Site icon Vistara News

Vistara news launch | ಮಾಧ್ಯಮಗಳು ಜನಪರವಾಗಿರುವುದು ನಿರ್ಣಾಯಕ : ಕೇಂದ್ರ ಸಚಿವ ಎಲ್.‌ ಮುರುಗನ್

murugan

ಬೆಂಗಳೂರು: ಸದೃಢ ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ನಿರ್ಣಾಯಕ ಪಾತ್ರ ವಹಿಸುತ್ತದೆ. ಜನತೆಗೆ ಸುದ್ದಿ ಹಾಗೂ ವಿಶ್ಲೇಷಣೆಯ ಜತೆಗೆ ದನಿ ಇಲ್ಲದ ಜನತೆಗೆ ದನಿಯೂ ಆಗುತ್ತದೆ. ಮುದ್ರಣ ಮತ್ತು ಟಿ.ವಿ ನ್ಯೂಸ್‌ ಮತ್ತು ಡಿಜಿಟಲ್‌ ವಾಹಿನಿಗಳು ಈಗ ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿವೆ. (Vistara news launch) ಆದರೆ ನಿಖರ ಮತ್ತು ಜನಪರವಾಗಿರುವುದು ಮುಖ್ಯ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಮೀನುಗಾರಿಕೆ, ಪಶು ಸಂಗೋಪನೆ ಇಲಾಖೆ ಸಹಾಯಕ ಸಚಿವ ಎಲ್.‌ ಮುರುಗನ್‌ ಅವರು ತಿಳಿಸಿದರು.

ವಿಸ್ತಾರ ನ್ಯೂಸ್‌ ಚಾನೆಲ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಸ್ತಾರ ಆ್ಯಪ್ ಅನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದಲ್ಲಿ 1.45 ಲಕ್ಷ ಪತ್ರಿಕೆ, ನಿಯತಕಾಲಿಕೆಗಳು ಇವೆ. 900 ಖಾಸಗಿ ಟಿ.ವಿ ಚಾನೆಲ್‌, 380 ನ್ಯೂಸ್‌ ಚಾನೆಲ್‌ಗಳಿವೆ. ಹೀಗಾಗಿ ಮಾಧ್ಯಮಗಳ ಜವಾಬ್ದಾರಿಯೂ ದೊಡ್ಡದು ಎಂದರು.

ಮಾಧ್ಯಮಗಳ ಸಂಖ್ಯೆ ಹೆಚ್ಚಿದೆ. ಜತೆಗೆ ಸುಳ್ಳು ಸುದ್ದಿಗಳನ್ನು ಹರಡಿಸುವ ಮಾಧ್ಯಮಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಂಥ 200 ಯೂಟ್ಯೂಬ್‌ ಚಾನೆಲ್‌ಗಳನ್ನು ನಿಷೇಧಿಸಲಾಗಿದೆ. ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಕೈಗೊಳ್ಳುವುದು ಸೂಕ್ತ ಎಂದು ವಿವರಿಸಿದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಪ್ರಸಾರ ಭಾರತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ತಿಳಿಸಲಾಗಿದೆ. ಇದರಲ್ಲಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರೂ ಇದ್ದಾರೆ ಎಂದರು.

Exit mobile version