Site icon Vistara News

Khalistani Terrorist : ದೆಹಲಿ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಉಗ್ರ ಪ್ರಭ್​ಪ್ರೀತ್ ಸಿಂಗ್ ಸೆರೆ

Khalistan Terrorist

ನವ ದೆಹಲಿ: ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಗೆ ಸೇರಿದ ಉಗ್ರ (Khalistani terrorist) ಪ್ರಭ್ ಪ್ರೀತ್ ಸಿಂಗ್ ನನ್ನು ಪಂಜಾಬ್ ಪೊಲೀಸರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport)ಬಂಧಿಸಿದ್ದಾರೆ. ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದೆ. ಪ್ರಭ್​ಪ್ರೀತ್​ ​ಸಿಂಗ್ ಪೋಲೆಂಡ್​ ವೀಸಾ ಮೂಲಕ ಜರ್ಮನಿಗೆ ಹೋಗಿ ನೆಲೆಸಿದ್ದ. ಅಲ್ಲಿ ಖಲಿಸ್ತಾನಿ ಭಯೋತ್ಪಾದಕ ಮಾಡ್ಯೂಲ್​​ಗೆ ಉಗ್ರರ ನೇಮಕ ಮತ್ತು ಧನಸಹಾಯ ಮಾಡಿದ್ದ.

ಪಂಜಾಬ್ ಪೊಲೀಸರ ರಾಜ್ಯ ವಿಶೇಷ ಕಾರ್ಯಾಚರಣೆ ವಿಭಾಗ, ನಿಷೇಧಿತ ಖಲಿಸ್ತಾನ್ ಪ್ರತ್ಯೇಕತಾವಾದಿ ಸಂಘಟನೆಯ ಕಾರ್ಯಕರ್ತನನ್ನು ಪ್ರಭ್​ಪ್ರೀತ್​ನನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದೆ. ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (ಕೆಜೆಡ್ಎಫ್) ಉಗ್ರ ಪ್ರಭ್​ ಪ್ರೀತ್​ ಸಿಂಗ್ ಜರ್ಮನಿಯನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಭಯೋತ್ಪಾದಕ ನೇಮಕ, ಧನಸಹಾಯ ಮತ್ತು ಸಹಾಯ ಮಾಡ್ಯೂಲ್ ಅನ್ನು ನಡೆಸುತ್ತಿದ್ದನು” ಎಂದು ಪಂಜಾಬ್​​ನ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಖಲಿಸ್ತಾನ್ ಜಿಂದಾಬಾದ್ ಫೋರ್ಸ್​​ನ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಪಂಜಾಬ್ ಪೊಲೀಸರು ಮುಂದಾಗಿದ್ದಾರೆ ಎಂದು ಯಾದವ್ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕನನ್ನು ಹೇಗೆ ಸೆರೆಹಿಡಿದಿರುವುದು ಹೇಗೆ?


ಅಧಿಕೃತ ದಾಖಲೆಯ ಪ್ರಕಾರ, 2020 ರಲ್ಲಿ, ಪಂಜಾಬ್ ಪೊಲೀಸರ ವಿಶೇಷ ವಿಭಾಗ ಕೆಜೆಡ್ಎಫ್ ಭಯೋತ್ಪಾದಕ ಜಗದೀಶ್ ಸಿಂಗ್ ಭುರಾ ಬಗ್ಗೆ ಗೌಪ್ಯ ಮಾಹಿತಿ ಸ್ವೀಕರಿಸಿತ್ತು. ಆತನ ನಿಕಟವರ್ತಿಯೇ ಪ್ರಭ್​ಪ್ರೀತ್​. ಪಂಜಾಬ್​ನಲ್ಲಿ ದೊಡ್ಡ ವ್ಯಕ್ತಿಗಳನ್ನು ಕೊಲ್ಲಲು ಭುರಾ ಯೋಜನೆಯನ್ನು ರೂಪಿಸಿದ್ದ. ಅದರಲ್ಲಿ ಪ್ರಭ್​ಪ್ರೀತ್​ ಸಂಚು ಕೂಡ ಇತ್ತು. ಆತ ಜರ್ಮನಿಯಲ್ಲೇ ಕುಳಿತು ಭಾರತ ಮೂಲದ ಸಹಚರರಿಗೆ ಶಸ್ತ್ರಾಸ್ತ್ರಗಳನ್ನು ವಿತರಿಸಿದ್ದ.

ಇದನ್ನೂ ಓದಿ: United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

ಪಂಜಾಬ್ ಪೊಲೀಸರು ಆ ನಾಲ್ವರು ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಕಾರ್ಯಕರ್ತರನ್ನು ಬಂಧಿಸಿ ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡು ದಾಳಿ ವಿಫಲಗೊಳಿಸಿದ್ದರು. ಅಲ್ಲದೆ, ಏರ್​ಪೋರ್ಟ್​ಗೆ ಲುಕ್ ಔಟ್ ನೋಟಿಸ್​ ನೀಡಿ ಪ್ರಭ್ ಪ್ರೀತ್ ಸಿಂಗ್ ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಖೆಡ್ಡಾ ತೋಡಿದ್ದರು.

ಖಲಿಸ್ತಾನಿ ಕಾರ್ಯಕರ್ತರು ಬಹಿರಂಗಪಡಿಸಿದ್ದೇನು?

ಖಲಿಸ್ತಾನಿ ಭಯೋತ್ಪಾದಕ ಭುರಾ ಮತ್ತು ಅವನ ನಿಕಟವರ್ತಿ ಪ್ರಭ್​ಪ್ರೀತ್​ ಸಿಂಗ್ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದೆವು ಎಂದು ಬಂಧಿತ ಕಾರ್ಯಕರ್ತರು ತನಿಖೆಯ ಸಮಯದಲ್ಲಿ ಬಹಿರಂಗಪಡಿಸಿದ್ದರು. ಭಯೋತ್ಪಾದಕ ಜೋಡಿಯು ಪಂಜಾಬ್​​ನಲ್ಲಿ ದೊಡ್ಡ ಸಂಚು ರೂಪಿಸಿದ್ದರು.

ಪ್ರಭ್ ಪ್ರೀತ್ ಸಿಂಗ್ ಜರ್ಮನಿಯಲ್ಲಿ ವಾಸಿಸುತ್ತಿದ್ದ ಎಂದು ಅವರು ಬಹಿರಂಗಪಡಿಸಿದ್ದರು. ನಂತರ ಪಂಜಾಬ್ ಪೊಲೀಸರು ಖಲಿಸ್ತಾನಿ ಭಯೋತ್ಪಾದಕನ ಬಂಧನವನ್ನು ಖಚಿತಪಡಿಸಿಕೊಳ್ಳಲು ನವದೆಹಲಿಯ ಬ್ಯೂರೋ ಆಫ್ ಇಮಿಗ್ರೇಷನ್ ಮೂಲಕ ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದರು. ಪಂಜಾಬ್ ಪೊಲೀಸ್ ಅಧಿಕಾರಿಗಳ ಪ್ರಕಾರ, ಖಲಿಸ್ತಾನಿ ಭಯೋತ್ಪಾದಕ ಪ್ರಭ್​ಪ್ರೀತ್​ ಸಿಂಗ್ 2017 ರಲ್ಲಿ ಪೋಲೆಂಡ್​ಗೆ ಹೋಗಿದ್ದನು ಮತ್ತು 2020 ರಲ್ಲಿ ರಸ್ತೆ ಮೂಲಕ ಜರ್ಮನಿಗೆ ಹೋಗಿದ್ದ.

Exit mobile version