ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ, ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಲೋಕಸಭೆ ಚುನಾವಣೆಯು (Lok Sabha Election 2024) ಮುಕ್ತಾಯಗೊಂಡಿದೆ. ಈಗ ಮತಗಟ್ಟೆ ಸಮೀಕ್ಷೆಯ ವರದಿಗಳು ಲಭ್ಯವಾಗಲಿವೆ. ಚುನಾವಣೆ ಫಲಿತಾಂಶ ಏನಾಗಬಹುದು? ಯಾವ ಪಕ್ಷಕ್ಕೆ ಹೆಚ್ಚಿನ ಕ್ಷೇತ್ರಗಳು ಸಿಗಬಹುದು? ಯಾರು ದೇಶದ ಪ್ರಧಾನಿಯಾಗಬಹುದು ಎಂಬುದಕ್ಕೆ ಮತಗಟ್ಟೆ ಸಮೀಕ್ಷೆಯು ದಿಕ್ಸೂಚಿಯಾಗಿದೆ. ಹಾಗಾಗಿ, ಚುನಾವಣೋತ್ತರ ಸಮೀಕ್ಷೆಯು ಫಲಿತಾಂಶದಷ್ಟೇ ಕುತೂಹಲ ಕೆರಳಿಸಿದೆ. ಈ ಮತಗಟ್ಟೆ ಸಮೀಕ್ಷೆಯ ಕ್ಷಣಕ್ಷಣದ (Exit Poll 2024 Live) ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Exit Poll 2024: ಸಟ್ಟಾ ಬಜಾರ್, ರಾಜಕೀಯ ಪರಿಣತರ ಪ್ರಕಾರ ಈ ಬಾರಿಯೂ ಮೋದಿ; ನಿಮ್ಮ ಪ್ರಕಾರ ಯಾರಿಗೆ ಅಧಿಕಾರ? ತಿಳಿಸಿ
ಕರ್ನಾಟಕದಲ್ಲಿ ಯಾರಿಗೆ ಎಷ್ಟು ಕ್ಷೇತ್ರ?
ವಿಸ್ತಾರ-COPS: ಬಿಜೆಪಿ 18-20, ಕಾಂಗ್ರೆಸ್ 8-10, ಜೆಡಿಎಸ್ 2-3
ಜನ್ ಕೀ ಬಾತ್: ಬಿಜೆಪಿ 17-23, ಕಾಂಗ್ರೆಸ್ 4-8, ಜೆಡಿಎಸ್ 1-2
ಝೀ ನ್ಯೂಸ್: ಬಿಜೆಪಿ 18-22, ಕಾಂಗ್ರೆಸ್ 4-6, ಜೆಡಿಎಸ್ 1-3
CNN ನ್ಯೂಸ್ 18: ಬಿಜೆಪಿ 21-23, ಕಾಂಗ್ರೆಸ್ 3-7, ಜೆಡಿಎಸ್ 2-3
ಪೋಲ್‌ಸ್ಟ್ರಾಟ್: ಬಿಜೆಪಿ 18, ಕಾಂಗ್ರೆಸ್-08, ಜೆಡಿಎಸ್-02 ಸ್ಥಾನ
ಇಂಡಿಯಾ ಟಿವಿ: ಬಿಜೆಪಿ 18-22, ಕಾಂಗ್ರೆಸ್ 4-8, ಜೆಡಿಎಸ್ 1-3
ಸಿ-ವೋಟರ್: ಬಿಜೆಪಿ 21-22, ಕಾಂಗ್ರೆಸ್ 3-5, ಜೆಡಿಎಸ್ 1-3
ಇಂಡಿಯಾ ಟುಡೇ: ಬಿಜೆಪಿ 20-22, ಕಾಂಗ್ರೆಸ್ 3-5, ಜೆಡಿಎಸ್ 2-3
ಪೋಲ್ ಆಫ್ ಪೋಲ್: ಬಿಜೆಪಿ-20, ಕಾಂಗ್ರೆಸ್-6, ಜೆಡಿಎಸ್-2
ಟೈಮ್ಸ್ ನೌ: ಬಿಜೆಪಿ 21-25, ಕಾಂಗ್ರೆಸ್ 3-7, ಜೆಡಿಎಸ್ 1-2
ಇಂಡಿಯಾ ನ್ಯೂಝ್: ಬಿಜೆಪಿ-21, ಕಾಂಗ್ರೆಸ್-5, ಜೆಡಿಎಸ್-2
ನ್ಯೂಸ್ ನೇಷನ್: ಬಿಜೆಪಿ-16, ಕಾಂಗ್ರೆಸ್-10, ಜೆಡಿಎಸ್-02
ನ್ಯೂಸ್ 24-ಟುಡೇಸ್ ಚಾಣಕ್ಯ: ಬಿಜೆಪಿ-ಜೆಡಿಎಸ್ 24, ಕಾಂಗ್ರೆಸ್-4
ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲುಗೈ
ರಾಮಮಂದಿರ ನಿರ್ಮಾಣ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಅವರ ಅಲೆಯಿಂದಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದಾಗಿ ಸಮೀಕ್ಷೆಗಳು ತಿಳಿಸಿವೆ. ರಿಪಬ್ಲಿಕ್ ಭಾರತ್ ವರದಿ ಪ್ರಕಾರ ಎನ್‌ಡಿಎ 69-74, ಇಂಡಿಯಾ ನ್ಯೂಸ್-ಡಿ ಡೈನಾಮಿಕ್ಸ್ ಪ್ರಕಾರ 69 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.
ರಾಜಸ್ಥಾನದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿಯು ಎಲ್ಲ 26ಕ್ಕೆ 26 ಕ್ಷೇತ್ರಗಳನ್ನೂ ತನ್ನ ಮಡಿಲಿಗೆ ಸೆಳೆಯಲಿದೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿವೆ. ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಯು ಎಲ್ಲ ಕ್ಷೇತ್ರಗಳಲ್ಲಿ ಜಯಿಸಲಿದೆ. ಈಗಾಗಲೇ ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 25 ಕ್ಷೇತ್ರಗಳಲ್ಲಿ ಕಮಲ ಅರಳಲಿದೆ. ಕಾಂಗ್ರೆಸ್, ಆಪ್ ಖಾತೆ ಕೂಡ ತೆರೆಯುವುದಿಲ್ಲ ಎಂದು ತಿಳಿಸಿದೆ.
ಮತಗಟ್ಟೆ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ ಎಂದ ಡಿಕೆಶಿ
ಚುನಾವಣೋತ್ತರ ಸಮೀಕ್ಷೆಗಳ ವರದಿಗಳು ಪ್ರಕಟವಾಗುತ್ತಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, “ನನಗೆ ಮತಗಟ್ಟೆ ಸಮೀಕ್ಷೆಗಳ ಬಗ್ಗೆ ನಂಬಿಕೆ ಇಲ್ಲ. ಆದರೆ, ನಾನು ಮೊದಲೇ ಹೇಳಿದ್ದೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್‌ಗೆ ಹೋಗುತ್ತದೆ. ಸ್ಯಾಂಪಲ್ ಅಷ್ಟೇ ಸಂಗ್ರಹಿಸಿ ವರದಿಗಳನ್ನು ತಯಾರಿಸುವುದರಿಂದ ಇವುಗಳ ಮೇಲೆ ನಂಬಿಕೆ ಇಲ್ಲ” ಎಂದು ಹೇಳಿದ್ದಾರೆ.
ಕರ್ನಾಟಕದ ಕುರಿತು ಸಮೀಕ್ಷೆಗಳು ಏನು ಹೇಳುತ್ತವೆ?
ಸಂಸ್ಥೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್
ಇಂಡಿಯಾ ಟುಡೇ 20-22 03-05 02-03
ಪೋಲ್ ಸ್ಟ್ರ್ಯಾಟ್ 18 08 02
ಇಂಡಿಯಾ ನ್ಯೂಸ್ 21 05 02
ಜನ್ ಕಿ ಬಾತ್ 17-23 04-08 01-02