Site icon Vistara News

Manu Bhaker : ಶೂಟಿಂಗ್​​ನಿಂದ ಬ್ರೇಕ್ ತೆಗೆದುಕೊಂಡ ಮನು ಭಾಕರ್​​, ಡೆಲ್ಲಿಯಲ್ಲಿ ನಡೆಯುವ ವಿಶ್ವಕಪ್​ಗೆ ಅಲಭ್ಯ

Manu Bhaker

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿರುವ ಮಹಿಳಾ ಶೂಟರ್​ ಮನು ಭಾಕರ್ (Manu Bhaker) ಮೂರು ತಿಂಗಳ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಅಕ್ಟೋಬರ್​ನಲ್ಲಿ ನಡೆಯಲಿರುವ ಶೂಟಿಂಗ್​ ವಿಶ್ವಕಪ್​ನಿಂದ ಹೊರಕ್ಕೆ ಉಳಿಯಲಿದ್ದಾರೆ ಎಂದು ಅವರ ಕೋಚ್ ಜಸ್ಪಾಲ್ ರಾಣಾ ಮಾಹಿತಿ ನೀಡಿದ್ದಾರೆ. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ 22 ವರ್ಷದ ಭಾಕರ್ ಅವರು ಎರಡು ಪದಕ ಗೆದ್ದು ಇತಿಹಾಸ ಬರೆದಿದ್ದರು.

ಮಂಗಳವಾರ ಮುಂಜಾನೆ ಪ್ಯಾರಿಸ್​ನಿಂದ ಹಿಂದಿರುಗಿದ ಮನು ಭಾಕರ್​ ಕ್ರೀಡೆಯಿಂದ ಮೂರು ತಿಂಗಳ ವಿರಾಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅವರು ಮೂರು ತಿಂಗಳ ವಿರಾಮ ತೆಗೆದುಕೊಳ್ಳುತ್ತಿರುವುದರಿಂದ ಅಕ್ಟೋಬರ್​ನಲ್ಲಿ ಡೆಯಲಿರುವ ಶೂಟಿಂಗ್ ವಿಶ್ವಕಪ್​​ನಲ್ಲಿ ಭಾಗವಹಿಸುತ್ತಾರೆಯೇ ಎಂದು ನನಗೆ ಖಚಿತವಿಲ್ಲ. ಇದು ಸಾಮಾನ್ಯ ವಿರಾಮ. ಬಹಳ ಸಮಯದಿಂದ ಅವರು ತರಬೇತಿ ಪಡೆಯುತ್ತಿದ್ದಾರೆ.” ರಾಣಾ ತಿಳಿಸಿದ್ದಾರೆ. ಅಕ್ಟೋಬರ್ 13 ರಿಂದ 18 ರವರೆಗೆ ನವದೆಹಲಿಯಲ್ಲಿ ಶೂಟಿಂಗ್ ವಿಶ್ವ ಕಪ್​ ಆಯೋಜನೆಗೊಂಡಿದೆ.

ಮೂರು ವರ್ಷಗಳ ಹಿಂದೆ ಟೋಕಿಯೊ ಕ್ರೀಡಾಕೂಟದಿಂದ ಬರಿಗೈಯಲ್ಲಿ ಹಿಂದಿರುಗಿದ್ದ ಮನು ಭಾಕರ್​ಗೆ ಪ್ಯಾರಿಸ್​ ಒಲಿಂಪಿಕ್ಸ್ ಪದಕಗಳು ಹೆಚ್ಚು ಗಮನಾರ್ಹ. ವಿರಾಮದ ಬಳಿಕ 2026 ರ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಡಲು ಅವರು ಬಯಸಿದ್ದಾರೆ.

ಮನು ಭಾಕರ್ ಪ್ಯಾರಿಸ್ ಸಾಧನೆ

22 ವರ್ಷದ ಭಾರತೀಯ ಶೂಟರ್ ಮನು ಭಾಕರ್ 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದಾರೆ. ಒಂದೇ ಒಲಿಂಪಿಕ್ಸ್ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಗಿಟ್ಟಿಸಿಕೊಂಡಿದ್ದಾರೆ.

ಭಾಕರ್​ ಜುಲೈ 26 ರಂದು 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ತರಬೇತಿಯೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದರು. ನಂತರ ಜುಲೈ 27 ರಂದು ಅರ್ಹತಾ ಸುತ್ತಿನಲ್ಲಿ, 580/600 ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಗಿಟ್ಟಿಸಿ ಅರ್ಹತೆ ಪಡೆದಿದ್ದರು. ಅವರು ಜುಲೈ 28ರಂದು ನಡೆದ ಫೈನಲ್​​ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇದನ್ನೂ ಓದಿ: Ian Bell : ಲಂಕಾ ತಂಡದ ನೂತನ ಬ್ಯಾಟಿಂಗ್​ ಕೋಚ್​ ಆಗಿ ಇಯಾನ್ ಬೆಲ್​ ನೇಮಕ

ಮಿಶ್ರ ತಂಡ ವಿಭಾಗದಲ್ಲಿ ಭಾಕರ್ ಅವರು ಸರಬ್ಜೋತ್ ಸಿಂಗ್ ಜೊತೆಗೂಡಿ ಜುಲೈ 29ರಂದು ನಡೆದ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದರು. ನಂತರ ಅವರು ದಕ್ಷಿಣ ಕೊರಿಯಾ ವಿರುದ್ಧದ ಕಂಚಿನ ಪದಕದ ಪಂದ್ಯದಲ್ಲಿ ಗೆದ್ದು ಸಾಧನೆ ಮಾಡಿದರು. ಅವರ ಪದಕಗಳು ಭಾರತಕ್ಕೆ ಹೆಚ್ಚಿನ ವಿಶ್ವಾಸ ಮೂಡಿಸಿತು.

ಭಾಕರ್ 25 ಮೀಟರ್ ಪಿಸ್ತೂಲ್ ಮಹಿಳಾ ಸ್ಪರ್ಧೆಯಲ್ಲಿಯೂ ಸ್ಪರ್ಧಿಸಿದ್ದರು. ಆಗಸ್ಟ್ 3ರಂದು ನಡೆದ ಫೈನಲ್​​ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕ ಕಳೆದುಕೊಂಡರು.

Exit mobile version