Site icon Vistara News

Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Yuzvendra Chahal

ನವದೆಹಲಿ: ಐಪಿಎಲ್ 2022 ರ ಹರಾಜಿಗೆ ಮೊದಲು ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB)​ ಫ್ರಾಂಚೈಸಿಯು ಯುಜ್ವೇಂದ್ರ ಚಾಹಲ್ ಅವರನ್ನು ಬಿಡುಗಡೆ ಮಾಡಿದ್ದಕ್ಕೆ ಹಾಗೂ ಆ ಮೇಲೆ ಖರೀದಿ ಮಾಡದಿರುವುದಕ್ಕೆ ಆರ್​ಸಿಬಿಯ ಮಾಜಿ ಮುಖ್ಯ ಕೋಚ್ ಮತ್ತು ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಇದೀಗ ಕಾರಣಕೊಟ್ಟಿದ್ದಾರೆ. ಯಜ್ವೇಂದ್ರ ಚಹಲ್ (Yuzvendra Chahal) 2014ರಿಂದ 2021ರ ಅವಧಿಯಲ್ಲಿ ಆರ್​​ಸಿಬಿ ಪರ 139 ವಿಕೆಟ್​ಗಳನ್ನು ಪಡೆದು ಅತ್ಯಂತ ಯಶಸ್ವಿ ಬೌಲರ್ ಆಗಿದ್ದ ಹೊರತಾಗಿಯೂ ತಂಡದಲ್ಲಿ ಉಳಿದಿರುವ ವಿಚಾರವನ್ನು ತಿಳಿಸಿದ್ದಾರೆ.

ಐಪಿಎಲ್ 2022 ರ ಮೆಗಾ ಹರಾಜಿಗೆ ಮುಂಚಿತವಾಗಿ, ಆರ್​​ಸಿಬಿ ಫ್ರಾಂಚೈಸಿ ಯುಜ್ವೇಂದ್ರ ಚಹಲ್ ಅವರನ್ನು ಉಳಿಸಿಕೊಳ್ಳದಿದ್ದಾಗ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದರು. ತನ್ನನ್ನು ಉಳಿಸಿಕೊಳ್ಳಲಾಗುವುದಿಲ್ಲ ಎಂದು ಫ್ರಾಂಚೈಸಿಯಿಂದ ಫೋನ್ ಕರೆ ಅಥವಾ ಮಾಹಿತಿಯೂ ಸ್ವೀಕರಿಸಿಲ್ಲ ಎಂದು ಸ್ಪಿನ್ನರ್​ ನಂತರ ಬಹಿರಂಗಪಡಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು ಹಾಗೂ ಈಗಲೂ ಅಭಿಮಾನಿಗಳಿಗೆ ಬೇಸರವಿದೆ.

ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿ ಅವರನ್ನು ಮತ್ತೆ ಖರೀದಿಸುತ್ತದೆ ಎಂದು ಅವರಿಗೆ ಸೂಚನೆ ನೀಡಿತ್ತು ಎಂಬ ವರದಿಗಳೂ ಇದ್ದವು. ಆದಾಗ್ಯೂ, ಅವರ ಹೆಸರು ಬಿಡ್ಡಿಂಗ್​​ಗೆ ಬಂದಾಗ, ಆರ್​ಸಿಬಿ ಆಡಳಿತ ಬಗ್ಗೆ ಯಾವುದೇ ಆಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಉದ್ದೇಶಪೂರ್ವಕ ಕೆಲಸ ಎಂಬುದು ಬಹಿರಂಗಗೊಂಡಿತು.

ಇದನ್ನೂ ಓದಿ: Match Fixing : ಇರ್ಫಾನ್​ ಪಠಾಣ್​, ಸುರೇಶ್ ರೈನಾ ಪಾಲ್ಗೊಂಡಿದ್ದ ​ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್?

2019 ರಿಂದ 2023 ರವರೆಗೆ ಫ್ರಾಂಚೈಸಿಯ ಕ್ರಿಕೆಟ್ ವ್ಯವಹಾರಗಳ ನೇತೃತ್ವ ವಹಿಸಿದ್ದ ಮೈಕ್​ ಹೆಸ್ಸನ್, ಚಾಹಲ್ ನಿರ್ಗಮನದ ಹಿಂದಿನ ತಾರ್ಕಿಕತೆಯನ್ನು ಬಹಿರಂಗಪಡಿಸಿದ್ದಾರೆ. ಚಾಹಲ್ ಅವರನ್ನು ಉಳಿಸಿಕೊಳ್ಳದಿರುವುದು ಆರ್​​ಸಿಬಿಗೆ ಹೆಚ್ಚುವರಿ ಆರ್ಥಿಕ ಒತ್ತಡ ಕಡಿಮೆ ಮಾಡುತ್ತದೆ. ಚಹಲ್ ಮತ್ತು ವೇಗಿ ಹರ್ಷಲ್ ಪಟೇಲ್ ಇಬ್ಬರನ್ನೂ ಹರಾಜಿನಲ್ಲಿ ಭದ್ರಪಡಿಸುವ ಗುರಿಯನ್ನು ಹೊಂದಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂದಿದೆ.

