ಬೆಂಗಳೂರು : 2023ರ ಏಕದಿನ ವಿಶ್ವಕಪ್ (World Cup 2023) ಫೈನಲ್ ಪಂದ್ಯದ ವೇಳೆ ಭಾರತ ವಿರುದ್ಧ ಆಡಲು ಬಳಸಿದ್ದ ಬ್ಯಾಟ್ಗೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಮರ್ನಸ್ ಲಾಬುಶೇನ್ (Marnus Labuschagne) ವಿದಾಯ ಹೇಳಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ದೊಡ್ಡ ಪಂದ್ಯದಲ್ಲಿ ಲಾಬುಶೇನ್ 58 (110) ರನ್ ಗಳಿಸುವ ಮೂಲಕ ನಿರ್ಣಾಯಕ ಅರ್ಧಶತಕ ಗಳಿಸಿದ್ದರು. ನಿರ್ಣಾಯಕ ಹಂತದಲ್ಲಿ ಬ್ಯಾಟಿಂಗ್ಗೆ ಇಳಿದ ಬಲಗೈ ಬ್ಯಾಟ್ಸ್ಮನ್ ಭಾರತದ ಆಸೆಗೆ ತಣ್ಣೀರು ಎರಚಿದ್ದರು. ಯಾಕೆಮದರೆ ಆಸ್ಟ್ರೇಲಿಯಾವು 7 ಓವರ್ಗಳಲ್ಲಿ 47ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದರೂ ನಂತರದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ಗೆಲುವು ಸಾಧಿಸಿತ್ತು.
ಟ್ರಾವಿಸ್ ಹೆಡ್ ಜೊತೆಗೂಡಿ 215 ಎಸೆತಗಳಲ್ಲಿ 192 ರನ್ಗಳ ಜೊತೆಯಾಟವಾಡಿದ ಲಾಬುಶೇನ್ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರ ಪರಿಣಾಮವಾಗಿ, ಆಸ್ಟ್ರೇಲಿಯಾವು ಪಂದ್ಯವನ್ನು ಆರು ವಿಕೆಟ್ ಗಳಿಂದ ಗೆದ್ದು ಆರನೇ ಏಕದಿನ ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಸ್ಟಾರ್ ಬ್ಯಾಟರ್ ಇತ್ತೀಚೆಗೆ ತಾವು ಫೈನಲ್ನಲ್ಲಿ ಬಳಸಿದ ಬ್ಯಾಟ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅದು ಹಾಳಾದ ಸ್ಥಿತಿಯಲ್ಲಿತ್ತು ಮತ್ತು ಅದನ್ನು ನಿವೃತ್ತಿಗೊಳಿಸಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
“ವಿಶ್ವಕಪ್ ಫೈನಲ್ ಬ್ಯಾಟ್ನಿಂದ ನಿವೃತ್ತಿ ಹೊಂದುವ ಸಮಯ ಬಂದಿದೆ ಎಂದು ಭಾವಿಸುತ್ತೇನೆ” ಎಂದು ಲಾಬುಶೇನ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Vinesh Phogat : ವಿನೇಶ್ ಫೋಗಟ್ ಎಫೆಕ್ಟ್; ತೂಕದ ನಿಯಮಗಳ ಬದಲಾವಣೆಗೆ ವಿಶ್ವ ಕುಸ್ತಿ ಒಕ್ಕೂಟ ನಿರ್ಧಾರ?
ವಿಶ್ವ ಕಪ್ ಪಂದ್ಯಾವಳಿಯುದ್ದಕ್ಕೂ ಅದ್ಭುತ ಫಾರ್ಮ್ ನಲ್ಲಿದ್ದ ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಅದ್ಭುತ ಬೌಲಿಂಗ್ ಸ್ಪೆಲ್ ಲಾಬುಶೇನ್ಗೆ ತೊಂದರೆ ಮಾಡಿತು. ಆದಾಗ್ಯೂ ಅವರು ಎಲ್ಲವನ್ನೂ ಮೀರಿ ಗೆದ್ದರು. ಟ್ರಾವಿಸ್ ಹೆಡ್ ಮತ್ತೊಂದು ತುದಿಯಿಂದ ಭಾರತೀಯ ಬೌಲಿಂಗ್ ದಾಳಿಯನ್ನು ಪುಡಿ ಮಾಡಿದ್ದರಿಂದ ಲಾಬುಶೇನ್ಗೆ ನೆರವಾಯಿತು. 15 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಾಯದಿಂದ 137 (120) ರನ್ ಹೆಡ್ ಗೆಲುವಿನ ರೂವಾರಿ ಎನಿಸಿಕೊಂಡರು. ಲಾಬುಶೇನ್ ತಮ್ಮ 58 ರನ್ಗಳ ಇನಿಂಗ್ಸ್ನಲ್ಲಿ ಕೇವಲ ನಾಲ್ಕು ಬೌಂಡರಿಗಳನ್ನು ಗಳಿಸಿದರು. 43 ಓವರ್ಗಳಲ್ಲಿ 241 ರನ್ಗಳ ಗುರಿ ಬೆನ್ನಟ್ಟಲು ಈ ಜೋಡಿ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಿತು.
ಏಕದಿನ ವಿಶ್ವಕಪ್ನಲ್ಲಿ ಲಾಬುಶೇನ್ ಹತ್ತು ಇನ್ನಿಂಗ್ಸ್ಗಳಿಂದ 40.22 ಸರಾಸರಿಯಲ್ಲಿ 362 ರನ್ ಗಳಿಸಿದ್ದಾರೆ. ಮೂರು ಅರ್ಧಶತಕಗಳೊಂದಿಗೆ 70.70 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ 71 (83) ರನ್ ಗಳಿಸಿ ಪಂದ್ಯಾವಳಿಯ ಗರಿಷ್ಠ ಸ್ಕೋರ್ ಆಗಿದೆ.