ಜೀವನ ಶೈಲಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಭಾರತದ ಅತಿ ದೊಡ್ಡ ಆಪ್ ಆದ ʻಫ್ರೀಡಂ -ಆಪ್ʼನ ಸಂಸ್ಥಾಪಕರು ಮತ್ತು ಸಿಇಒ ಶ್ರೀ ಸಿ.ಎಸ್. ಸುಧೀರ್.
ವೈಯುಕ್ತಿಕ ಹಣಕಾಸು, ಲಾಭದಾಯಕ ಕೃಷಿ, ಸಣ್ಣ ವ್ಯಾಪಾರ ಮಾಡುವವರಿಗೆ ಭಗವದ್ಗೀತೆಯಂತಿರುವ ʻಫ್ರೀಡಂ -ಆಪ್ʼ ಅದೆಷ್ಟೋ ಮಂದಿಯ ಬದುಕಿಗೆ ದಾರಿ ದೀವಿಗೆಯಾಗಿದೆ. ತೀರ್ಥಹಳ್ಳಿಯವರಾದ ಸುಧೀರ್ 2006ರಲ್ಲಿ ಎಂಬಿಎ ಪ್ರವೇಶ ಪರೀಕ್ಷೆ ಸಿದ್ಧತೆಗೆಂದು ಬೆಂಗಳೂರಿಗೆ ಬಂದು ಹಣಕಾಸಿನ ಕುರಿತು ಶಿಕ್ಷಣ ನೀಡುವ ಸಂಸ್ಥೆ ʻಇಂಡಿಯನ್ ಮನಿ ಡಾಟ್ ಕಾಮ್ʼ ಆರಂಭಿಸಿದರು. ಇದು 2019ರಲ್ಲಿ 90 ಲಕ್ಷ ಗ್ರಾಹಕರನ್ನು ಪಡೆದು, ದೇಶದ ಅತ್ಯಂತ ದೊಡ್ಡ ಹಣಕಾಸು ಶಿಕ್ಷಣ ನೀಡುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಶ್ರೀ ಸುಧೀರ್ ಅವರು ಹಣದ ಸರಿಯಾದ ಬಳಕೆಯ ಕುರಿತು ದೇಶಾದ್ಯಂತ ಕಾರ್ಯಾಗಾರ ನಡೆಸಿದ್ದಾರೆ. ಅವರ ಫ್ರೀಡಮ್ -ಆಪ್‌ನಲ್ಲಿ ವೈಯುಕ್ತಿಕ ಹಣಕಾಸು, ಕೃಷಿ, ಸಣ್ಣ ವ್ಯಾಪಾರ ಸೇರಿ ವಿವಿಧ ಕ್ಷೇತ್ರದವರಿಗೆ ಸುಮಾರು
780 ಕೋರ್ಸ್‌ಗಳನ್ನು ಪರಿಚಯಿಸಿದ್ದಾರೆ. ಇವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ
ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.