Site icon Vistara News

IPL 2024 : ಮುಂಬಯಿ ವಿರುದ್ಧದ ಪಂದ್ಯದಲ್ಲಿ ರೆಫರಿಯಿಂದ ಆರ್​​ಸಿಬಿಗೆ ಮೋಸ; ಬಯಲಾಯ್ತು ವಿಡಿಯೊ!

IPL 2024

ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ (ಏಪ್ರಿಲ್ 11) ನಡೆದ ಐಪಿಎಲ್​ 2024 (IPL 2024) ಪಂದ್ಯದಲ್ಲಿ ಆರ್​​ಸಿಬಿ (Royal Challengers Bangalore) ಮುಂಬಯಿ ಇಂಡಿಯನ್ಸ್​ (Mumbai Indians) ವಿರುದ್ಧ ಸೋತಿದೆ. ಈ ಪಂದ್ಯದಲ್ಲಿ ರೆಫಿರಿ ಮತ್ತು ಅಂಪೈರ್​ಗಳು ಆರ್​ಸಿಬಿಗೆ ಮೋಸ ಮಾಡಿದ್ದಾರೆ. ಟಾಸ್ ಸೇರಿದಂತೆ ಎಲ್ಲ ಕಡೆಯೂ ಮುಂಬಯಿ ತಂಡಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆಪಾದನೆಗಳು ಕೇಳಿ ಬಂದಿವೆ. ದೊಡ್ಡ ಟೂರ್ನಿಯಲ್ಲಿ ಈ ರೀತಿ ಆಗುತ್ತಿರುವ ಬಗ್ಗೆ ಆರ್​ಸಿಬಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ ಕೃತ್ಯಗಳನ್ನು ಬಿಸಿಸಿಐ ತಡೆಬೇಕು ಎಂದು ವಿಡಿಯೊ ಸಮೇತ ಒತ್ತಾಯ ಮಾಡಿದ್ದಾರೆ.

ಟಾಸ್​ಗಾಗಿ ನಾಣ್ಯ ಎಸೆದು ಅದು ಬಿದ್ದಲ್ಲಿಂದ ರೆಫರಿ ಅದನ್ನು ಎತ್ತಿಕೊಳ್ಳುವಾಗ ಮುಂಬಯಿ ತಂಡದ ನಾಯಕ ಹಾರ್ದಿಕ್​ ಪಾಂಡ್ಯನ ಕರೆಗೆ ಪೂರಕವಾಗುವಂತೆ ತಿರುಗಿಸುತ್ತಿರುವುದು ಕಂಡುಬಂದಿದೆ. ಆರ್​ಸಿಬಿ ನಾಯಕ ಪ್ಲೆಸಿಸ್​ ತಲೆ (Tail) ಕರೆ ಕೊಟ್ಟಿದದರು. ಟೈಲ್ ಬಿದ್ದಿದ್ದರೂ ರೆಫರಿ ಎತ್ತಿಕೊಳ್ಳುವಾಗ ಹೆಡ್​ (Head) ಕಡೆಗೆ ತಿರುಗಿಸಿದ್ದಾರೆ ಎನ್ನಲಾಗಿದೆ. ಈ ಕೃತ್ಯವು ಮುಂಬೈಗೆ ಅನುಕೂಲಕರ ಟಾಸ್ ಗೆಲುವು ನೀಡಿದೆ. ನಾಯಕ ಹಾರ್ದಿಕ್ ಪಾಂಡ್ಯ ಆರ್​ಸಿಬಿ ವಿರುದ್ಧ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ವಾಖೆಂಡೆಯಲ್ಲಿ ಟಾಸ್​ ಗೆಲುವಿನ ನಿರ್ಣಾಯಕ ಅಂಶವಾಗಿದೆ. ಮೊದಲ ಬೌಲಿಂಗ್ ಮಾಡಿದ ತಂಡಕ್ಕೆ ವಿಜಯದ ಅವಕಾಶ ಹೆಚ್ಚು. ರಾತ್ರಿ ಪರಿಣಾಮಕಾರಿ ಬೌಲಿಂಗ್ ಮಾಡಲು ಇಬ್ಬನಿ ಪರಿಣಾಮ ಅಡ್ಡಿ ಮಾಡುತ್ತದೆ. ಮೋಸ ಮಾಡಲಾಗಿದೆ ಎಂಬ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಐಪಿಎಲ್ ಪಂದ್ಯಗಳು ಪೂರ್ವನಿರ್ಧರಿತ ಮತ್ತು ದೊಡ್ಡ ತಂಡಗಳಿಗೆ ಅನುಕೂಲಕರ ಎಂಬ ವದಂತಿಗಳನ್ನು ಮತ್ತೊಮ್ಮೆ ಹುಟ್ಟುಹಾಕಿದೆ.

