Site icon Vistara News

Paris Olympics 2024 : ಮನು ಭಾಕರ್ ಸೇರಿದಂತೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದವರ ಎಕ್ಸ್​ ಖಾತೆಯಲ್ಲಿ ಐಫೆಲ್​ ಟವರ್ ಚಿತ್ರ

Manu Bhaker

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics 2024) ಭಾರತದ ಕಂಚಿನ ಪದಕ ವಿಜೇತ ಮನು ಭಾಕರ್ ಸೇರಿದಂತೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ವಿಜೇತರ ಎಕ್ಸ್ (ಹಿಂದಿನ ಟ್ವಿಟರ್​​) ಖಾತೆಯಲ್ಲಿ ಐಫೆಲ್ ಟವರ್ ಲೋಗೋ ನೀಡಲಾಗಿದೆ. ನೀವು ಭಾರತದ ಕಂಚಿನ ಪದಕ ವಿಜೇತರಾದ ಮನು ಭಾಕರ್ ಅವರ ಎಕ್ಸ್​ ಖಾತೆಯನ್ನು ತೆರೆದರೆ ನೀವು ವೆರಿಫಿಕೇಷನ್​ ಬ್ಯಾಜ್​​ ಕಾಣಬಹುದು. ಬ್ಲೂ ಟಿಕ್ ಜೊತೆಗೆ ಐಫೆಲ್ ಟವರ್ ನ ಲೋಗೋವನ್ನು ಕೂಡ ಅವರಿಗೆ ನೀಡಲಾಗಿದೆ. ಈ ಲೋಗೋದೊಂದಿಗೆ ಖಾತೆದಾರ ಪ್ಯಾರಿಸ್ 2024 ಪದಕ ವಿಜೇತರು ಎಂಬುದನ್ನು ಸೂಚಿಸುತ್ತದೆ. 1900 ಮತ್ತು 1924 ರ ನಂತರ ಮೂರನೇ ಬಾರಿಗೆ ಒಲಿಂಪಿಕ್ಸ್ ನಡೆಯುತ್ತಿರುವ ಪ್ಯಾರಿಸ್​​ನ ಅತಿದೊಡ್ಡ ಆಕರ್ಷಣೆಗಳಲ್ಲಿ ಐಫೆಲ್ ಟವರ್ ಒಂದಾಗಿದೆ.

ಆಗಸ್ಟ್ 11 ರವರೆಗೆ ನಿಗದಿಯಾಗಿರುವ 329 ಸ್ಪರ್ಧೆಗಳ ವಿಜೇತರನ್ನು ಗೌರವಿಸಲು ಬಳಸಲಾಗುವ ಒಲಿಂಪಿಕ್ ಪದಕಗಳಿಗೆ ಐಫೆಲ್ ಟವರ್​ನಿಂದ ಕಬ್ಬಿಣದ ತುಂಡನ್ನು ಪಡೆಯಲಾಗಿದೆ. 20ನೇ ಶತಮಾನದಲ್ಲಿ ಅದರ ಅನೇಕ ನವೀಕರಣ ಮತ್ತು ನಿರ್ವಹಣಾ ಕಾರ್ಯದ ವೇಳೆ ರಕ್ಷಿಸಲ್ಪಟ್ಟ ತುಣುಕುಗಳನ್ನು ಬಳಸಲಾಗಿದೆ. ಚಿನ್ನದ ಪದಕಗಳು 529 ಗ್ರಾಂ, ಬೆಳ್ಳಿ ಪದಕಗಳು 525 ಗ್ರಾಂ ಮತ್ತು ಕಂಚಿನ ಪದಕಗಳು 455 ಗ್ರಾಂ ತೂಕವನ್ನು ಹೊಂದಿವೆ. ಫ್ರಾನ್ಸ್ ನ ಅತ್ಯಂತ ಅಮೂಲ್ಯವಾದ ಹೆಗ್ಗುರುತಿನ ತುಣುಕನ್ನು ವಿಜೇತರಿಗೆ ಹಂಚಲಾಗುತ್ತಿದೆ.

ಇತಿಹಾಸ ಬರೆದ ಮನು ಭಾಕರ್

ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಮನು ಭಾಕರ್ ಇತಿಹಾಸ ಬರೆದಿದ್ದಾರೆ. ಜುಲೈ 28ರ ಭಾನುವಾರ ಪ್ಯಾರಿಸ್​​ನಲ್ಲಿ ನಡೆದ ಒಲಿಂಪಿಕ್ ಕಂಚಿನ ಪದಕ ಗೆದ್ದಿದ್ದರು. ಫ್ರೆಂಚ್ ರಾಜಧಾನಿಯ ಚಟೌರೌಕ್ಸ್ ಶೂಟಿಂಗ್ ಕೇಂದ್ರದಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್​ನಲ್ಲಿ ಮೂರನೇ ಸ್ಥಾನ ಗೆದ್ದ ಹರಿಯಾಣದ 22 ವರ್ಷದ ಶೂಟರ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟೋಕಿಯೊದಲ್ಲಿ 3 ವರ್ಷಗಳ ನಂತರ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರತಿಭಾವಂತ ಶೂಟರ್​ಗಳಲ್ಲಿ ಒಬ್ಬರು ತಮ್ಮ ಕನಸುಗಳನ್ನು ಈಡೇರಿಸಿದ್ದಾರೆ. ಇದೀಗ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ ಹೋದ ಇಸ್ರೇಲ್ ಅಥ್ಲೀಟ್​ಗಳಿಗೆ ಜೀವ ಬೆದರಿಕೆ!

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮನು ಭಾಕರ್ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದಾರೆ. ಕ್ರೀಡಾಕೂಟದಲ್ಲಿ ಶೂಟಿಂಗ್​​ನಲ್ಲಿ ಪದಕಕ್ಕಾಗಿ ದೇಶವು 12 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ. ಅಭಿನವ್ ಬಿಂದ್ರಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ನಂತರ ಶೂಟಿಂಗ್​​ನಲ್ಲಿ ಒಲಿಂಪಿಕ್ ಪದಕ ಗೆದ್ದ ಐದನೇ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಪಾತ್ರರಾಗಿದ್ದಾರೆ.

Exit mobile version