Site icon Vistara News

Maharashtra Cabinet Expansion: ಅಜಿತ್ ಪವಾರ್‌ಗೆ ಹಣಕಾಸು ಹೊಣೆ, ಬೆಂಬಲಿಗ ಸಚಿವರಿಗೆ ಯಾವ ಖಾತೆಗಳು?

Ajit pawar

ಮುಂಬೈ: ಮಹಾರಾಷ್ಟ್ರ ಸಂಪುಟ ವಿಸ್ತರಣೆಯಾಗಿದ್ದು(Maharashtra Cabinet Expansion), ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (NCP) ಬಂಡಾಯ ನಾಯಕ, ಡಿಸಿಎಂ ಅಜಿತ್ ಪವಾರ್ (DCM Ajit Pawar) ಅವರಿಗೆ ಹಣಕಾಸು ಮತ್ತು ಯೋಜನೆಯ ಇಲಾಖೆಯನ್ನು ನೀಡಲಾಗಿದೆ. ಅಜಿತ್ ಪವಾರ್ ಅವರು ತಮ್ಮ ಬೆಂಬಲಿಗ 8 ಶಾಸಕರೊಂದಿಗೆ ಜುಲೈ 2ರಂದು ಶಿಂಧೆ-ಬಿಜೆಪಿ ನೇತೃತ್ವದ ಸರ್ಕಾರಕ್ಕೆ (Shinde-BJP Government) ಬೆಂಬಲ ನೀಡಿದರು. ಅಷ್ಟೇ ಅಲ್ಲದೇ, ಪವಾರ್ ಡಿಸಿಎಂ ಆಗಿ ಮತ್ತು ಉಳಿದ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದದ್ದರು. ಈಗ ಸಿಎಂ ಏಕನಾಥ ಶಿಂಧೆ (CM Ekanath Shinde) ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದರು. ಅಜಿತ್ ಪವಾರ್ ಮತ್ತು ಅವರ ಬೆಂಬಲಿಗ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

ಅಜಿತ್ ಪವಾರ್ ಅವರ ಕಚೇರಿಯು, ಮಹಾರಾಷ್ಟ್ರ ಸಚಿವಾಲಯದ ಐದನೇ ಫ್ಲೋರ್‌ನಲ್ಲಿ ಇರಲಿದೆ. ಉಪಮುಖ್ಯಮಂತ್ರಿಯೂ ಆಗಿರುವ ಪವಾರ್ ಅವರು ಇನ್ನು ಮುಂದೆ ರಾಜ್ಯದ ಹಣಕಾಸ ಇಲಾಖೆಯನ್ನು ನಿಭಾಯಿಸಲಿದ್ದಾರೆ. ಜತೆಗೆ, ಬಿಜೆಟ್ ಕೂಡ ಮಂಡಿಸಲಿದ್ದಾರೆ. ಶಿಂಧೆ-ಬಿಜೆಪಿ ಸರ್ಕಾರದಲ್ಲಿ ಪಾಲುದಾರ ಆಗುವ ಮೂದಲು ಅವರು ವಿಧಾಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು. ಈ ಮಧ್ಯೆ, ತಮ್ಮದೇ ನಿಜವಾದ ಎನ್‌ಸಿಪಿ ಎಂದು ಹೇಳಿಕೊಂಡಿರುವ ಅಜಿತ್ ಪವಾರ್ ಬಣವು, ಎನ್‌ಸಿಪಿ ಹೆಸರು ಮತ್ತು ಪಕ್ಷದ ಚಿಹ್ನೆಯನ್ನು ತಮ್ಮ ಗುಂಪಿಗೆ ನೀಡಬೇಕೆಂದು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಅತ್ತ, ಸಿನೀಯರ್, ಶರದ್ ಪವಾರ್ ಕೂಡ ತಮ್ಮದೇ ನಿಜವಾದ ಎನ್‌ಸಿಪಿ ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Ajit Pawar: ಒಡೆಯಿತು ಎನ್​ಸಿಪಿ; ಶಿಂದೆ ಸರ್ಕಾರ ಸೇರಿದ ಅಜಿತ್ ಪವಾರ್ ‘ಮಹಾ’ ಉಪಮುಖ್ಯಮಂತ್ರಿ!

ಅಜಿತ್ ಪವಾರ್ ಬೆಂಬಲಿಗ ಸಚಿವಾರದ ಹಸನ್ ಮಶ್ರೀಫ್ ಅವರಿಗೆ ವೈದ್ಯ ಶಿಕ್ಷಣ ಇಲಾಖೆ, ಮಾಜಿ ಡಿಸಿಎಂ ಛಗನ್ ಬುಜಬಲ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಧರ್ಮಾರಾವ್ ಅಥ್ರಾಮ್ ಅವರಿಗೆ ಆಹಾರ ಮತ್ತು ಡ್ರಗ್ ಆಡ್ಮಿನಿಸ್ಟ್ರೇಷನ್, ಸಂಜಯ್ ಬನ್ಸೋಡೆ ಅವರಿಗೆ ಕ್ರೀಡೆ, ಅದಿತಿ ತಟಕರೆ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಅನಿಲ್ ಪಾಟೀಲ್ ಅವರಿಗೆ ಪರಿಹಾರ, ಪುನರ್ವಸತಿ ಮತ್ತು ವಿಪತ್ತ ನಿರ್ವಹಣಾ ಇಲಾಖೆಗಳ ಹೊಣೆಯನ್ನು ನೀಡಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version