Site icon Vistara News

IPL 2024 : ಪಂಜಾಬ್​ ವಿರುದ್ಧ 21 ರನ್​ಗಳ ಭರ್ಜರಿ ಜಯ ದಾಖಲಿಸಿದ ಲಕ್ನೊ

Lacknow super Gainst

ಲಖನೌ: ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಲಕ್ನೊ ಸೂಪರ್ ಜೈಂಟ್ಸ್ (Lacknow Supre Gainst)​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 11ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kinsg) ವಿರುದ್ಧ ಅಮೋಘ 21 ರನ್​ಗಳ ಗೆಲುವು ದಾಖಲಿಸಿದೆ. ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಸೋತಿದ್ದ ಲಕ್ನೊ ತಂಡ ಈ ಮೂಲಕ ಗೆಲುವಿನ ಹಳಿಗೆ ಮರಳಿದೆ. ಅತ್ತ ಪಂಜಾಬ್ ತಂಡ ಸತತ ಎರಡು ಸೋಲಿನ ಸುಳಿಗೆ ಸಿಲುಕಿತು. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದಿದ್ದ ಪಂಜಾಬ್ ನಂತರದ ಪಂದ್ಯದಲ್ಲಿ ಆರ್​ಸಿಬಿಗೆ ಮಣಿದಿತ್ತು. ಈ ಸೋಲಿನೊಂದಿಗೆ ನಾಯಕ ಶಿಖರ್ ಧವನ್​ (70 ರನ್​) ಅವರ ಅರ್ಧ ಶತಕ ವ್ಯರ್ಥಗೊಂಡಿತು.

ಇಲ್ಲಿನ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 199 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 5 ವಿಕೆಟ್​ಗೆ 178 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಬೃಹತ್​ ಮೊತ್ತದ ಗುರಿಯನ್ನು ಪಡೆದ ಪಂಜಾಬ್ ತಂಡ ಉತ್ತಮ ಪ್ರದರ್ಶನ ನೀಡಿತು. ನಾಯಕ ಶಿಖರ್ ಧವನ್​ (70) ಹಾಗೂ ಜಾನಿ ಬೈರ್​ಸ್ಟೋವ್​ (42) ಮೊದಲ ವಿಕೆಟ್​ಗೆ 102 ನ್ ಬಾರಿಸಿದರು. ಅವರಿಬ್ಬರು ಕ್ರೀಸ್​ನಲ್ಲಿ ಇರುವ ತನಕ ಗೆಲುವು ಪಂಜಾಬ್​ಗೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ಬಳಿಕ ಸತತವಾಗಿ ವಿಕೆಟ್​ ಕಳೆದುಕೊಂಡ ಪಂಜಾಬ್ ಸೋಲಿನ ಸುಳಿಗೆ ಸಿಲುಕಿತು. ಆ ಬಳಿಕ ಪ್ರಭ್​ಸಿಮ್ರಾನ್ ಸಿಂಗ್​ (19) ಹಾಗೂ ಕೊನೆಯಲ್ಲಿ ಲಿವಿಂಗ್ ಸ್ಟನ್​ (ಅಜೇಯ 28 ರನ್​) ಬಾರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಮಯಾಂಕ್ ಅಗರ್ವಾಲ್​ (27 ರನ್​ಗಳಿಗೆ 3 ವಿಕೆಟ್​) ಹಾಗೂ ಮೊಹ್ಸಿನ್​ ಖಾನ್​ (34 ರನ್​ಗಳಿಗೆ 2 ವಿಕೆಟ್​) ಗೆಲುವಿನ ರೂವಾರಿಗಳೆನಿಸಿಕೊಂಡರು.

ಇದನ್ನೂ ಓದಿ: Sachin Tendulkar : ಕಾಶ್ಮೀರದ ಬಾಲಕಿಯ ಕ್ರಿಕೆಟ್​ ಪ್ರೀತಿ ಸಚಿನ್ ಫಿದಾ; ಇಲ್ಲಿದೆ ವಿಡಿಯೊ

ಕ್ವಿಂಟನ್ ಅರ್ಧ ಶತಕ

ಬ್ಯಾಟಿಂಗ್ ಆರಂಭಿಸಿದ ಲಕ್ನೊ ಉತ್ತಮ ಆರಂಭ ಪಡೆಯಲಿಲ್ಲ. ಇಂಪ್ಯಾಕ್ಟ್​ ಪ್ಲೇಯರ್ ಆಗಿ ಆಡಿದ ರಾಹುಲ್​ 15 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ, ಕ್ವಿಂಟನ್ ಡಿ ಕಾಕ್​ 38 ಎಸೆತಕ್ಕೆ 54 ರನ್ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ಮಾರ್ಕಸ್​ ಸ್ಟೊಯ್ನಿಸ್ 19 ಹಾಗೂ ಹಂಗಾಮಿ ನಾಯಕ ನಿಕೋಲಸ್ ಪೂರನ್ 21 ಎಸೆತಕ್ಕೆ 41 ರನ್ ಬಾರಿಸಿ ದೊಡ್ಡ ಮೊತ್ತಕ್ಕೆ ಕಾರಣರಾದರು. ಕೊನೆಯಲ್ಲಿ ಕೃಣಾಲ್ ಪಾಂಡ್ಯ 22 ಎಸೆತಕ್ಕೆ ಅಜೇಯ 43 ರನ್ ಬಾರಿಸಿ ಮಿಂಚಿದರು. ಪಂಜಾಬ್ ಪರ ಸ್ಯಾಮ್ ಕರ್ರನ್ 28 ರನ್​ಗಳಿಗೆ 3 ವಿಕೆಟ್​ ತಮ್ಮದಾಗಿಸಿಕೊಂಡರು.

ನಾಯಕತ್ವ ಬಿಟ್ಟ ರಾಹುಲ್​

ಕೆ.ಎಲ್ ರಾಹುಲ್ ಅವರ ಫಿಟ್ನೆಸ್ ಇನ್ನೂ ಉತ್ತಮ ಸ್ಥಿತಿಗೆ ಬಂದಿಲ್ಲ. ಹೀಗಾಗಿ ಅವರು ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದರು. ಅವರು ಆರಂಭದಲ್ಲಿ ಬ್ಯಾಟ್ ಮಾಡಿ ಬಂದು ಜೆರ್ಸಿ ಕಳಚಿದರು. ಈ ಯೋಜನೆಯಂತೆ ಅವರು ಈ ಪಂದ್ಯಕ್ಕೆ ನಾಯಕರಾಗಿ ಇರಲಿಲ್ಲ. ಅವರ ಬದಲಿಗೆ ವಿಂಡೀಸ್​ ಸ್ಫೋಟಕ ಬ್ಯಾಟರ್​ ನಿಕೋಲಸ್​ ಪೂರನ್​ ಟಾಸ್​ಗೆ ಬಂದರು.

Exit mobile version