ವಿಜಯನಗರ: ಸೌದಿ ಅರೇಬಿಯಾದ ಮೆಕ್ಕಾದಲ್ಲಿ ತಾಪಮಾನ ಏರಿಕೆಯಿಂದ ಉಂಟಾದ ಆಘಾತದಿಂದ ಕರ್ನಾಟಕದ ಇಬ್ಬರು ಮೃತಪಟ್ಟಿರುವ (Mecca Heatwave Death) ಬಗ್ಗೆ ರಾಜ್ಯ ಹಜ್ ಕಮಿಟಿ ಕಾರ್ಯನಿರ್ವಹಣಾ ಅಧಿಕಾರಿ ಸರ್ಫರಾಜ್ ಖಾನ್ ಮಾಹಿತಿ ನೀಡಿದ್ದಾರೆ. ಮೃತಪಟ್ಟಿರುವ ಇಬ್ಬರನ್ನು ಅಲ್ಲೇ ಸಂಸ್ಕಾರ ಮಾಡಲಾಗುವುದು ಎಂದು ಹೇಳಿದ್ದಾರೆ. ಇಸ್ಲಾಂ ಪ್ರಕಾರ ಪವಿತ್ರ ಸ್ಥಳವಾಗಿರುವ ಮೆಕ್ಕಾದಲ್ಲಿ ಮೃತಪಟ್ಟರೆ ಶ್ರೇಷ್ಠ ಹಾಗೂ ಪುಣ್ಯ. ಅಂತೆಯೇ ಅವರನ್ನು ಅಲ್ಲಿಯೇ ಸಂಸ್ಕಾರ ಮಾಡಲಾಗುವುದು ಹೊಸಪೇಟೆಯ ಡಿಸಿ ಕಚೇರಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕದಿಂದ ಒಟ್ಟು 10,300 ಜನ ಯಾತ್ರಾರ್ಥಿಗಳು ಹಜ್ ಗೆ ಹೋಗಿದ್ದರು. 52 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಏರಿದ್ದ ಕಾರಣ ಕರ್ನಾಟಕದ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ತೆರಳಿದ್ದ ಇಬ್ಬರು ಯಾತ್ರಾರ್ಥಿಗಳು ಜೂನ್ 16ರಂದು ಮೆಕ್ಕಾದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಆರ್ ಟಿ ನಗರದ ನಿವಾಸಿ ರುಕ್ಸಾನಾ (90), ಹಾಗೂ ಅಬ್ದುಲ್ ಅನ್ಸಾರಿ (54) ಮೃತಪಟ್ಟವರು. ಅವರಿಬ್ಬರೂ ಬೆಂಗಳೂರು ಎಂಬಾರ್ಕೆಸೆ ಪಾಯಿಂಟ್ ನಿಂದ ಹಜ್ ಗೆ ಹೋಗಿದ್ದರು ಎಂದು ಸರ್ಫಾರಾಜ್ ಅವರು ಮಾಹಿತಿ ನೀಡಿದ್ದಾರೆ.
ಭಾರತ ಸರ್ಕಾರ ಹಾಗೂ ಸೌದಿ ಅರೇಬಿಯಾದ ಒಡಂಬಡಿಕೆ ಪ್ರಕಾರ ಶವ ತೆಗೆದುಕೊಂಡು ಬರುವುದಕ್ಕೆ ಆಗಲ್ಲ. ಅಂತೆಯೇ ಇಸ್ಲಾಂ ಧರ್ಮದಲ್ಲಿ ಮೆಕ್ಕಾದಲ್ಲಿ ಶವಸಂಸ್ಕಾರ ಮಾಡೋದು ಪುಣ್ಯವಾದ ಕೆಲಸ. ಇಸ್ಲಾಂ ಅನುಯಾಯಿಗಳು ಬಲವಾಗಿ ನಂಬುತ್ತಾರೆ. ಹಾಗಾಗಿ ಮೆಕ್ಕಾದಿಂದ ಯಾವುದೇ ಮೃತದೇಹವನ್ನು ತೆಗೆದುಕೊಂಡು ಬರುವುದಿಲ್ಲ ಎಂದ ಹೇಳಿದ್ದಾರೆ.
ಇದನ್ನೂ ಓದಿ: NEET UG : ಫಿಸಿಕ್ಸ್ನಲ್ಲಿ 85, ಕೆಮೆಸ್ಟ್ರಿಯಲ್ಲಿ 5! ನೀಟ್ ಆಕಾಂಕ್ಷಿಯ ಸ್ಕೋರ್ ಕಾರ್ಡ್ ಸೋರಿಕೆ, ಆರೋಪಿ ಸೆರೆ
ಸೌದಿ ಅರೇಬಿಯಾದ ಸರ್ಕಾರ ಮತ್ತು ಕೌನ್ಸಿಲ್ ಜನರಲ್ ಮೃತಪಟ್ಟವರು ಶವ ಸಂಸ್ಕಾರ ಮಾಡಿದ್ದಾರೆ. ಮೃತಪಟ್ಟಿರುವ ರುಕ್ಸಾನಾ ಪತಿ ಹಾಗೂ ಅಬ್ದುಲ್ ಅನ್ಸಾರಿ ಅವರ ಪತ್ನಿ ಸಹ ಹಜ್ ಗೆ ಹೋಗಿದ್ದಾರೆ. ಅವರ ಕುಟುಂಬಸ್ಥರು ಅಲ್ಲಿಯೇ ಇದ್ದಾರೆ ಎಂದು ಅವರು ಹೇಳಿದ್ದಾರೆ.
ಸಂಜೆ 4ರವರೆಗೆ ಹೊರಗೆ ಬರದಂತೆ ಸೂಚನೆ
ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಯಾರು ಹೊರಗಡೆ ಬರಬಾರದು ಅಂತಾ ಸೂಚನೆ ನೀಡಿದ್ದಾರೆ. ಹಜ್ಗೆ ಹೋದ ಎಲ್ಲ ಯಾತ್ರಾರ್ಥಿಗಳು ಕಡ್ಡಾಯ ಪಾಲನೆ ಮಾಡಬೇಕು. ಇಲ್ಲಿಂದ ಹಜ್ ಗೆ ಹೋಗುವಾಗ ಎಲ್ಲ ಪ್ರತಿಯೊಬ್ಬರಿಗೂ ತರಬೇತಿ ಕೊಟ್ಟಿರುತ್ತೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಕ್ಯಾಂಪ್ ಮಾಡಿದ್ದೇವೆ. ತಾಪಮಾನ ಜಾಸ್ತಿಯಿದ್ದಾಗ ಯಾವ ಥರ ಇರಬೇಕು ಅಂತಾ ಹೇಳಿದ್ದೇವೆ. ಜಾಗೃತಿ ಮೂಡಿಸಿದ್ರೂ ದುರಂತ ಆಗಬಾರದಿತ್ತು ಎಂಬುದೇ ನನ್ನ ಅಭಿಪ್ರಾಯ.