Site icon Vistara News

KL Rahul : ರಾಜ್​ಕೋಟ್​ ಟೆಸ್ಟ್​ನಿಂದ ಕೆಎಲ್ ರಾಹುಲ್ ಔಟ್, ದೇವದತ್ ಪಡಿಕ್ಕಲ್​ಗೆ ಚಾನ್ಸ್​

KL Rahul

ಬೆಂಗಳೂರು: ಗುಜರಾತ್​ನ ರಾಜ್​ಕೊಟ್​​ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್​​ ಕೆಎಲ್ ರಾಹುಲ್ (KL Rahul) ಹೊರಗುಳಿದಿದ್ದಾರೆ. ಅವರ ಬದಲಿ ಕರ್ನಾಟಕ ತಂಡದ ಎಡಗೈ ಬ್ಯಾಟರ್​ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಸೋಮವಾರ ರಾಜ್​ಕೋಟ್​​ನಲ್ಲಿ ಭಾರತ ತಂಡವನ್ನು ಸೇರಬೇಕಿತ್ತು. ಆದರೆ ರಾಹುಲ್ ಇನ್ನೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಅವರನ್ನು ಕೈಬಿಡಲಾಗಿದೆ. ಗಾಯದಿಂದಾಗಿ ರಾಹುಲ್ ವಿಶಾಖಪಟ್ಟಣಂ ಟೆಸ್ಟ್​​ನಿಂದ ಹೊರಗುಳಿದಿದ್ದರು. ಫಿಟ್ನೆಸ್​ಗೆ ಒಳಪಟ್ಟು ಕೊನೆಯ ಮೂರು ಟೆಸ್ಟ್​ಗಳಿಗೆ ತಂಡದ ಭಾಗವಾಗಿ ಹೆಸರಿಸಲ್ಪಟ್ಟಿದ್ದರು. ಆದರೆ ಇದೀಗ ಅವರು ತಂಡದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.

ಅತ್ಯುತ್ತಮ ಪ್ರಥಮ ದರ್ಜೆ ಋತುವಿನ ಮಧ್ಯದಲ್ಲಿದ್ದ ದೇವದತ್​​ ಪಡಿಕ್ಕಲ್ ಟೆಸ್ಟ್ ತಂಡಕ್ಕೆ ಮೊದಲ ಕರೆಯನ್ನು ಪಡೆದಿದ್ದಾರೆ. 23 ವರ್ಷದ ಕರ್ನಾಟಕದ ಬ್ಯಾಟರ್​​ ಕೆಲವು ದಿನಗಳ ಹಿಂದೆ ತಮಿಳುನಾಡು ವಿರುದ್ಧ 151 ರನ್ ಗಳಿಸಿದ್ದರು. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್​​ನಲ್ಲಿ 105 ರನ್ ಗಳಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್​ನ ಹಾಲಿ ಋತುವಿನಲ್ಲಿ ಇದು ಅವರ ಮೂರನೇ ಶತಕವಾಗಿದೆ.

ಶ್ರೇಯಸ್ ಅಯ್ಯರ್, ಅನುಭವಿ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಹಿಂದಿಕ್ಕಿರುವ ಪಡಿಕ್ಕಲ್​ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜ್​ಕೋಟ್​ನಲ್ಲಿ ಹೊಸ ಮುಖಗಳನ್ನು ಆಯ್ಕೆ ಮಾಡಲಿದೆ. ವಿಶಾಖಪಟ್ಟಣಂನಲ್ಲಿ ಪಾದಾರ್ಪಣೆ ಮಾಡಿದ ರಜತ್ ಪಾಟಿದಾರ್ ಮತ್ತು ಚೊಚ್ಚಲ ಪಂದ್ಯವಾಡುವ ಸರ್ಫರಾಜ್ ಖಾನ್ ಮೇಲೆ ಆಯ್ಕೆದಾರರು ನಂಬಿಕೆ ಇಡುವ ಸಾಧ್ಯತೆಗಳಿವೆ.

ಇದನ್ನೂ ಓದಿ : Reece Topley : ಆರ್​ಸಿಬಿ ವೇಗದ ಬೌಲರ್​ ರೀಸ್​ ಟಾಪ್ಲೆ​ ಈ ಬಾರಿಯ ಐಪಿಎಲ್​ಗೂ ಅಲಭ್ಯ?

ಮೂರನೇ ಪಂದ್ಯದಕ್ಕೆ ಭಾರತ ತಂಡ ಈ ರೀತಿ ಇದೆ.

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಸರ್ಫರಾಜ್ ಖಾನ್, ರಜತ್ ಪಾಟಿದಾರ್, ರವೀಂದ್ರ ಜಡೇಜಾ, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್ ಅಶ್ವಿನ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್, ದೇವದತ್ ಪಡಿಕ್ಕಲ್.

Exit mobile version