ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ, ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಲೋಕಸಭೆ ಚುನಾವಣೆಯು (Lok Sabha Election 2024) ಮುಕ್ತಾಯಗೊಂಡಿದೆ. ಈಗ ಮತಗಟ್ಟೆ ಸಮೀಕ್ಷೆಯ ವರದಿಗಳು ಲಭ್ಯವಾಗಲಿವೆ. ಚುನಾವಣೆ ಫಲಿತಾಂಶ ಏನಾಗಬಹುದು? ಯಾವ ಪಕ್ಷಕ್ಕೆ ಹೆಚ್ಚಿನ ಕ್ಷೇತ್ರಗಳು ಸಿಗಬಹುದು? ಯಾರು ದೇಶದ ಪ್ರಧಾನಿಯಾಗಬಹುದು ಎಂಬುದಕ್ಕೆ ಮತಗಟ್ಟೆ ಸಮೀಕ್ಷೆಯು ದಿಕ್ಸೂಚಿಯಾಗಿದೆ. ಹಾಗಾಗಿ, ಚುನಾವಣೋತ್ತರ ಸಮೀಕ್ಷೆಯು ಫಲಿತಾಂಶದಷ್ಟೇ ಕುತೂಹಲ ಕೆರಳಿಸಿದೆ. ಈ ಮತಗಟ್ಟೆ ಸಮೀಕ್ಷೆಯ ಕ್ಷಣಕ್ಷಣದ (Exit Poll 2024 Live) ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Exit Poll 2024: ಸಟ್ಟಾ ಬಜಾರ್, ರಾಜಕೀಯ ಪರಿಣತರ ಪ್ರಕಾರ ಈ ಬಾರಿಯೂ ಮೋದಿ; ನಿಮ್ಮ ಪ್ರಕಾರ ಯಾರಿಗೆ ಅಧಿಕಾರ? ತಿಳಿಸಿ
ನ್ಯೂಸ್ ಎಕ್ಸ್: ಎನ್‌ಡಿಎಗೆ ಬಹುಮತ ಎಂದ ಸಮೀಕ್ಷೆ
ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಯನ್ನು ನ್ಯೂಸ್ ಎಕ್ಸ್ ಕೈಗೊಂಡಿದ್ದು, ಎನ್‌ಡಿಎ 371, ಇಂಡಿಯಾ ಒಕ್ಕೂಟ 125 ಹಾಗೂ ಇತರೆ 47 ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ.
ಇಂಡಿಯಾ ನ್ಯೂಸ್-ಡಿ ಡೈನಾಮಿಕ್ಸ್
ಎನ್‌ಡಿಎ 371
ಇಂಡಿಯಾ ಒಕ್ಕೂಟ 125
ಇತರೆ 47
ಮ್ಯಾಟ್ರಿಜ್- ಉತ್ತರ ಪ್ರದೇಶ
ಎನ್‌ಡಿಎ: 69-74
ಇಂಡಿಯಾ ಒಕ್ಕೂಟ: 6-11
ವಿಸ್ತಾರ ನ್ಯೂಸ್-COPS
ಎನ್‌ಡಿಎ: 330-350
ಇಂಡಿಯಾ ಒಕ್ಕೂಟ: 130-150
ಇತರೆ: 20-30
ಪಿ ಮಾರ್ಕ್ ಸಮೀಕ್ಷೆ
ಎನ್‌ಡಿಎ: 359
ಇಂಡಿಯಾ: ಒಕ್ಕೂಟ 154
ಇತರೆ: 30