಥೆಗಳ ಬಗ್ಗೆ ಅವರು ಅಂತಹ ಹೇಳಿಕೆಗಳನ್ನು ನೀಡಬಾರದು” ಎಂದು ಗರೇವಾಲ್ ಹೇಳಿದ್ದಾರೆ.

ಇದನ್ನೂ ಓದಿ: Chhatrapati Shivaji Maharaj : ಮೋದಿ ಅನಾವರಣಗೊಳಿಸಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಪ್ರತಿಮೆ ಉರುಳಿ ಬಿದ್ದು ಪುಡಿಪುಡಿ

ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಕಂಗನಾ ರಣಾವತ್‌‌ ಅವರ ಹೇಳಿಕೆಗಳು ಬಿಜೆಪಿಗೆ ಮುಜುಗರ ತಂದಿದೆ. ಇದು ಕೃಷಿ ಕೇಂದ್ರಿತ ಪ್ರದೇಶಗಳಲ್ಲಿ ಪಕ್ಷದ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ರೈತರ ಬಗ್ಗೆ ಕಂಗನಾ ರಣಾವತ್‌ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ, ಕೃಷಿ ಕಾನೂನುಗಳ ವಿರೋಧಿ ಪ್ರತಿಭಟನೆಯ ಮಧ್ಯೆ, ಅವರು ಪಂಜಾಬ್‌‌‌ನ ಮಹಿಳಾ ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಭಾರಿ ವಿವಾದ ಹುಟ್ಟುಹಾಕಿದ್ದರು.

ಸಂಸತ್ತಿಗೆ ಆಯ್ಕೆಯಾದ ಸ್ವಲ್ಪ ಸಮಯದ ನಂತರ, ಕಂಗನಾ ರನೌತ್ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಅವರಿಗೆ ಕಪಾಳ ಮೋಕ್ಷ ಮಾಡಿದ್ದರು. ಅವರು ರೈತ ವಿರೋಧಿ ಕಾಮೆಂಟ್‌ಗಳ ಕಾರಣಕ್ಕೆ ಆಗಿತತು. ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Exit mobile version