Site icon Vistara News

IPL 2024 : ಬ್ರೂಕ್​ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಲಿಜಾದ್​ ಯಾರು?

IPL 2024

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಉಳಿದ ಭಾಗಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಹ್ಯಾರಿ ಬ್ರೂಕ್ ಬದಲಿಗೆ ಲಿಜಾದ್ ವಿಲಿಯಮ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇಂಗ್ಲೆಂಡ್ ಬ್ಯಾಟರ್​ ತನ್ನ ಅಜ್ಜಿಯ ನಿಧನದ ನಂತರ ಲೀಗ್ ಪ್ರಾರಂಭವಾಗುವ ಕೆಲವು ದಿನಗಳ ಮೊದಲು 17 ನೇ ಆವೃತ್ತಿಯಿಂದ ಹಿಂದೆ ಸರಿದಿದ್ದರು. ಕಳೆದ ವರ್ಷ ನಡೆದ ಐಪಿಎಲ್ 2024 ರ ಹರಾಜಿನಲ್ಲಿ ಬ್ರೂಕ್ ಅವರ ಸೇವೆಗಳನ್ನು ಕ್ಯಾಪಿಟಲ್ಸ್ 4 ಕೋಟಿ ರೂ.ಗೆ ಖರೀದಿಸಿತ್ತು. ಹೀಗಾಗಿ ಕುಟುಂಬದೊಂದಿಗೆ ಸಮಯ ಕಳೆಯಲು ಐಪಿಎಲ್ 2024 ಅನ್ನು ಬಿಟ್ಟುಬಿಡಲು ನಿರ್ಧರಿಸಿದ ನಂತರ, ಕ್ಯಾಪಿಟಲ್ಸ್ ಅವರ ಬದಲಿ ಆಟಗಾರನನ್ನು ತಕ್ಷಣ ಘೋಷಿಸಲಿಲ್ಲ. ಇದೀಗ ಬೇರೆ ಆಟಗಾರನನ್ನು ನೇಮಿಸಿದೆ.

ಏಪ್ರಿಲ್ 8, ಸೋಮವಾರ, ದಕ್ಷಿಣ ಆಫ್ರಿಕಾದ ವೇಗಿ ಲಿಜಾದ್ ವಿಲಿಯಮ್ಸ್ ಅವರನ್ನು ಬ್ರೂಕ್ ಬದಲಿಗೆ ರಿಷಭ್ ಪಂತ್ ನೇತೃತ್ವದ ಫ್ರಾಂಚೈಸಿ ಆಯ್ಕೆ ಮಾಡಿದೆ. ಬಲಗೈ ವೇಗಿ 2021 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದಾರೆ. ವಿಲಿಯಮ್ಸ್ 2 ಟೆಸ್ಟ್, 4 ಏಕದಿನ ಮತ್ತು 11 ಟಿ 20 ಪಂದ್ಯಗಳಲ್ಲಿ ಕ್ರಮವಾಗಿ ಮೂರು, ಐದು ಮತ್ತು 16 ವಿಕೆಟ್​​ಗಳನ್ನು ಪಡೆದಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ನಡೆದ ಏಕದಿನ ಸರಣಿಯಲ್ಲಿ ಅವರು ಭಾರತದ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ಇದನ್ನೂ ಓದಿ: Virat kohli : ಕೊಹ್ಲಿ ಒಬ್ಬ ಸುಳ್ಳ; ಮಾಜಿ ಕ್ರಿಕೆಟಿಗನ ಆರೋಪ

ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು 30ರ ಹರೆಯದ ಆಟಗಾರ ಹೊಂದಿದ್ದಾರೆ. ಭಾರತದಲ್ಲಿ ನಡೆಯಲಿರುವ 2023 ರ ಏಕದಿನ ವಿಶ್ವಕಪ್​​ಗೆ ದಕ್ಷಿಣ ಆಫ್ರಿಕಾದ 15 ಸದಸ್ಯರ ತಂಡದಲ್ಲಿ ಗಾಯಗೊಂಡ ಆ್ಯನ್ರಿಚ್ ನೋರ್ಜೆ ಬದಲಿಯಾಗಿ ಅವರನ್ನು ಕರೆಸಲಾಗಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ಪರಿಸ್ಥಿತಿ ಬದಲಾಗುವುದೇ?

ಕಳೆದ ವರ್ಷ ಪಾಯಿಂಟ್ಸ್ ಟೇಬಲ್​ನಲ್ಲಿ 9 ನೇ ಸ್ಥಾನದಲ್ಲಿದ್ದ ಕ್ಯಾಪಿಟಲ್ಸ್ ಈ ಋತುವಿನಲ್ಲಿ ತಿರುವು ಪಡೆಯುವ ನಿರೀಕ್ಷೆಯಲ್ಲಿತ್ತು. ರಿಷಭ್ ಪಂತ್ ಮರಳಿರುವುದು ಅವರಿಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡಿರಬೇಕಿತ್ತು. ಆದಾಗ್ಯೂ, ದೆಹಲಿ ಮೂಲದ ಫ್ರಾಂಚೈಸಿ ಒಂದು ಘಟಕವಾಗಿ ಆಡಲು ಸಾಧ್ಯವಾಗಲಿಲ್ಲ. ಮೊದಲ ಐದು ಪಂದ್ಯಗಳಲ್ಲಿ ನಾಲ್ಕು ಸೋಲುಗಳನ್ನು ಅನುಭವಿಸಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 7) ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 29 ರನ್​​ಗಳ ಸೋಲನುಭವಿಸಿದೆ. ಐಪಿಎಲ್ 2024 ರಲ್ಲಿ ತಮ್ಮ ಮೊದಲ ಮೂರು ಪಂದ್ಯಗಳಲ್ಲಿ ಸೋತ ನಂತರ ಐದು ಬಾರಿಯ ಚಾಂಪಿಯನ್ಸ್ ಸಿಎಸ್​ಕೆ ವಿರುದ್ಧ ಗೆಲುವು ಸಾಧಿಸಿತ್ತು.

Exit mobile version