ಅಗರ್ತಲಾ: ಅನಗತ್ಯ ಕಾರಣಕ್ಕೆ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಮಯಾಂಕ್ ಅಗರ್ವಾಲ್ (Mayank Agarwal) ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ. ಮಯಾಂಕ್ ಸ್ಥಿತಿಯ ಬಗ್ಗೆ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಮಾಹಿತಿ ನೀಡಿದ್ದಾರೆ. ಮಯಾಂಕ್ ಅಪಾಯದಿಂದ ಪಾರಾಗಿದ್ದಾರೆ ಮತ್ತು ನಾಳೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಲಗೈ ಬ್ಯಾಟರ್ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಲು ಬೆಂಗಳೂರಿಗೆ ಮರಳಲಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮಯಾಂಕ್ ಶೀಘ್ರವಾಗಿ ಆಟಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ತ್ರಿಪುರಾವನ್ನು ಸೋಲಿಸಿದ ಕರ್ನಾಟಕ ಈಗ ಸೂರತ್ ನಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲಿದೆ. ಅಗರ್ವಾಲ್ ಅನುಪಸ್ಥಿತಿಯಲ್ಲಿ ತಂಡದ ಉಪನಾಯಕ ನಿಕಿನ್ ಜೋಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಸಂಚು ನಡೆದಿದೆ ಎಂದು ದೂರು ದಾಖಲಿಸಿದ ಮಯಾಂಕ್
ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರು ತಮ್ಮ ವಿರುದ್ದ ಸಂಚು ನಡೆದಿದೆ ಪೊಲೀಸರಿಗೆ ದೂರು (Mayank Agarwal ) ನೀಡಿದ್ದಾರೆ. ಭಾರತದ ಬ್ಯಾಟರ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವ ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ತ್ರಿಪುರಾದ ಆಸ್ಪತ್ರೆಗೆ ಸಾಗಿಸಿ ಐಸಿಯುಗೆ ದಾಖಲಿಸಲಾಗಿದೆ. ಮಯಾಂಕ್ ಆರೋಗ್ಯ ಸ್ಥಿರವಾಗಿದೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ ಘಟನೆ ಬಗ್ಗೆ ಹಲವಾರು ಊಹಾಪೂಹಗಳು ಉಂಟಾಗಿವೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಮಯಾಂಕ್ ಅಗರ್ವಾಲ್ ಅವರ ನೇತೃತ್ವದ ಕರ್ನಾಟಕ ತಂಡವು ತ್ರಿಪುರಾದಿಂದ ನವದೆಹಲಿಗೆ ತೆರಳಬೇಕಿತ್ತು, ಅಲ್ಲಿಂದ ಅವರು ರಣಜಿ ಟ್ರೋಫಿಯಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲು ರಾಜ್ಕೊಟ್ಗೆ ಪ್ರಯಾಣಿಸಬೇಕಿತ್ತು. ಆದರೆ, ವಿಮಾನ ಟೇಕ್ ಆಫ್ ಆದ ನಂತರ ಮಯಾಂಕ್ ಅನಾರೋಗ್ಯಕ್ಕೆ ಒಳಗಾಗಿದ್ದರು. ತಕ್ಷಣ ವಿಮಾನವನ್ನು ಲ್ಯಾಂಡ್ ಮಾಡಲಾಗಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಕುಳಿತಿದ್ದಾಗ ತನ್ನ ಮುಂದೆ ಒಂದು ಪೊಟ್ಟಣ ನೋಡಿದ್ದರು. ಅದನ್ನು ನೀರು ಎಂದು ಭಾವಿಸಿ ಅದನ್ನು ಕುಡಿದಿದ್ದರು. ತಕ್ಷಣ ಅವರ ಬಾಯಿಯಲ್ಲಿ ಊತ ಮತ್ತು ಹುಣ್ಣು ಆಯಿತು. ಅವರ ಆರೋಗ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಬಗ್ಗೆ ಅವರ ಮ್ಯಾನೇಜರ್ ದೂರು ನೀಡಿದ್ದಾರೆ. ನಾವು ದೂರನ್ನು ದಾಖಲಿಸುತ್ತಿದ್ದೇವೆ ಮತ್ತು ತನಿಖೆ ನಡೆಸುತ್ತೇವೆ ” ಎಂದು ಪಶ್ಚಿಮ ತ್ರಿಪುರಾ ಎಸ್ಪಿ ಕಿರಣ್ ಕುಮಾರ್ ಕೆ ಹೇಳಿದ್ದಾರೆ.
ಇದನ್ನೂ ಓದಿ : Shikhar Dhawan : ಮಗ ಮನೆಗೆ ಬಂದೇ ಬರುತ್ತಾನೆ; ಮಗ ಜೊರಾವರ್ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ ಧವನ್
ವರದಿಗಳ ಪ್ರಕಾರ, ಮಯಾಂಕ್ ಆಕಸ್ಮಿಕವಾಗಿ ನೀರು ಎಂದು ಭಾವಿಸಿ ತನ್ನ ಎದುರಿನ ಚೀಲದಿಂದ ದ್ರವವನ್ನು ಕುಡಿದಿದ್ದರು. ಅದು ನೀರಿನಂತೆ ರುಚಿಸದಿದ್ದಾಗ ಕುಡಿಯುವುದನ್ನು ನಿಲ್ಲಿಸಿದ್ದರು. ಬಾಯಿ ಮತ್ತು ಗಂಟಲಿನಲ್ಲಿ ಸುಡುವ ಭಾವನೆ ಬಂದ ತಕ್ಷಣ ವಿಷಯ ಮಾಹಿತಿ ನೀಡಿದ್ದರು. ರೈಲ್ವೇಸ್ ವಿರುದ್ಧದ ಮುಂದಿನ ರಣಜಿ ಟ್ರೋಫಿ ಪಂದ್ಯದಲ್ಲಿ ಅಗರ್ವಾಲ್ ಕಾಣಿಸಿಕೊಳ್ಳುವುದಿಲ್ಲ. ಆದಾಗ್ಯೂ, ಅವರ ತಂಡದ ಸದಸ್ಯರು ರಾಜ್ಕೋಟ್ ತಲುಪಿ ಮುಂಬರುವ ಮುಖಾಮುಖಿಗೆ ತಯಾರಿ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಹೆಲ್ತ್ ಬುಲೆಟಿನ್ ಏನು ಹೇಳುತ್ತದೆ?
ಎಎಲ್ಎಸ್ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿರುವಂತೆ ‘ಮಂಗಳವಾರ ಸಂಜೆ ಕರ್ನಾಟಕದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್, ಗಂಟಲಿನಲ್ಲಿ ಕಿರಿಕಿರಿ ಅನುಭವ ಹಾಗೂ ತುಟಿಯ ಮೇಲೆ ಗುಳ್ಳೆಗಳು ಎದ್ದಿರುವುದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದಾರೆ’ ಎಂದು ತಿಳಿಸಿದೆ.