Site icon Vistara News

Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

Kendra Sahitya Akademi Award

Kendra Sahitya Akademi Award Announced for 2 Odisha Writers

ನವದೆಹಲಿ: ಒಡಿಶಾದ ಇಬ್ಬರು ಲೇಖಕರಿಗೆ 2024ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು (Kendra Sahitya Akademi Award 2024) ಅವರಿಗೆ ಘೋಷಣೆ ಮಾಡಲಾಗಿದೆ. ಒಡಿಶಾ ಲೇಖಕರಾದ ಮಾನಸ್‌ ರಂಜನ್‌ ಸಮಾಲ್‌ (Manas Ranjan Samal) ಹಾಗೂ ಸಂಜಯ್‌ ಕುಮಾರ್‌ ಪಾಂಡಾ (Sanjay Kumar Panda) ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್‌ ಕೌಶಿಕ್‌ ಅವರ ನೇತೃತ್ವದಲ್ಲಿ ಇತ್ತೀಚೆಗೆ ಗುಜರಾತ್‌ನ ನರ್ಮದಾದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ. ಕರ್ನಾಟಕದ ಇಬ್ಬರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಶ್ರುತಿ ಬಿ.ಆರ್.‌ (Shruti BR) ಅವರಿಗೆ ಯುವ ಪುರಸ್ಕಾರ ಘೋಷಿಸಿದ್ದರೆ, ಕೃಷ್ಣಮೂರ್ತಿ ಬಿಳಿಗೆರೆ (Krishnamurthy Biligere) ಅವರಿಗೆ ಬಾಲ ಪುರಸ್ಕಾರ ಘೋಷಣೆ ಮಾಡಲಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮಾನಸ್‌ ರಂಜನ್‌ ಸಮಾಲ್‌ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸಂಜಯ್‌ ಕುಮಾರ್‌ ಪಾಂಡಾ ಅವರಿಗೆ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಘೋಷಿಸಲಾಗಿದೆ. ಮಾನಸ್‌ ರಂಜನ್‌ ಸಮಾಲ್‌ ಅವರು ರಚಿಸಿದ ಸಣ್ಣ ಕತೆಗಳ ಸಂಕಲನವಾದ ‘ಗಾಪ ಕಲಿಕಾ’ (Gapa Kalika) ಕೃತಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಾಗೆಯೇ, ಸಂಜಯ್‌ ಕುಮಾರ್‌ ಪಾಂಡಾ ಅವರ ‘ಹು ಬೈಯಾ’ (Hu Baia) ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇದು ಕೂಡ ಸಣ್ಣ ಕತೆಗಳ ಸಂಕಲನವಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನೂ ಒಳಗೊಂಡ ತೀರ್ಪುಗಾರರ ಸಮಿತಿ ಮಾಡಿದ ಶಿಫಾರಸಿನಂತೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ದೇಶದ ಭಾಷೆಗಳ ಸಾಹಿತಿಗಳನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಹೊಂದಿದೆ.

ಕನ್ನಡದ ಖ್ಯಾತ ಬರಹಗಾರ ಲಕ್ಷ್ಮೀಶ ತೋಳ್ಪಾಡಿ ಅವರಿಗೆ 2023ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು. ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತದ ಅನುಸಂಧಾನದ ಭಾರತಯಾತ್ರೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಆನಂದ ಝುಂಜರವಾಡ ಮತ್ತು ಜೆ. ಎನ್. ತೇಜಶ್ರೀ ಅವರಿದ್ದರು.

ಭಗವದ್ಗೀತೆಯ ಕುರಿತಾದ ‘ಮಹಾಯುದ್ದಕ್ಕೆ ಮುನ್ನ’ ಅವರ ಮೊದಲ ಪ್ರಕಟಿತ ಕೃತಿಯಾಗಿದೆ. ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ ‘ಸಂಪಿಗೆ ಭಾಗವತ’, ‘ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ’, ‘ಭವ ತಲ್ಲಣ’ ಅವರ ಇತರ ಕೃತಿಗಳಾಗಿವೆ. ಜತೆಗೆ, ಕನ್ನಡದ ಅನೇಕ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕವಾಗುತ್ತಲೇ ಇರುತ್ತವೆ.

ಇದನ್ನೂ ಓದಿ: All We Imagine As Light: ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ರಿಜೆಕ್ಟ್‌ ಮಾಡಿದ್ರಂತೆ ಕಾನ್‌ ಪ್ರಶಸ್ತಿ ವಿಜೇತೆ!

Exit mobile version