Site icon Vistara News

Louis Kimber: 127 ಎಸೆತಗಳಲ್ಲಿ 243 ರನ್ ಚಚ್ಚಿ ಹಲವು ದಾಖಲೆಗಳನ್ನು ಬರೆದ ಕೌಂಟಿ ಆಟಗಾರ ಲೂಯಿಸ್ ಕಿಂಬರ್

Louis Kimber

ಬೆಂಗಳೂರು: ಕೌಂಟಿ ಚಾಂಪಿಯನ್ಶಿಪ್ ಡಿವಿಷನ್ 2ರಲ್ಲಿ ಬ್ಯಾಟರ್ ಲೂಯಿಸ್​ ಕಿಂಬರ್ (Louis Kimber)​ ಬೃಹತ್​ ದಾಖಲೆಯೊಂದನ್ನು ಮಾಡಿದ್ದಾರೆ. ಲೀಸೆಸ್ಟರ್ಶೈರ್ ತಂಡದ ಆಟಗಾರನಾಗಿರು ಅವರು ಸಸೆಕ್ಸ್ ವಿರುದ್ದದ ಪಂದ್ಯದಲ್ಲಿ ಕಿಂಬರ್ ) ಐತಿಹಾಸಿಕ ದ್ವಿಶತಕ ಬಾರಿಸಿದ್ದಾರೆ. ಬಲಗೈ ಬ್ಯಾಟ್ಸ್ಮನ್ ಕೇವಲ 127 ಎಸೆತಗಳಲ್ಲಿ 243 ರನ್ ಗಳಿಸಿದ್ದಾರೆ. ಅವರು ತಮ್ಮ ಸ್ಮರಣೀಯ ಇನ್ನಿಂಗ್ಸ್​​ನಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ ಇನ್ನಿಂಗ್ಸ್ 20 ಬೌಂಡರಿಗಳು ಮತ್ತು ದಾಖಲೆಯ 21 ಸಿಕ್ಸರ್ ಗಳಿಂದ ಕೂಡಿತ್ತು. ತಮ್ಮ ದ್ವಿಶತಕವನ್ನು ತಲುಪುವ ಮೊದಲು, ಅವರು ಇಂಗ್ಲೆಂಡ್ ಸ್ಟಾರ್ ಓಲಿ ರಾಬಿನ್ಸನ್ ಅವರ ಒಂದೇ ಓವರ್​ನಲ್ಲಿ ದಾಖಲೆಯ 43 ರನ್​ ಬಾರಿಸಿದ್ದರು. ಇದು ಕೂಡ ದಾಖಲೆಯೇ ಆಗಿದೆ.

ಲೂಯಿಸ್ ಕಿಂಬರ್ 56 ಎಸೆತಗಳಲ್ಲಿ 72 ರನ್ ಗಳಿಸಿದ್ದ ವೇಲೆ ರಾಬಿನ್ಸನ್ 59 ನೇ ಓವರ್ ಎಸೆಯಲು ಬಂದಿದ್ದರು. ಆ ಓವರ್ ಮುಗಿಯುವ ಹೊತ್ತಿಗೆ ಕಿಂಬರ್​ ಕೇವಲ 65 ಎಸೆತಗಳಲ್ಲಿ 109 ರನ್ ಗಳಿಸಿದ್ದರು. ಅವರು ರಾಬಿನ್ಸನ್ ಓವರ್​ಗೆ ಐದು ಸಿಕ್ಸರ್​ ಹೊಡೆದಿದ್ದರು. ಅವುಗಳಲ್ಲಿ ಮೂರು ನೋ-ಬಾಲ್​ಗಳಿಂದ ಬಂದಿದ್ದವು. ಅವರು ಮೂರು ಫೋರ್​ ಕೂಡ ಬಾರಿಸಿದ್ದರು. ಇದು ಕೌಂಟಿ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಎರಡನೇ ದುಬಾರಿ ಓವರ್.

ಇದನ್ನೂ ಓದಿ: Rashid Khan: ರಶೀದ್ ಖಾನ್​ಗೆ ದಂಡ ವಿಧಿಸಿದ ಐಸಿಸಿ, ಅವರು ಮಾಡಿದ ತಪ್ಪೇನು?

ಲೂಯಿಸ್ ಕಿಂಬರ್ ಶತಕದ ನಂತರವೂ ತಮ್ಮ ದಾಳಿ ಮುಂದುವರಿಸಿದ್ದರು. ಕೇವಲ 100 ಎಸೆತಗಳಲ್ಲಿ ದ್ವಿಶತಕ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಕೌಂಟಿ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ ದ್ವಿಶತಕವನ್ನು ದಾಖಲಿಸಿದರು. ಒಟ್ಟಾರೆಯಾಗಿ, ಇದು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಎರಡನೇ ವೇಗದ ದ್ವಿಶತಕ ಅಫ್ಘಾನಿಸ್ತಾನದ ಶಫೀಕುಲ್ಲಾ ಪ್ರಥಮ ದರ್ಜೆ ಕ್ರಿಕೆಟ್​್ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ

ಅತಿ ಹೆಚ್ಚು ಸಿಕ್ಸರ್​ಗಳ ದಾಖಲೆ

ಲೂಯಿಸ್ ಕೌಂಟಿ ಕ್ರಿಕೆಟ್​​ನ ಇನ್ನಿಂಗ್​​ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದ ದಾಖಲೆ ಮುರಿದರು. ಈ ಹಿಂದೆ 2022ರಲ್ಲಿ ಬೆನ್ ಸ್ಟೋಕ್ಸ್ 17 ಸಿಕ್ಸರ್ ಬಾರಿಸಿದ್ದರು. ಅದೇ ಇನ್ನಿಂಗ್ಸ್​​ನಲ್ಲಿ 27 ವರ್ಷದ ಆಟಗಾರ 8 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಪ್ರಥಮ ದರ್ಜೆಯಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆ ಮುರಿದರು.

ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಹೆಚ್ಚು ಸಿಕ್ಸರ್​ಗಳು

ಲೂಯಿಸ್ ಕಿಂಬರ್ ಅವರ ಶತಕ ವ್ಯರ್ಥ:

ಲೂಯಿಸ್ ಕಿಂಬರ್ ಅದ್ಭುತ ಆಟವನ್ನು ಆಡಿದರೂ, ಅಂತಿಮವಾಗಿ ಲೀಸೆಸ್ಟರ್ಶೈರ್ 18 ರನ್​ಗಳಿಂದ ಪಂದ್ಯವನ್ನು ಕಳೆದುಕೊಂಡಿರು. ಹೀಗಾಗಿ ಅವರ ಆಟ ಅದು ವ್ಯರ್ಥವಾಯಿತು. 464 ರನ್​ಗಳ ಗುರಿ ಬೆನ್ನಟ್ಟಿದ ಲೀಸೆಸ್ಟರ್ಶೈರ್ 446 ರನ್ಗಳಿಗೆ ಆಲೌಟ್ ಆಯಿತು.

7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದ್ದ ತಂಡದ ಗೆಲ್ಲುವ ಅವಕಾಶಗಳು ಮುಗಿದಿದ್ದವು. ಆದಾಗ್ಯೂ, ಕಿಂಬರ್ ಏಕಾಂಗಿಯಾಗಿ ಆಟದ ಗತಿ ಬದಲಾಯಿಸಿದ್ದರು.

Exit mobile version