ನಾವು ಚಾಹಲ್ ಅವರನ್ನು ಉಳಿಸಿಕೊಳ್ಳಲಿಲ್ಲ. ಏಕೆಂದರೆ ಕೇವಲ ಮೂವರು ಆಟಗಾರರನ್ನು ಬಿಡುಗಡೆ ಮಾಡಿ ಹೆಚ್ಚುವರಿ ನಾಲ್ಕು ಕೋಟಿ ರೂಪಾಯಿ ಮೂಲಕ ಅವರನ್ನು ವಾಪಸ್​ ಕರೆಸಬೇಕಾಗಿತ್ತು. ಅದರ ಮೂಲಕ ನಾವು ಚಹಲ್ ಮತ್ತು ಹರ್ಷಲ್ ಪಟೇಲ್ ಇಬ್ಬರನ್ನೂ ಮರಳಿ ಖರೀದಿಸುವ ಗುರಿ ಹೊಂದಿದ್ದೆವು”ಎಂದು ಹೆಸನ್ ಜಿಯೋ ಸಿನೆಮಾದಲ್ಲಿ ಬಹಿರಂಗಪಡಿಸಿದರು.

ತಡವಾಗಿ ಬಂದ ಹೆಸರು

ಹರಾಜಿನಲ್ಲಿ ಚಾಹಲ್ ಹೆಸರು ತಡವಾಗಿ ಬಂತು. ಈ ವೇಳೆ ಆರ್​ಸಿಬಿ ತನ್ನ ಯೋಜನೆಗಳಲ್ಲಿ ಬಿಕ್ಕಟ್ಟನ್ನು ಎದುರಿಸಿತು. ಇದು ಶ್ರೀಲಂಕಾದ ಸ್ಪಿನ್ ಆಲ್ರೌಂಡರ್ ವನಿಂದು ಹಸರಂಗ ಅವರನ್ನು ತೆಗೆದುಕೊಳ್ಳುವ ಮೂಲಕ ಅವಕಾಶ ನಷ್ಟವಾಯಿತು ಎಂದು ಹೇಳಿದರು.

ಚಹಲ್​ಗಿಂತ ಮೊಲದೇ ಹರಾಜಿನಲ್ಲಿ ಹಸರಂಗ ಅವರ ಹೆಸರು ಕಾಣಿಸಿಕೊಂಡಾಗ ಆರ್​ಸಿಬಿ ಅವರಿಗೆ ಆದ್ಯತೆ ನೀಡಿತು. ಅಜಾಗರೂಕತೆಯಿಂದಾಗಿ ಚಾಹಲ್ ಅವರನ್ನು ಕಳೆದುಕೊಂಡಿತು ಎಂದು ಹೆಸ್ಸಾನ್ ಹೇಳಿದ್ದಾರೆ.

“ನಾನು ನನ್ನ ವೃತ್ತಿಜೀವನವನ್ನು ಮುಗಿಸುವವರೆಗೂ ಮತ್ತು ಬಹುಶಃ ಅದರಾಚೆಗೂ ಯೂಜಿ (ಚಾಹಲ್) ಅವರನ್ನು ಕಳೆದುಕೊಂಡಿರುವುದಕ್ಕೆ ನಾನು ನಿರಾಶೆಗೊಳ್ಳುತ್ತೇನೆ. ಅವರು ಅತ್ಯುತ್ತಮ ಬೌಲರ್, “ಎಂದು ಹೆಸ್ಸನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಐಪಿಎಲ್​ನಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಚಾಹಲ್ ಪಾತ್ರರಾಗಿದ್ದಾರೆ. ಇದರಲ್ಲಿ ಆರು ನಾಲ್ಕು ವಿಕೆಟ್ ಸಾಧನೆ ಮತ್ತು ಐದು ವಿಕೆಟ್ ಸಾಧನೆಗಳು ಸೇರಿವೆ. ಇರದಲ್ಲೊಂದು ಹ್ಯಾಟ್ರಿಕ್​ ಸಾಧನೆಯೂ ಇದೆ.

Exit mobile version