Site icon Vistara News

Lakshya Sen : ಒಲಿಂಪಿಕ್ಸ್​ನ ಸೆಮಿ ಫೈನಲ್​ಗೇರಿ ಇತಿಹಾಸ ನಿರ್ಮಿಸಿದ ಷಟ್ಲರ್ ಲಕ್ಷ್ಯ ಸೇನ್​

ಬೆಂಗಳೂರು: ಭಾರತದ ಯುವ ಷಟ್ಲರ್​ ಲಕ್ಷ್ಯ ಸೇನ್ (Lakshya Sen ) ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಇತಿಹಾಸ ಬರೆದಿದ್ದಾರೆ. 22 ವರ್ಷದ ಆಟಗಾರ ಒಲಿಂಪಿಕ್ಸ್​​ನಲ್ಲಿ ಸೆಮಿಫೈನಲ್ ಹಂತವನ್ನು ತಲುಪಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ಪ್ಯಾರಿಸ್ ಗೇಮ್ಸ್ ನಲ್ಲಿ ಲಕ್ಷ್ಯ ಅವರು ತೈವಾನ್ ನ 12ನೇ ಶ್ರೇಯಾಂಕದ ಚೌ ಟಿಯೆನ್ ಚೆನ್ ಅವರನ್ನು ಸೋಲಿಸಿ ಫ್ರೆಂಚ್ ರಾಜಧಾನಿಯಲ್ಲಿ ಕಿಕ್ಕಿರಿದ ಬ್ಯಾಡ್ಮಿಂಟನ್ ಅಖಾಡದಲ್ಲಿ ಭಾರತೀಯ ಪ್ರೇಕ್ಷಕರ ಅಭಿಮಾನಕ್ಕೆ ಪಾತ್ರರಾದರು.

ಲಕ್ಷ್ಯ ಸೇನ್ ಈಗ ತಮ್ಮ ಚೊಚ್ಚಲ ಒಲಿಂಪಿಕ್ಸ್ ನಲ್ಲಿ ಪದಕವನ್ನು ಖಚಿತಪಡಿಸಲು ಒಂದು ಗೆಲುವಿನ ದೂರದಲ್ಲಿದ್ದಾರೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಕಣದಲ್ಲಿ ಉಳಿದಿರುವ ಏಕೈಕ ಬ್ಯಾಡ್ಮಿಂಟ್ ಆಟಗಾ ಅವರು. ಹೀಗಾಗಿ ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರದ ಭರವಸೆಯನ್ನು ಹೊತ್ತಿದ್ದಾರೆ. ಚಿನ್ನದ ಪದಕದ ಸ್ಪರ್ಧಿಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗುರುವಾರ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್​​ನಲ್ಲಿ ಸೋತಿದ್ದು. ಎರಡು ಬಾರಿಯ ಪದಕ ವಿಜೇತೆ ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್ ರೌಂಡ್ ಆಫ್ 16 ರಲ್ಲಿ ನಿರ್ಗಮಿಸಿದ್ದಾರೆ.

ಲಕ್ಷ್ಯ ಸೇನ್ ತೈವಾನ್​​ನ ಚೌ ಟಿಯೆನ್ ಚೆನ್ ಅವರನ್ನು 19-21, 21-15, 21-12 ಗೇಮ್ ಗಳಿಂದ ಸೋಲಿಸಿದರು. ಒಂದು ಗಂಟೆ 15 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಲಕ್ಷ್ಯ ಗೆಲುವು ತಮ್ಮದಾಗಿಸಿಕೊಂಡರು.

ಅಸಹಜವಾಗಿ ಆಕ್ರಮಣಕಾರಿಯಾಗಿದ್ದ 12 ನೇ ಶ್ರೇಯಾಂಕದ ಚೌ ವಿರುದ್ಧ ಲಕ್ಷ್ಯ ಶ್ರೇಯಾಂಕರಹಿತ ಆಟಗಾರನಾಗಿ ಹೋರಾಡಿದರು. ರೌಂಡ್ ಆಫ್ 16 ರಲ್ಲಿ ತಮ್ಮ ಸಹ ಆಟಗಾರ ಎಚ್.ಎಸ್.ಪ್ರಣಯ್ ವಿರುದ್ಧ ನೇರ ಗೇಮ್ ಗೆಲುವು ಸಾಧಿಸಿದ್ದ ಅವರಿಗೆ ಈ ಪಂದ್ಯದಲ್ಲಿ ಹೆಚ್ಚು ಸವಾಲು ಎದುರಾಯಿತು. ಲಕ್ಷ್ಯ 75 ನಿಮಿಷಗಳ ಸ್ಪರ್ಧೆಯುದ್ದಕ್ಕೂ ಹೆಚ್ಚು ಉತ್ಸಾಹ ತೋರಿದರು. ಅಂದ ಹಾಗೆ ತೈವಾನ್ ಶಟ್ಲರ್ ವಿರುದ್ಧ ಲಕ್ಷ್ಯ ಇದುವರೆಗಿನ ಐದು ಪಂದ್ಯಗಳಲ್ಲಿ ಎರಡನೇ ಗೆಲುವು ಸಾಧಿಸಿದರು.

