ಮುಂಬಯಿ: ಸಾರ್ವಜನಿಕ ವಲಯದ ಭಾರತೀಯ ಜೀವ ವಿಮಾ ನಿಗಮದ (LIC) ಷೇರು ದರದಲ್ಲಿ ಸೋಮವಾರ 9% ಹೆಚ್ಚಳವಾಗಿದೆ.
ಎರಡನೇ ತ್ರೈಮಾಸಿಕದಲ್ಲಿ ಎಲ್‌ಐಸಿ 15,952 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,433 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಈ ಗಣನೀಯ ಹೆಚ್ಚಳದ ಬೆನ್ನಲ್ಲೇ ಎಲ್‌ಐಸಿ ಷೇರು ದರದಲ್ಲಿ 9% ಹೆಚ್ಚಳ ಕಂಡು ಬಂದಿತು. ಎಲ್‌ಐಸಿ ತನ್ನ ಹೂಡಿಕೆಯಿಂದ 84,104 ಕೋಟಿ ರೂ. ಆದಾಯ ಗಳಿಸಿತ್ತು. 10% ಏರಿಕೆಯಾಯಿತು.
ಬೆಳಗ್ಗೆ 11 ಗಂಟೆಯ ವೇಳೆಗೆ ಎಲ್‌ಐಸಿ ಷೇರು ದರ 662 ರೂ. ಇತ್ತು. (5.51%) ಏರಿಕೆಯ ಮಟ್ಟದಲ್ಲಿ ಇತ್ತು. ಐಪಿಒದಲ್ಲಿ ಪ್ರತಿ ಷೇರಿನ ಬಿಡುಗಡೆಯ ದರ 949 ರೂ. ಇತ್ತು.