Site icon Vistara News

Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

Manu Bhaker

ನವದೆಹಲಿ: ಒಲಿಂಪಿಕ್ಸ್ ಪದಕ ಗೆದ್ದ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್ (Manu Bhaker) ಭಾನುವಾರ ಪಾತ್ರರಾಗಿದ್ದಾರೆ. ಪ್ಯಾರಿಸ್: ಪ್ಯಾರಿಸ್​ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದು ಭಾರತಕ್ಕೆ ಹಾಲಿ ಕ್ರೀಡಾಕೂಟದಲ್ಲಿ ಮೊದಲ ಪದಕವಾಗಿದೆ. ಹೀಗಾಗಿ ಭಾರತದ ಸಂಭ್ರಮ ಹೆಚ್ಚಾಗಿದೆ. ಇದೇ ವೇಳೆ ಪದಕ ಗೆದ್ದ ಖುಷಿಯಲ್ಲಿರುವ ಭಾಕರ್​ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಹೆಚ್ಚಾಗಿ ನೆನಪಿಸಿಕೊಂಡಿರುವುದು ಹಿಂದೂಗಳ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯನ್ನು. ಅದರಲ್ಲೂ ಅದಲ್ಲಿರುವ ಕರ್ಮಫಲ ಸಿದ್ಧಾಂತವನ್ನು.

2012ರ ಲಂಡನ್ ಒಲಿಂಪಿಕ್ಸ್​ನಲ್ಲಿ ರ್ಯಾಲಿ ಫೈರ್ ಪಿಸ್ತೂಲ್ ಶೂಟರ್ ವಿಜಯ್ ಕುಮಾರ್ ಮತ್ತು 10 ಮೀಟರ್ ಏರ್ ರೈಫಲ್ ನಲ್ಲಿ ಗಗನ್ ನಾರಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದರು. ನಾರಂಗ್ ಇದೀಗ ಪ್ಯಾರಿಸ್ ತಂಡದ ಚೆಫ್ ಡಿ ಮಿಷನ್ ಆಗಿದ್ದಾರೆ.

ಇದು ಭಾರತಕ್ಕೆ ಅನಿವಾರ್ಯ ದೀರ್ಘಕಾಲದ ಪದಕವಾಗಿತ್ತು. ಸಾಧನೆಯ ಹಾದಿಯಲ್ಲಿ ನಾನು ಕೇವಲ ನೆಪವಷ್ಟೇ. ಭಾರತ ಇನ್ನೂ ಹೆಚ್ಚಿನ ಪದಕಗಳಿಗೆ ಅರ್ಹವಾಗಿದೆ. ನಾವು ಈ ಬಾರಿ ಸಾಧ್ಯವಾದಷ್ಟು ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದ್ದೇವೆ. ವೈಯಕ್ತಿಕವಾಗಿ ನನಗೆ ಈ ಭಾವನೆ ಅತಿವಾಸ್ತವಿಕವಾಗಿದೆ. ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಕೊನೆಯ ಶಾಟ್ ವರೆಗೂ ನಾನು ಎಲ್ಲಾ ಶಕ್ತಿಯೊಂದಿಗೆ ಹೋರಾಡುತ್ತಿದ್ದೆ ಎಂದು ಮನು ಹೇಳಿದ್ದಾರೆ.

10 ಮೀಟರ್ ಏರ್ ಪಿಸ್ತೂಲ್ ಫೈನಲ್​​ನ ಕೊನೇ ಕ್ಷಣದ ಹೋರಾಟದ ಬಗ್ಗೆ ಕೇಳಿದ್ದಕ್ಕೆ, . “ಪ್ರಾಮಾಣಿಕವಾಗಿ ನನಗೆ ನೆರವಾಗಿದ್ದು ಭಗವದ್ಗೀತೆ. ನಾನು ಬಹಳಷ್ಟು ಬಾರಿ ಓದಿದ್ದೇನೆ, ಆದ್ದರಿಂದ ನನ್ನ ಮನಸ್ಸಿನಲ್ಲಿ ಅದೇ ಇತ್ತು ‘ನೀವು ಏನನ್ನು ಮಾಡಬೇಕೋ ಅದನ್ನು ಮಾಡಿ, ಫಲವನ್ನು ನನಗೆ ಬಿಟ್ಟು ಬಿಡಿ ಎಂಬ ಸಾರ ನೆನಪಾಗುತ್ತಿತ್ತು. ವಿಧಿಯನ್ನು ನೀವು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಎಂಬುದು, ಇನ್ನು ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಹೇಳುವ “ನೀವು ಕರ್ಮದ ಮೇಲೆ ಗಮನವಿಡಿ. ಫಲಿತಾಂಶದ ಮೇಲೆ ಅಲ್ಲ, ಉವಾಚ ನನ್ನ ತಲೆಯಲ್ಲಿ ಓಡುತ್ತಿತ್ತು ಎಂದು ಮನು ಹೇಳಿದ್ದಾರೆ,

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಾನು ತುಂಬಾ ನಿರಾಶೆಗೊಂಡಿದ್ದೆ. ಅದರಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಿತು. ಮುಗಿದು ಹೋಗಿದ್ದು ಹೋಯಿತು. ನಾವು ವರ್ತಮಾನದ ಮೇಲೆ ಕೇಂದ್ರೀಕರಿಸೋಣ. ಈ ಪದಕವು ಯಾವಾಗಲೂ ತಂಡದ ಕೆಲಸವಾಗಿದೆ. ನಾನು ಅದನ್ನು ಮಾಡಲು ಒಂದು ನೆಪವಾಗಿದ್ದೆ ಎಂದು ಅವರು ಹೇಳಿದ್ಧಾರೆ.

Exit mobile version