Site icon Vistara News

Mayank Agarwal : ಸಂಚು ನಡೆದಿದೆ ಎಂದು ದೂರು ದಾಖಲಿಸಿದ ಮಯಾಂಕ್​

Mayank Agarwal

ಬೆಂಗಳೂರು: ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರು ತಮ್ಮ ವಿರುದ್ದ ಸಂಚು ನಡೆದಿದೆ ಪೊಲೀಸರಿಗೆ ದೂರು (Mayank Agarwal ) ನೀಡಿದ್ದಾರೆ. ಭಾರತದ ಬ್ಯಾಟರ್​ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವ ನೀರು ಎಂದು ಭಾವಿಸಿ ಆ್ಯಸಿಡ್​ ಕುಡಿದಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ತ್ರಿಪುರಾದ ಆಸ್ಪತ್ರೆಗೆ ಸಾಗಿಸಿ ಐಸಿಯುಗೆ ದಾಖಲಿಸಲಾಗಿದೆ. ಮಯಾಂಕ್ ಆರೋಗ್ಯ ಸ್ಥಿರವಾಗಿದೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ ಘಟನೆ ಬಗ್ಗೆ ಹಲವಾರು ಊಹಾಪೂಹಗಳು ಉಂಟಾಗಿವೆ. ಈ ಬಗ್ಗೆ ಪೊಲೀಸ್​ ದೂರು ದಾಖಲಾಗಿದೆ.

ಮಯಾಂಕ್ ಅಗರ್ವಾಲ್ ಅವರ ನೇತೃತ್ವದ ಕರ್ನಾಟಕ ತಂಡವು ತ್ರಿಪುರಾದಿಂದ ನವದೆಹಲಿಗೆ ತೆರಳಬೇಕಿತ್ತು, ಅಲ್ಲಿಂದ ಅವರು ರಣಜಿ ಟ್ರೋಫಿಯಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲು ರಾಜ್​ಕೊಟ್​ಗೆ ಪ್ರಯಾಣಿಸಬೇಕಿತ್ತು. ಆದರೆ, ವಿಮಾನ ಟೇಕ್ ಆಫ್ ಆದ ನಂತರ ಮಯಾಂಕ್ ಅನಾರೋಗ್ಯಕ್ಕೆ ಒಳಗಾಗಿದ್ದರು. ತಕ್ಷಣ ವಿಮಾನವನ್ನು ಲ್ಯಾಂಡ್ ಮಾಡಲಾಗಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಕುಳಿತಿದ್ದಾಗ ತನ್ನ ಮುಂದೆ ಒಂದು ಪೊಟ್ಟಣ ನೋಡಿದ್ದರು. ಅದನ್ನು ನೀರು ಎಂದು ಭಾವಿಸಿ ಅದನ್ನು ಕುಡಿದಿದ್ದರು. ತಕ್ಷಣ ಅವರ ಬಾಯಿಯಲ್ಲಿ ಊತ ಮತ್ತು ಹುಣ್ಣು ಆಯಿತು. ಅವರ ಆರೋಗ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಬಗ್ಗೆ ಅವರ ಮ್ಯಾನೇಜರ್ ದೂರು ನೀಡಿದ್ದಾರೆ. ನಾವು ದೂರನ್ನು ದಾಖಲಿಸುತ್ತಿದ್ದೇವೆ ಮತ್ತು ತನಿಖೆ ನಡೆಸುತ್ತೇವೆ ” ಎಂದು ಪಶ್ಚಿಮ ತ್ರಿಪುರಾ ಎಸ್ಪಿ ಕಿರಣ್ ಕುಮಾರ್ ಕೆ ಹೇಳಿದ್ದಾರೆ.

ವರದಿಗಳ ಪ್ರಕಾರ, ಮಯಾಂಕ್ ಆಕಸ್ಮಿಕವಾಗಿ ನೀರು ಎಂದು ಭಾವಿಸಿ ತನ್ನ ಎದುರಿನ ಚೀಲದಿಂದ ದ್ರವವನ್ನು ಕುಡಿದಿದ್ದರು. ಅದು ನೀರಿನಂತೆ ರುಚಿಸದಿದ್ದಾಗ ಕುಡಿಯುವುದನ್ನು ನಿಲ್ಲಿಸಿದ್ದರು. ಬಾಯಿ ಮತ್ತು ಗಂಟಲಿನಲ್ಲಿ ಸುಡುವ ಭಾವನೆ ಬಂದ ತಕ್ಷಣ ವಿಷಯ ಮಾಹಿತಿ ನೀಡಿದ್ದರು. ರೈಲ್ವೇಸ್ ವಿರುದ್ಧದ ಮುಂದಿನ ರಣಜಿ ಟ್ರೋಫಿ ಪಂದ್ಯದಲ್ಲಿ ಅಗರ್ವಾಲ್ ಕಾಣಿಸಿಕೊಳ್ಳುವುದಿಲ್ಲ. ಆದಾಗ್ಯೂ, ಅವರ ತಂಡದ ಸದಸ್ಯರು ರಾಜ್ಕೋಟ್ ತಲುಪಿ ಮುಂಬರುವ ಮುಖಾಮುಖಿಗೆ ತಯಾರಿ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಹೆಲ್ತ್ ಬುಲೆಟಿನ್ ಏನು ಹೇಳುತ್ತದೆ?

ಎಎಲ್​ಎಸ್ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್​ನಲ್ಲಿರುವಂತೆ ‘ಮಂಗಳವಾರ ಸಂಜೆ ಕರ್ನಾಟಕದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್, ಗಂಟಲಿನಲ್ಲಿ ಕಿರಿಕಿರಿ ಅನುಭವ ಹಾಗೂ ತುಟಿಯ ಮೇಲೆ ಗುಳ್ಳೆಗಳು ಎದ್ದಿರುವುದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದಾರೆ’ ಎಂದು ತಿಳಿಸಿದೆ.

ರಣಜಿಯಲ್ಲಿ ಕರ್ನಾಟಕ ತಂಡದ ಪ್ರದರ್ಶನ:
ಮಯಾಂಕ್ ನಾಯಕತ್ವದಲ್ಲಿ ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಏಳು ವಿಕೆಟ್​ಗಳಿಂದ ಸೋಲಿಸಿತ್ತು. ನಂತರ ನಡೆದ ಗುಜರಾತ್ ವಿರುದ್ಧದ ಎರಡನೇ ಪಂದ್ಯದಲ್ಲಿ ತಂಡ ಆರು ರನ್​ಗಳಿಂದ ಸೋತಿತ್ತು. ಬಳಿಕ ಗೋವಾ ವಿರುದ್ಧದ ಮೂರನೇ ಪಂದ್ಯ ಡ್ರಾ ಆಗಿತ್ತು. ಇದೀಗ ತ್ರಿಪುರಾ ವಿರುದ್ಧ ನಡೆದಿರುವ ನಾಲ್ಕನೇ ಪಂದ್ಯವನ್ನು ತಂಡ 29 ರನ್‌ಗಳಿಂದ ಗೆದ್ದುಕೊಂಡಿದೆ. ಮುಂದಿನ ಪಂದ್ಯವು ಫೆಬ್ರವರಿ 2 ರಿಂದ ಸೂರತ್‌ನಲ್ಲಿ ರೈಲ್ವೇಸ್ ವಿರುದ್ಧ ನಡೆಯಲಿದೆ.

Exit mobile version