Site icon Vistara News

Love jihad : ಬಿಹಾರದ ಹಿಂದೂ ಯುವತಿಯನ್ನು ಉತ್ತರಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಆರಿಫ್; ಲವ್​ ಜಿಹಾದ್ ಆರೋಪ

Love Jihad

ಬೆಂಗಳೂರು: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿ ಇಸ್ಲಾಂಗೆ ಮತಾಂತರ ಮಾಡಲು ಯತ್ನಿಸಿದ್ದಾನೆ (Love jihad ) ಎಂಬ ಆರೋಪ ಕೇಳಿ ಬಂದಿದೆ. ಬಿಹಾರದ ಹಿಂದೂ ಹುಡುಗಿಯನ್ನು ದೆಲ್ಲಿಯಿಂದ ಕರೆದುಕೊಂಡು ಬಂದ ಮೊಹಮ್ಮದ್ ಆರಿಫ್ ತನ್ನನ್ನು ಪ್ರೇಮ ಬಲೆಗೆ ತಳ್ಳಿ ನಂತರ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆರಿಫ್​ನ ಕೃತ್ಯಕ್ಕೆ ಆರಿಫ್ ಸಹೋದರ ಮೊಹಮ್ಮದ್ ತಾಲಿಬ್ ಸಹಕಾರ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಬಗ್ಗೆ ಸ್ಥಳೀಯ ವೆಬ್​ಸೈಟ್​ಗಳು ವರದಿ ಮಾಡಿವೆ.

ಬರೇಲಿಯ ಬಹೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 4 ರಂದು ಈ ಘಟನೆ ಬೆಳಕಿಗೆ ಬಂದಿದೆ. ಸುನ್ನಿನಗರ ನಿವಾಸಿಯಾಗಿರು ಆರಿಫ್​ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಹಾಗೂ ಆತನ ತಮ್ಮ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂತ್ರಸ್ತೆ ತನ್ನ ದೂರಿನಲ್ಲಿ ತಾನು ಮೂಲತಃ ಬಿಹಾರದ ನವಾಡಾ ಪ್ರದೇಶದವಳು ಎಂದು ಹೇಳಿಕೊಂಡಿದ್ದಾಳೆ. ಆಕೆ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಬರೇಲಿ ನಿವಾಸಿ ಮೊಹಮ್ಮದ್ ಆರಿಫ್ ನನ್ನು ಭೇಟಿಯಾಗಿದ್ದಳು. ಸ್ವಲ್ಪ ಸಮಯದ ನಂತರ, ಆರಿಫ್ ತನ್ನನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಬಹೇರಿಯಲ್ಲಿರುವ ತನ್ನ ನಿವಾಸಕ್ಕೆ ಕರೆದುಕೊಂಡು ಹೋಗಿದ್ದ. ಈ ಸಮಯದಲ್ಲಿ, ಅವಳ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದ. ಸುಮಾರು ಒಂದು ವರ್ಷದಿಂದ ಇಸ್ಲಾಂಗೆ ಮತಾಂತರಗೊಳ್ಳುವಂತೆ ಸಂತ್ರಸ್ತೆಯ ಮೇಲೆ ಒತ್ತಡ ಹೇರಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೆಸರು ಬದಲಾವಣೆ

ಆರೋಪಿ ಆರಿಫ್ ಯುವತಿಯನ್ನು ಇಸ್ಲಾಂಗೆ ಮತಾಂತರಿಸಿದ್ದ. ಆಕೆಗೆ ಸನಾ ಎಂದು ಮರುನಾಮಕರಣ ಮಾಡಿದ್ದ. ಇದಾದ ಬಳಿಕ ಆರಿಫ್​ನ ಸಹೋದರನೂ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದ, ರಾತ್ರಿ ಕೊಠಡಿಗೆ ನುಗ್ಗಿ ಅತ್ಯಾಚಾರ ಮಾಡಿದ್ದ. ಹೆದರಿದ ಆಕೆ ದೂರು ನೀಡಿದ್ದಾಳೆ.

ಇದನ್ನೂ ಓದಿ: Sonu Nigam: ಅಯೋಧ್ಯೆ ಜನರಿಗೆ ಛೀಮಾರಿ ಹಾಕಿದ್ರಾ ಸೋನು ನಿಗಮ್?

ಸಂತ್ರಸ್ತೆ ದೂರು ನೀಡುವುದಾಗಿ ಹೇಳಿದಾಗ ಆರಿಫ್​ನ ತಮ್ಮ ತಾಲಿಬ್ “ನೀವು ಹೇಗಾದರೂ ಬಿಹಾರದವರು. ಯಾರಿಗಾದರೂ ಹೇಳಿದರೆ, ನಾನು ಕೊಲ್ಲುತ್ತೇನೆ ಎಂದು ಬೆದರಿಸಿದ್ದ. ಯವತಿ ಈ ಬಗ್ಗೆ ತನ್ನ ಆರಿಫ್​ನ ಬಳಿ ಹೇಳಿದ್ದಳು. ಆದರೆ ಆತ ಸಹೋದರನನ್ನೇ ಬೆಂಬಲಿಸಿದ್ದ.

ಆರಿಫ್, ಆತನ ಸಹೋದರ ತಾಲಿಬ್ ಮತ್ತು ಆತನ ತಂದೆ ಸಬೀರ್​ ಸೇರಿಕೊಂಡು ಯುವತಿ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಯಾರಿಗಾದರೂ ದೂರು ನೀಡಿದರೆ, ನಾವು ನಿಮ್ಮನ್ನು ಸುಟ್ಟುಹಾಕುತ್ತೇವೆ. ಎಂದು ಬೆದರಿಸಿದ್ದ. ತನ್ನ ಮೇಲೆ ಆಗುತ್ತಿರುವ ದೌರ್ಜನ್ಯದಿಂದ ಬೆದರಿದ ಯವತಿ ದೂರು ನೀಡಿದ್ದಾಳೆ. ಬಳಿಕ ಹಿಂದೂ ಸಂಘಟನೆಗಳು ಆಕೆಯ ನೆರವಿಗೆ ಬಂದಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸದ್ದಾರೆ.

Exit mobile version