Site icon Vistara News

Exit Poll 2024 Live: ಎನ್‌ಡಿಎಗೆ 350+, ಇಂಡಿಯಾ ಒಕ್ಕೂಟಕ್ಕೆ 120+; ಪೋಲ್‌ ಆಫ್‌ ಪೋಲ್ಸ್ ಪ್ರಕಾರ ಮೋದಿ ಹ್ಯಾಟ್ರಿಕ್

Exit Poll Live 2024

Exit Poll 2024 Live Updates In Vistara News Kannada

ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ, ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಲೋಕಸಭೆ ಚುನಾವಣೆಯು (Lok Sabha Election 2024) ಮುಕ್ತಾಯಗೊಂಡಿದೆ. ಈಗ ಮತಗಟ್ಟೆ ಸಮೀಕ್ಷೆಯ ವರದಿಗಳು ಲಭ್ಯವಾಗಲಿವೆ. ಚುನಾವಣೆ ಫಲಿತಾಂಶ ಏನಾಗಬಹುದು? ಯಾವ ಪಕ್ಷಕ್ಕೆ ಹೆಚ್ಚಿನ ಕ್ಷೇತ್ರಗಳು ಸಿಗಬಹುದು? ಯಾರು ದೇಶದ ಪ್ರಧಾನಿಯಾಗಬಹುದು ಎಂಬುದಕ್ಕೆ ಮತಗಟ್ಟೆ ಸಮೀಕ್ಷೆಯು ದಿಕ್ಸೂಚಿಯಾಗಿದೆ. ಹಾಗಾಗಿ, ಚುನಾವಣೋತ್ತರ ಸಮೀಕ್ಷೆಯು ಫಲಿತಾಂಶದಷ್ಟೇ ಕುತೂಹಲ ಕೆರಳಿಸಿದೆ. ಈ ಮತಗಟ್ಟೆ ಸಮೀಕ್ಷೆಯ ಕ್ಷಣಕ್ಷಣದ (Exit Poll 2024 Live) ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Exit Poll 2024: ಸಟ್ಟಾ ಬಜಾರ್‌, ರಾಜಕೀಯ ಪರಿಣತರ ಪ್ರಕಾರ ಈ ಬಾರಿಯೂ ಮೋದಿ; ನಿಮ್ಮ ಪ್ರಕಾರ ಯಾರಿಗೆ ಅಧಿಕಾರ? ತಿಳಿಸಿ

B Somashekhar

ಮ್ಯಾಟ್ರಿಜ್

‌ಎನ್‌ಡಿಎ: 353-368
ಇಂಡಿಯಾ ಒಕ್ಕೂಟ: 120

B Somashekhar

ಹೀಗಿದೆ ಎಕ್ಸಿಟ್‌ ಪೋಲ್‌ ವರದಿ

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ತೆರೆ ಬಿದ್ದಿದ್ದು, ಮತಗಟ್ಟೆ ಸಮೀಕ್ಷೆಗಳು ಹೊರಬೀಳತೊಡಗಿವೆ. ಲೋಕಸಭೆ ಚುನಾವಣೆ ಕುರಿತು ಪಿ ಮಾರ್ಕ್‌ ಸಮೀಕ್ಷಾ ವರದಿ ಪ್ರಕಟಿಸಿದ್ದು, ಚುನಾವಣೆಯಲ್ಲಿ ಎನ್‌ಡಿಎ 359 ಕ್ಷೇತ್ರ, ಇಂಡಿಯಾ ಒಕ್ಕೂಟ 154 ಹಾಗೂ ಇತರೆ ಅಭ್ಯರ್ಥಿಗಳು 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು ಇಂಡಿಯಾ ಟುಡೇ ತಮಿಳುನಾಡಿನ ಸಮೀಕ್ಷೆ ವರದಿ ಪ್ರಕಟಿಸಿದೆ. ಅಷ್ಟೇ ಅಲ್ಲ, ಪೋಲ್‌ ಸ್ಟ್ರ್ಯಾಟ್‌ ಕರ್ನಾಟಕದ ಸಮೀಕ್ಷಾ ವರದಿ ತಿಳಿಸಿದೆ.

