ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ, ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಲೋಕಸಭೆ ಚುನಾವಣೆಯು (Lok Sabha Election 2024) ಮುಕ್ತಾಯಗೊಂಡಿದೆ. ಈಗ ಮತಗಟ್ಟೆ ಸಮೀಕ್ಷೆಯ ವರದಿಗಳು ಲಭ್ಯವಾಗಲಿವೆ. ಚುನಾವಣೆ ಫಲಿತಾಂಶ ಏನಾಗಬಹುದು? ಯಾವ ಪಕ್ಷಕ್ಕೆ ಹೆಚ್ಚಿನ ಕ್ಷೇತ್ರಗಳು ಸಿಗಬಹುದು? ಯಾರು ದೇಶದ ಪ್ರಧಾನಿಯಾಗಬಹುದು ಎಂಬುದಕ್ಕೆ ಮತಗಟ್ಟೆ ಸಮೀಕ್ಷೆಯು ದಿಕ್ಸೂಚಿಯಾಗಿದೆ. ಹಾಗಾಗಿ, ಚುನಾವಣೋತ್ತರ ಸಮೀಕ್ಷೆಯು ಫಲಿತಾಂಶದಷ್ಟೇ ಕುತೂಹಲ ಕೆರಳಿಸಿದೆ. ಈ ಮತಗಟ್ಟೆ ಸಮೀಕ್ಷೆಯ ಕ್ಷಣಕ್ಷಣದ (Exit Poll 2024 Live) ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Exit Poll 2024: ಸಟ್ಟಾ ಬಜಾರ್, ರಾಜಕೀಯ ಪರಿಣತರ ಪ್ರಕಾರ ಈ ಬಾರಿಯೂ ಮೋದಿ; ನಿಮ್ಮ ಪ್ರಕಾರ ಯಾರಿಗೆ ಅಧಿಕಾರ? ತಿಳಿಸಿ
ಫಲೋಡಿ ಸಟ್ಟಾ ಬಜಾರ್ ಹೇಳಿದ್ದೇನು?
ಫಲೋಡಿ ಸಟ್ಟಾ ಬಜಾರ್ ಕೂಡ ಲೋಕಸಭೆ ಚುನಾವಣೆ ಕುರಿತು ಹಲವು ಸಮೀಕ್ಷೆ ವರದಿಗಳನ್ನು ನೀಡಿದೆ. ಬಿಜೆಪಿಯೊಂದೇ 304-306 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು 60-62 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂಬುದಾಗಿ ಸಮೀಕ್ಷಾ ವರದಿ ತಿಳಿಸಿದೆ. ಹಾಗಾಗಿ, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂಬುದು ವರದಿಯ ಸಾರಾಂಶವಾಗಿದೆ.