ನವ ದೆಹಲಿ: ಇಲ್ಲಿ ಐಟಿಒ ಪ್ರದೇಶದ (Income Tax Office) ಕೇಂದ್ರ ಕಂದಾಯ ಕಟ್ಟಡದಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರು 46 ವರ್ಷದ ಪುರುಷನಾಗಿದ್ದು, ಅಲ್ಲಿ ಕಚೇರಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಸಿಲುಕಿ ಹಾಕಿಕೊಂಡಿದ್ದ ಏಳು ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆದಾಯ ತೆರಿಗೆ ಸಿಆರ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಮಗೆ ಮಧ್ಯಾಹ್ನ 3.07 ಕ್ಕೆ ಕರೆ ಬಂತು. ನಾವು ಒಟ್ಟು 21 ಅಗ್ನಿಶಾಮಕ ಟೆಂಡರ್ ಗಳನ್ನು ರವಾನಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಸ್ಥಳೀಯ ಪೊಲೀಸರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ.
Delhi: Fire at the Income Tax Building
— Atulkrishan (@iAtulKrishan1) May 14, 2024
Employees jumped out of windows to save lives
Fire department says fire was extinguished@DelhiPolice pic.twitter.com/yiYdUi8uBA
ಈ ಕಟ್ಟಡವು ಹಳೆಯ ಪೊಲೀಸ್ ಪ್ರಧಾನ ಕಚೇರಿಯ ಎದುರು ಇದೆ/ ಇದನ್ನು ಇನ್ನೂ ಅದರ ಕೆಲವು ಘಟಕಗಳಿಗೆ ರಕ್ಷಣಾ ಪಡೆ ಹೋಗಿದೆ ಎಂದು ಅವರು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಕಟ್ಟಡದ ನಿವಾಸಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಕಿಟಕಿಯ ಅಂಚಿನ ಮೇಲೆ ಆಶ್ರಯ ಪಡೆಯುತ್ತಿರುವುದು ಕಂಡುಬಂದಿದೆ.
ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.
ಕಟ್ಟಡದ ಮೂರನೇ ಮಹಡಿಯಿಂದ ಐದು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಏಳು ಜನರನ್ನು ಡಿಎಫ್ಎಸ್ ಸುರಕ್ಷಿತವಾಗಿ ರಕ್ಷಿಸಿದೆ ಎಂದು ಸಂಜೆ 4 ಗಂಟೆಗೆ ನಮಗೆ ಮಾಹಿತಿ ಸಿಕ್ಕಿತು. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಎಂದು ಡಿಎಫ್ಎಸ್ ಮುಖ್ಯಸ್ಥ ಅತುಲ್ ಗರ್ಗ್ ಹೇಳಿದ್ದಾರೆ.
ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುತ್ತಿದ್ದಂತೆ, ಅವರು ಕಟ್ಟಡವನ್ನು ಖಾಲಿ ಮಾಡಿದರು. ವಿಷಕಾರಿ ಹೊಗೆಯಿಂದ ರಕ್ಷಿಸಲು ನಾವು ಗ್ಯಾಸ್ ಮಾಸ್ಕ್ ಬಳಸಬೇಕಾಯಿತು. ಆದರೆ ಕಟ್ಟಡದಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಯಿತು. ಬೆಂಕಿಯ ನಿಜವಾದ ಕಾರಣವನ್ನು ತಿಳಿಯಲು ಹೆಚ್ಚಿನ ತನಿಖೆಗಾಗಿ ನಾವು ಪ್ರದೇಶದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಗರ್ಗ್ ಹೇಳಿದರು.
ಭಾನುವಾರ, ದೆಹಲಿಯ ಬವಾನಾ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಮತ್ತು ಭಾರಿ ಬೆಂಕಿಯಲ್ಲಿ ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಗೊಂಡ ಇತರರನ್ನು ಸುರೇಶ್, ರಾಕೇಶ್, ಪಂಕಜ್ ಪಾಲ್ ಮತ್ತು ಘನ್ ಶ್ಯಾಮ್ ಎಂದು ಗುರುತಿಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬಂದ ಕಿಡಿಯು ಅಲ್ಲಿ ಇರಿಸಲಾಗಿದ್ದ ರಾಸಾಯನಿಕಗಳಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಯಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.