ಬೆಂಗಳೂರು: ಮಿತಿಮೀರಿದ ತಾಪಮಾನದಿಂದ ಬೇಸತ್ತಿದ ಬೆಂಗಳೂರಿನ ಮಂದಿಗೆ ಗುರುವಾರ ಸಂಜೆ ಸುರಿದ ಸಣ್ಣ ಮಳೆ ಸಮಾಧಾನ (Rain News) ತಂದಿತು. ಆದರೆ, ಮಳೆಗಿಂತ ಅಧಿಕ ಗಾಳಿಯೇ ಬೀಸಿದ ಕಾರಣ ಕೆಲವೆಡೆ ಸಣ್ಣ ಪುಟ್ಟ ಅನಾಹುತಗಳು ಸಂಭವಿಸಿದವು. ವಾಹನಗಳ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಗೊಂಡವು. ಬೈಕ್ ಸವಾರರೊಬ್ಬರು ಏಟು ಬಿದ್ದು ಆಸ್ಪತ್ರೆ ಸೇರಿದರು. ಅದೇ ರೀತಿ ಮೊದಲ ಮಳೆಗೆ ಆಯಿಲ್ ಬಿದ್ದಿದ್ದ ರಸ್ತೆಗಳು ಒದ್ದೆಯಾಗಿ 30ಕ್ಕೂ ಹೆಚ್ಚು ಬೈಕ್ಗಳು ಸ್ಕಿಡ್ ಆಗಿ ಬಿದ್ದವು.
ದಿಢೀರ್ ಮಳೆಯಿಂದಾಗಿ ಸರ್ವಿಸ್ ರಸ್ತೆಗಳು ಹೆಬ್ಬಾಳ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಚರಂಡಿಯಲ್ಲಿ ಮಣ್ಣು ಹಾಗೂ ಕಸ ತುಂಬಿರುವುದರಿಂದ ಅನೇಕ ಕಡೆಗಳಲ್ಲಿ ಚರಂಡಿಗೆ ನೀರು ಹೋಗದೆ ರಸ್ತೆಯಲ್ಲಿ ನೀರು ನಿಂತ ಕಾರಣ ಅಧಿಕಾರಿ ಮತ್ತು ಸಿಬ್ಬಂದಿರವರು ರಸ್ತೆಯಲ್ಲಿ ನಿಂತ ಮಳೆ ನೀರನ್ನು ಹರಿದು ಬಿಟ್ಟು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ pic.twitter.com/u0YmT05xXP
— K.R.PURA TRAFFIC POLICE.BENGALURU. (@KRPURATRAFFIC) May 2, 2024
ಬೆಂಗಳೂರಿನಲ್ಲಿ ಹಗಲಿಡೀ 38 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಸಂಜೆ ವೇಳೆ ಜೋಉ ಗಾಳಿಯೊಂದಿಗೆ ಮಳೆ ಬಂತು. ಮಳೆ ಜೋರಾಗಿರಲಿಲ್ಲ ಗಾಳಿಯ ವೇಗ ಮಿತಿ ಮೀರಿತ್ತು. ಹೀಗಾಗಿ ಕೊಂಬೆಗಳು ಉರುಳಿ ಬಿದ್ದವು. ಕೊಡಿಗೆಹಳ್ಳಿಯ ರೈಲ್ವೆ ಪ್ಯಾರಲ್ ರಸ್ತೆಯಲ್ಲಿ ಸಂಜೆ ವೇಳೆ ಮರ ಬಿದ್ದು ಬೈಕ್ ಸವಾರ ಗಾಯಗೊಂಡಿದ್ದಾನೆ. ಅವರು ಮರ ಬಿದ್ದ ರಭಸಕ್ಕೆ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
"ಸಂಚಾರ ಸಲಹೆ"
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 2, 2024
ಸದಾಶಿವನಗರದ ಸ್ಯಾಂಕಿ ರಸ್ತೆಯಲ್ಲಿ ರಸ್ತೆಯ ಮೇಲೆ ಹಸಿ ಹಣ್ಣುಗಳು ಮರದಿಂದ ಬಿದ್ದಿರುವುದರಿಂದ ವಾಹನಗಳು ಸಂಚರಿಸಿದ ನಂತರ ಅದರಿಂದ ತೈಲ ಬಿಡುಗಡೆಯಾಗುತ್ತಿದ್ದು, ಇದರಿಂದಾಗಿ ರಸ್ತೆಯಲ್ಲಿ ವಾಹನಗಳು ಜಾರುತ್ತಿರುತ್ತವೆ . ಸ್ಯಾಂಕಿ ರಸ್ತೆಯಲ್ಲಿ ಸವಾರರು ಸುರಕ್ಷಿತವಾಗಿ ಸಂಚರಿಸುವಂತೆ ಕೋರಿದೆ .
"Traffic Advisory"
Due to… pic.twitter.com/GaTL6e37md
ಅದೇ ರೀತಿ ಕಾರಿನ ಮೇಲೆ ಮೇಲೆ ಮರ ಬಿದ್ದ ಪರಿಣಾಮ ಕಾರಿಗೆ ಹಾನಿಯಾಗಿದೆ. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಪೆಟ್ಟಾಗಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಟಾರ್ಚ್ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್ ಸಿನಿಮಾ ದೃಶ್ಯ ಇಲ್ಲಿ ದುರಂತ!
ಕೆಲ ರಸ್ತೆಗಳು ಆಯಿಲ್ ಮಯ
ಸಂಜೆ ವೇಳೆ ಮಳೆ ಸುರಿದ ಕಾರಣ ಬೇಸಿಗೆಯಲ್ಲಿ ರಸ್ತೆ ಮೇಲೆ ಬಿದ್ದಿದ್ದ ಆಯಿಲ್ ಮೇಲಕ್ಕೆ ಬಂದು ನಿಂತಿತು. ಇದರಿಂದಾಗಿ ದ್ವಿಚಕ್ರ ವಾಹನಗಳು ಆಯತಪ್ಪಿ ಬಿದ್ದವು ಸಣ್ಣ ಮಳೆ ಬಿದ್ದ ಕಡೆಗಳಲ್ಲಿ ರಸ್ತೆಗಳಲ್ಲಿ ಆಯಿಲ್ ಕಾಣಿಸಿಕೊಂಡಿತು. ವಿಚಾರ ತಿಳಿಯದೆ ವೇಗವಾಗಿ ಹೋದ ಸ್ಕೂಟರ್ಗಳು ಬಿದ್ದವು. ವಿಧಾನಸೌಧದ ಮುಂಭಾಗದ ರಸ್ತೆ , ಹಾಗು ಪೀಣ್ಯ ಎಲಿವೇಟೆಡ್ ಫ್ಲೈ ಓವರ್ , ಸಿಐಡಿ ಮುಂಭಾಗದ ರಸ್ತೆಯಲ್ಲಿ ಅವಾಂತರ ನಡೆಯಿತು.
ರಸ್ತೆ ಮೇಲೆ ಮಣ್ಣು ಹಾಕಿ ದ್ವಿಚಕ್ರ ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟರು.