ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿಗೆ ಇತ್ತೀಚಿನ ಸೇರ್ಪಡೆಗೊಂಡ ನ್ಯೂಜಿಲೆಂಡ್ನ ವೇಗದ ಬೌಲರ್ ಲಾಕಿ ಫರ್ಗ್ಯೂಸನ್ (Lockie Ferguson) ತಮ್ಮ ದೀರ್ಘಕಾಲದ ಗೆಳತಿ ಎಮ್ಮಾ ಕೊಮೊಕಿ ಅವರನ್ನು ವಿವಾಹವಾಗಿದ್ದಾರೆ. ತಾವು ಹೊಸ ಇನಿಂಗ್ಸ್ಗೆ ಕಾಲಿಟ್ಟ ಮಾಹಿತಿಯನ್ನು ಅವರು ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ. ಈ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ತಲುಪಿಸಿದ್ದಾರೆ.
32 ವರ್ಷದ ಕಿವೀಸ್ ವೇಗದ ಬೌಲರ್ ಫೆಬ್ರವರಿ 9 ರ ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹಂಚಿಕೊಂಡ ಸುಂದರವಾದ ಚಿತ್ರಗಳ ಮೂಲಕ ಮದುವೆಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ವೇಗದ ಬೌಲಿಂಗ್ ಹಾಊ ಮಾರಕ ಬೌಲಿಂಗ್ಗೆ ಹೆಸರುವಾಸಿಯಾದ ಲಾಕಿ ಫರ್ಗುಸನ್ ಈಗ ನ್ಯೂಜಿಲೆಂಡ್ನಲ್ಲಿ ನೆಲೆಸಿರುವ ಬ್ರಿಟಿಷ್ ಪ್ರಜೆ ಎಮ್ಮಾ ಕೊಮೊಕಿ ಅವರ ಒಡನಾಟ ಹೊಂದಿದ್ದರು. ಎಮ್ಮ ಅವರು ಕ್ರೀಡಾ ಫಿಸಿಯೋಥೆರಪಿಸ್ಟ್ ವೃತ್ತಿಯನ್ನು ಮಾಡುತ್ತಿದ್ದಾರೆ. ಅವರು ಎಮ್ಮಾ ನ್ಯೂಜಿಲೆಂಡ್ ಹಾಕಿ ತಂಡದ ಸಹಾಯಕ ಸಿಬ್ಬಂದಿಯ ಅವಿಭಾಜ್ಯ ಅಂಗವಾಗಿದ್ದಾರೆ. ಈ ಹಿಂದೆ, ಅವರು ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ತಮ್ಮ ಅನುಭವವನ್ನು ಹೊಂದಿದ್ದಾರೆ.
ಇದನ್ನೂ ಓದಿ : Shubman Gill: ಶತಕದ ಶ್ರೇಯವನ್ನು ಶ್ರೇಯಸ್ ಅಯ್ಯರ್ಗೆ ಅರ್ಪಿಸಿದ ಗಿಲ್; ಕಾರಣವೇನು?
ಕಳೆದ ವರ್ಷ ಫೆಬ್ರವರಿಯಲ್ಲಿ ಅವರಿಬ್ಬೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಭವ್ಯ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ದಂಪತಿಗಳ ಪ್ರಯಾಣವು ಅವರ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಗಮನಾರ್ಹ ಪ್ರದರ್ಶನಗಳೊಂದಿಗೆ ಕ್ರಿಕೆಟ್ ಮೈದಾನದಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದ ಲಾಕಿ ಫರ್ಗುಸನ್ ಈಗ ಮೈದಾನದ ಹೊರಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ಎಮ್ಮಾ ಅವರ ಪಕ್ಕದಲ್ಲಿದ್ದಾರೆ.
ಮುಂಬರುವ ಐಪಿಎಲ್ 2024 ಋತುವಿನಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ಲಾಕಿ ಫರ್ಗುಸನ್ ಆರ್ಸಿಬಿ ತಂಡವನ್ನು ಪ್ರತಿನಿಧಿಸಲಿದ್ದಾರೆ.