ಇದನ್ನೂ ಓದಿ: Rohit Sharma : ಟಿ20 ವಿಶ್ವ ಕಪ್ ಬಳಿಕ ರೋಹಿತ್​ ನಿವೃತ್ತಿ? ಅವರುಹೇಳಿದ್ದೇನು?

ಇದೇ ರೀತಿ ಬೌಂಡರಿ ನೀಡುವಾಗ ಮತ್ತು ನೋ ಬಾಲ್ ಹಾಗೂ ವೈಡ್​ಗಳನ್ನು ನೀಡುವ ವಿಚಾರದಲ್ಲೂ ಅಂಪೈರ್​ಗಳು ತಾರತಮ್ಯ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಆರ್​ಸಿಬಿಗೆ ಸಿಗಬೇಕಾದ ರನ್​ ಕೊಟ್ಟಿಲ್ಲ. ವೈಡ್ ಕೊಟ್ಟಿಲ್ಲ. ನೋ ಬಾಲ್ ಕೊಟ್ಟಿಲ್ಲ ಎಂದು ಅಭಿಮಾನಿಗಳು ವಿಡಿಯೊ ಸಮೇತ ಸೋಶಿಯಲ್​ ಮೀಡಿಯಾಗಳಲ್ಲಿ ತಮ್ಮ ವಾದ ಮಂಡಿಸುತ್ತಿದ್ದಾರೆ.

ಆರ್​ಸಿಬಿಯನ್ನು ಸೋಲಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024 ರ ಋತುವಿನಲ್ಲಿ ಎರಡನೇ ಗೆಲುವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯಲ್ಲಿ ಈವರೆಗೆ ಐದು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ತಂಡವು ಮಿಶ್ರಫಳ ಉಂಡಿದೆ. ಆದರೆ, ಆಟಗಾರರು ಫಾರ್ಮ್ ಅನ್ನು ಕಂಡುಕೊಂಡಿರುವುದು ಆ ಪಾಳಯಕ್ಕೆ ಸಂತಸದ ಸುದ್ದಿ.

ಮುಂಬೈ ತಂಡದ ಚೇತರಿಕೆ, ಪಾತಾಳಕ್ಕೆ ಇಳಿದ ಆರ್​ಸಿಬಿ


ಸತತ ಎರಡು ಗೆಲುವುಗಳೊಂದಿಗೆ ಮುಂಬೈ ಇಂಡಿಯನ್ಸ್ ತನ್ನ ಆವೇಗವನ್ನು ಹೆಚ್ಚಿಸಿದೆ. ಇದೇ ಗೆಲುವಿನ ಹಳಿಯಲ್ಲಿ ಸಾಗುವ ಗುರಿಯನ್ನು ಹೊಂದಿದೆ. ಮೂರು ಸೋಲಿನ ಬಳಿಕ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದ ಐದು ಬಾರಿಯ ಚಾಂಪಿಯನ್ಸ್ ಈಗ ಐದು ಪಂದ್ಯಗಳಲ್ಲಿ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಬಂದಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಪಂದ್ಯಗಳನ್ನು ಗೆಲ್ಲುವುದನ್ನು ಮುಂದುವರಿಸಿದರೆ, ಅವರು ಪ್ಲೇಆಫ್​ ಸ್ಥಾನ ಪಡೆಯುವುದು ಖಚಿತ. ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಮತ್ತು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಏಪ್ರಿಲ್ 14 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯ 29 ನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಸಿಎಸ್​ಕೆ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ ಹೀಗಾಗಿ ಇತ್ತಂಡಗಳ ನಡುವೆ ಜಿದ್ದಾಜಿದ್ದಿನ ಕದನ ನಿರೀಕ್ಷಿತ.

ಇದೇ ವೇಳೆ ಆರ್​ಸಿಬಿ ತಂಡ ಇದುವರೆಗೆ ಆಡಿರುವ ಆರರಲ್ಲಿ ಏಕೈಕ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೆ ಆರ್​ಸಿಬಿ ಪ್ಲೇಆಫ್​ ಚಾನ್ಸ್​ ಮಸುಕಾಗಿದೆ. ಇನ್ನುಳಿದಿರುವ ಎಂಟೂ ಪಂದ್ಯಗಳನ್ನು ಗೆದ್ದರೆ ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆಗೊಳ್ಳಬಹುದು. ಆದರೆ, ಆಟಗಾರರ ಫಾರ್ಮ್ ನೋಡಿದರೆ ಇವೆಲ್ಲವೂ ಅಸಾಧ್ಯ.

Exit mobile version