ಲಕ್ಷ್ಯ ಮತ್ತು ಚೌ ಇಬ್ಬರೂ ಒಲಿಂಪಿಕ್ಸ್​​ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದರು. ಶಾಟ್-ಮೇಕಿಂಗ್ ಮತ್ತು ರಿಸೀವಿಂಗ್ ಉತ್ತಮ ಮಟ್ಟದಲ್ಲಿತ್ತು. ಇಬ್ಬರೂ ಶಟ್ಲರ್ ಗಳು ತಮ್ಮ ವೇಗ ಮತ್ತು ಪ್ರತಿಕ್ರಿಯೆನ್ನು ಉತ್ತಮವಾಗಿ ಪ್ರದರ್ಶಿಸಿದರು. ವಾಯಿತು. ಆರಂಭಿಕ ಗೇಮ್ ನಲ್ಲಿ ಸರ್ವಿಸ್ ಎಕ್ಸ್ ಚೇಂಜ್ ಅಗಿದ್ದರಿಂದ ಲಕ್ಷ್ಯ ಮತ್ತು ಚೌ ಪರಸ್ಪರ ಒಂದಿಂಚೂ ಬಿಟ್ಟುಕೊಡಲಿಲ್ಲ. ಆರಂಭಿಕ ಗೇಮ್ ನಲ್ಲಿ ಚೌ 11-10ರ ಮುನ್ನಡೆ ಸಾಧಿಸುವ ಮೊದಲು 7-7ರ ವರೆಗೆ ಹೋರಾಟ ಮುಂದುವರಿದಿತ್ತು.

ಲಕ್ಷ್ಯಗಿಂತ 10 ವರ್ಷ ಹಿರಿಯರಾದ ಚೌ, ತಮ್ಮ ಆಕ್ರಮಣಕಾರಿ ಆಟದಿಂದ ಭಾರತೀಯ ಶಟ್ಲರ್ ಅನ್ನು ಅಚ್ಚರಿಗೊಳಿಸುತ್ತಿದ್ದರು. ತೈವಾನ್ ನ ಶಟರ್ ಆ ಶಕ್ತಿಯುತ ಸ್ಮ್ಯಾಶ್ ಗಳ ಜತೆಗೆ ನೆಟ್ ಸಮೀಪ ಧಾವಿಸಿ ಭಾರತೀಯನ ಮೇಲೆ ಒತ್ತಡ ಹೇರಿದರ. ದೀರ್ಘ ರ್ಯಾಲಿಗಳನ್ನು ಆಡಲು ಮತ್ತು ಎದುರಾಳಿ ಸುಸ್ತಾಗುವಂತೆ ಮಾಡಲು ಚೌ ಯತ್ನಿಸಿದರು.

ಇದನ್ನೂ ಓದಿ: IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈನಲ್ಲಿ ಮುಕ್ತಾಯ

ಆರಂಭಿಕ ಗೇಮ್ನಲ್ಲಿ ಚೌ 14-9 ರಿಂದ ಮುನ್ನಡೆ ಸಾಧಿಸಿದರು, ನಂತರ ಲಕ್ಷ್ಯ ತನ್ನ ಆಟಕ್ಕೆ ವೇಗ ಕೊಟ್ಟರು. ಹೀಗಾಗಿ ಲಕ್ಷ್ಯ 18-16ರಲ್ಲಿ ಮುನ್ನಡೆ ಸಾಧಿಸಿದರು. ಆದಾಗ್ಯೂ, ಚೌ ತಮ್ಮ ಆಟವನ್ನು ಹೆಚ್ಚಿಸಿದರು ಮತ್ತು ಮೊದಲ ಪಂದ್ಯವನ್ನು 21-19 ರಿಂದ ಗೆದ್ದರು.

ಲಕ್ಷ್ಯ ಏಕಾಗ್ರತೆಯ ಆಟ

ಎರಡನೇ ಗೇಮ್ ನಲ್ಲಿ ಲಕ್ಷ್ಯ ಒತ್ತಡದಲ್ಲಿದ್ದರು . ಆಟದ ಮಧ್ಯದ ವಿರಾಮದ ಸಮಯದಲ್ಲಿ ಚೇರ್ ಅಂಪೈರ್ ನೊಂದಿಗೆ ವಾದಿಸಿದರು. ಭಾರತದ ಕೋಚಿಂಗ್ ಬೆಂಚ್ ನಲ್ಲಿದ್ದ ಪ್ರಕಾಶ್ ಪಡುಕೋಣೆ ಮತ್ತು ವಿಮಲ್ ಕುಮಾರ್ ಅವರು ಲಕ್ಷ್ಯ ಅವರನ್ನು ಶಾಂತಗೊಳಿಸಿದರು. ಏಕಾಗ್ರತೆಯ ಸಣ್ಣ ಕುಸಿತವು ಅವರ ಆಟದ ಮೇಲೆ ಪರಿಣಾಮ ಬೀರಲು ಅವಕಾಶ ನೀಡಲಿಲ್ಲ, ಏಕೆಂದರೆ ಆ ಗೇಮ್ ಅನ್ನು ಅವರು 17 ನಿಮಿಷಗಳಲ್ಲಿ 21-15 ಅಂಕಗಳಿಂದ ಗೆದ್ದರು.

ನಿರ್ಣಾಯಕ ಗೇಮ್​ನಲ್ಲಿ ಲಕ್ಷ್ಯ ತನ್ನ ಸಂವೇದನಾಶೀಲರಾಗಿ ಆಡಿದರು. ಆಕ್ರಮಣಕಾರಿ ಮತ್ತು ಎಚ್ಚರಿಕೆಯ ಉತ್ತಮ ಮಿಶ್ರಣದೊಂದಿಗೆ 11-7 ಮುನ್ನಡೆ ಸಾಧಿಸಿದರು. ಕೊನೆಯಲ್ಲಿ ಆಟವನ್ನು 21-12 ರಲ್ಲಿ ಸುಲಭವಾಗಿ ಮುಗಿಸಿದರು. ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ಮಾಜಿ ಆಲ್ ಇಂಗ್ಲೆಂಡ್ ಫೈನಲಿಸ್ಟ್ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Exit mobile version