Site icon Vistara News

UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

Aditya Srivastava

Aditya Srivastava tops UPSC civil Services final exams 2023, Who is he?

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ (UPSC) ನಡೆಸಿದ ನಾಗರಿಕ ಸೇವೆಗಳ ಪರೀಕ್ಷೆಯ (UPSC Results 2023) ಫಲಿತಾಂಶ ಪ್ರಕಟವಾಗಿದ್ದು, ಆದಿತ್ಯ ಶ್ರೀವಾಸ್ತವ್‌ (Aditya Srivastava) ಅವರು ದೇಶದಲ್ಲೇ ಮೊದಲ ರ‍್ಯಾಂಕ್‌ ಗಳಿಸಿದ್ದಾರೆ. ಆ ಮೂಲಕ ಇವರು ಮಹತ್ವದ ಸಾಧನೆ ಮಾಡಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುತ್ತಿರುವ ಯಾರಿಗೇ ಆಗಲಿ ಆದಿತ್ಯ ಶ್ರೀವಾಸ್ತವ್‌ ಅವರು ಮಾದರಿಯಾಗಿದ್ದಾರೆ. ಹಾಗಾದರೆ, ಯಾರಿವರು ಆದಿತ್ಯ ಶ್ರೀವಾಸ್ತವ್?‌ ಇವರ ಹಿನ್ನೆಲೆ ಏನು ಎಂಬುದರ ಮಾಹಿತಿ ಇಲ್ಲಿದೆ.

ಆದಿತ್ಯ ಶ್ರೀವಾಸ್ತವ್‌ ಅವರು ಉತ್ತರ ಪ್ರದೇಶದ ಲಖನೌ ಮೂಲದವರು. ಇವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಲಖನೌನಲ್ಲಿಯೇ ಮುಗಿಸಿದ್ದಾರೆ. ಐಐಟಿ ಕಾನ್ಪುರದಲ್ಲಿ ಎಂ.ಟೆಕ್‌ ಸ್ನಾತಕೋತ್ತರ ಪದವಿ ಪಡೆದ ಇವರು 15 ತಿಂಗಳು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆದರೆ, ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತ ಇವರು ಎಲೆಕ್ಟ್ರಿಕಲ್‌ ಎಂಜಿನಿಯರ್ ಉದ್ಯೋಗ ಬಿಟ್ಟು ಐಎಎಸ್‌ಗೆ ಅಧ್ಯಯನ ಮಾಡಲು ಆರಂಭಿಸಿದರು.

2017ರಿಂದಲೂ ಸತತ ಪ್ರಯತ್ನ

ಹಣಕಾಸು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಂಎನ್‌ಸಿಯಲ್ಲಿ ಕೆಲಸ ಮಾಡಿದ ಆದಿತ್ಯ ಶ್ರೀವಾಸ್ತವ್‌ ಅವರು ನಾಗರಿಕ ಸೇವೆಯ ಕಾರಣಕ್ಕಾಗಿ 2017ರಲ್ಲಿ ಉದ್ಯೋಗ ತೊರೆದು, ಐಎಎಸ್‌ಗೆ ತಯಾರಿ ನಡೆಸಿದರು. ಸತತ ಪ್ರಯತ್ನದ ಮೂಲಕ ಇವರು ಈಗ ಯುಪಿಎಸ್‌ಸಿಯಲ್ಲಿ ಮೊದಲ ರ‍್ಯಾಂಕ್‌ ಗಳಿಸಿದ್ದಾರೆ.

ಆದಿತ್ಯ ಶ್ರೀವಾಸ್ತವ್‌ ಸಂದರ್ಶನ‌ (ಅಣಕು ಸಂದರ್ಶನ)

2023ರ ಸೆಪ್ಟೆಂಬರ್ 15, 16, 17, 23 ಮತ್ತು 24ರಂದು ನಡೆದ ಪರೀಕ್ಷೆಗಳಲ್ಲಿ ನಾಗರಿಕ ಸೇವೆಗಳ ಮುಖ್ಯ ಸಂದರ್ಶನ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸೇವಾ ಆಯೋಗವು 2024ರ ಮೊದಲ ಎರಡು ತಿಂಗಳಲ್ಲಿ ಸಂದರ್ಶಿಸಿತು. 2023ರ ಸೆಪ್ಟೆಂಬರ್‌ನಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ನಾಗರಿಕ ಸೇವೆಗಳ ಲಿಖಿತ ಪರೀಕ್ಷೆಯ ಫಲಿತಾಂಶ ಮತ್ತು 2024ರ ಜನವರಿ- ಏಪ್ರಿಲ್‌ಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳ ಆಧಾರದ ಮೇಲೆ ಒಟ್ಟು 1,016 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳಲ್ಲಿ ಗುಂಪು ʼಎʼ ಮತ್ತು ಗುಂಪು ʼಬಿʼ ಹುದ್ದೆಗಳಿಗೆ ಇವರು ನಿಯುಕ್ತರಾಗುತ್ತಾರೆ.

ಫಲಿತಾಂಶವನ್ನು ಪರಿಶೀಲಿಸಲು ಹೀಗೆ ಮಾಡಿ:

1) ನಿಮ್ಮ ಬ್ರೌಸರ್‌ನಲ್ಲಿ upsc.gov.in ತೆರೆಯಿರಿ

2) What’s New ಸೆಕ್ಷನ್‌ನ ಅಡಿಯಲ್ಲಿ ‘UPSC Civil Services Examination 2023 Final Results’ ಎಂಬುದರ ಮೇಲೆ ಕ್ಲಿಕ್ ಮಾಡಿ.

3) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಹೆಸರನ್ನು ಪಿಡಿಎಫ್ ಮೂಲಕ ನೀಡಲಾಗಿರುವುದು ತೆರೆಯುತ್ತದೆ.

ಇದನ್ನೂ ಓದಿ: UPSC CSE 2024: ಯುಪಿಎಸ್‌ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ನಿಯಮದಲ್ಲಿದೆ ಕೆಲವು ಬದಲಾವಣೆ; ಇಲ್ಲಿದೆ ಮಾಹಿತಿ

Exit mobile version