B Somashekhar

ಮುಂಬೈ ಸಟ್ಟಾ ಬಜಾರ್ ವರದಿ ಹೀಗಿದೆ…

ಮುಂಬೈ ಸಟ್ಟಾ ಬಜಾರ್‌ ವರದಿ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿಯು 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್‌ ಈ ಬಾರಿ 55-65 ಕ್ಷೇತ್ರಗಳಲ್ಲಿ ಮಾತ್ರ ಜಯಿಸಲಿದೆ. ಇನ್ನು, ರಾಮಮಂದಿರ ಕಾರಣದಿಂದ ಬಿಜೆಪಿಗೆ ಪ್ರಮುಖವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 64-66 ಕ್ಷೇತ್ರಗಳು ಲಭಿಸಲಿವೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ಮುಂಬೈ ಸಟ್ಟಾ ಬಜಾರ್‌ ಸಮೀಕ್ಷೆಯು ಬಿಜೆಪಿ 270-280 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಕಾಂಗ್ರೆಸ್‌ 70-80 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ತಿಳಿಸಿತ್ತು.

B Somashekhar

ಯೋಗೇಂದ್ರ ಯಾದವ್‌ ಹೇಳಿದ್ದಿಷ್ಟು

ಬಿಜೆಪಿಯು ಮತ್ತೊಂದು ಸಾರ್ವತ್ರಿಕ ಚುನಾವಣೆಯ ವಿಜಯವನ್ನು ಪಡೆಯುತ್ತದೆ ಎಂದು ಚುನಾವಣಾ ರಣತಂತ್ರಗಾರ ಯೋಗೇಂದ್ರ ಯಾದವ್‌ ಅವರು ಭವಿಷ್ಯ ನುಡಿದಿದ್ದಾರೆ. ಭಾರತೀಯ ಜನತಾ ಪಕ್ಷದ ಪರವಾಗಿ ತಮ್ಮ ಭವಿಷ್ಯವಾಣಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಯಾದವ್‌ ಅಚ್ಚರಿ ಮೂಡಿಸಿದ್ದಾರೆ. ಯಾದವ್ ಪ್ರಕಾರ ಬಿಜೆಪಿ 240-260 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳು 34-45 ಸ್ಥಾನಗಳನ್ನು ಗೆಲ್ಲಬಹುದು. ಅಂದರೆ ಎನ್‌ಡಿಎ (NDA) ಒಟ್ಟು 275 ಮತ್ತು 305 ಸ್ಥಾನಗಳ ನಡುವೆ ಸುಳಿದಾಡಬಹುದು.

B Somashekhar

ಬಿಜೆಪಿಗೇ ಗೆಲುವು ಎಂದಿರುವ ಪ್ರಶಾಂತ್‌ ಕಿಶೋರ್

ಚುನಾವಣೆ ತಜ್ಞ, ರಾಜಕೀಯ ಪರಿಣತರಾದ ಪ್ರಶಾಂತ್‌ ಕಿಶೋರ್‌ ಅವರು ಕೂಡ ದೇಶದಲ್ಲಿ ಮೋದಿ ಹ್ಯಾಟ್ರಿಕ್‌ ಗಳಿಸಲಿದ್ದಾರೆ ಎಂದು ಹೇಳಿದ್ದಾರೆ. “ದೇಶದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾದರೂ ಜನಕ್ಕೆ ಅವರ ಮೇಲೆ ಸಿಟ್ಟಿಲ್ಲ. ಹಾಗಾಗಿ, ಬಿಜೆಪಿ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ” ಎಂದು ತಿಳಿಸಿದ್ದಾರೆ. ಹಾಗೆಯೇ, ವಿರೋಧ ಪಕ್ಷಗಳ ಕಾರ್ಯ ವೈಖರಿಯನ್ನೂ ಅವರು ಟೀಕಿಸಿದ್ದಾರೆ. ಬಿಜೆಪಿ ವಿರುದ್ಧ ಪ್ರಯೋಗಿಸಬಹುದಾದ ಅನೇಕ ಅಸ್ತ್ರಗಳನ್ನು, ಅವಕಾಶಗಳನ್ನು ʼಇಂಡಿಯಾʼ ಮೈತ್ರಿಕೂಟ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ‌

Exit mobile version