ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ (Asian Cricket Council) ಹೊಸ ಪಾತ್ರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಪಾಕಿಸ್ತಾನದ ಮಾಧ್ಯಮಗಳ ಇತ್ತೀಚಿನ ಸುದ್ದಿ ವರದಿಗಳ ಪ್ರಕಾರ, ಪ್ರಸ್ತುತ ಅಧ್ಯಕ್ಷ ಜಯ್ ಶಾ ಹೊಂದಿರುವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಮೊಹ್ಸಿನ್ ನಖ್ವಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ.
Mohsin Naqvi will be the President of Asian Cricket Council for Next 2 Years After Jay Shah Tenure 🤜🤜 pic.twitter.com/bp8p2yIGht
— ٰImran Siddique (@imransiddique89) July 30, 2024
ಈ ವರ್ಷದ ಆರಂಭದಲ್ಲಿ ಮೊಹ್ಸಿನ್ ನಖ್ವಿ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನಖ್ವಿ ಅವರನ್ನು ಪಿಸಿಬಿ ಮುಖ್ಯಸ್ಥರಾಗಿ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅವರ ಅಧಿಕಾರಾವಧಿಯಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡವು ಜೂನ್ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ 2024ರಿಂದ ಗುಂಪು ಹಂತದ ನಿರ್ಗಮನದೊಂದಿಗೆ ಮುಖಭಂಗ ಅನುಭವಿಸಿತು.
2021 ರಲ್ಲಿ ಎಹ್ಸಾನ್ ಮಣಿ ನಿರ್ಗಮಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದವರು ತಮ್ಮ ಪೂರ್ಣ ಅವಧಿಯನ್ನು ಪೂರ್ಣಗೊಳಿಸಲು ಹೆಣಗಾಡುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಕೇವಲ 15 ತಿಂಗಳು ಸೇವೆ ಸಲ್ಲಿಸಿದರೆ, ನಜಾಮ್ ಸೇಥಿ ಮತ್ತು ಝಕಾ ಅಶ್ರಫ್ ತಲಾ ಒಂದು ವರ್ಷಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿದರು. ಮೊಹ್ಸಿನ್ ನಖ್ವಿ ಕೂಡ ಈ ಸ್ಥಾನವನ್ನು ಹೊಂದಿದ್ದಾರೆ
ಜಯ್ ಶಾ ಉತ್ತರಾಧಿಕಾರಿ ಮೊಹ್ಸಿನ್ ನಖ್ವಿ
ಪಾಕಿಸ್ತಾನದ ಇತ್ತೀಚಿನ ವರದಿಗಳ ಪ್ರಕಾರ, ಮೊಹ್ಸಿನ್ ನಖ್ವಿ 2025 ರ ಜನವರಿಯಲ್ಲಿ ಎಸಿಸಿ ಅಧ್ಯಕ್ಷರಾಗಿ ತಮ್ಮ ಎರಡು ವರ್ಷಗಳ ಅವಧಿ ಪ್ರಾರಂಭಿಸಲಿದ್ದಾರೆ. ಪ್ರಾದೇಶಿಕ ಕ್ರಿಕೆಟ್ ಆಡಳಿತದಲ್ಲಿ ಪಾಕಿಸ್ತಾನದ ಪ್ರಭಾವ ಹೆಚ್ಚಿಸುವ ಗುರಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡ ಹೊಂದಿದೆ.
ಇದನ್ನೂ ಓದಿ: Paris Olympics 2024 : ಆರ್ಚರಿಯಲ್ಲಿ ಕ್ವಾರ್ಟರ್ ಫೈನಲ್ಗೇರಿದ 18 ವರ್ಷದ ಭಜನ್ ಕೌರ್
ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಸಭೆಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ಹೊಸ ಅಧ್ಯಕ್ಷರಾಗಿ ಮೊಹ್ಸಿನ್ ನಖ್ವಿ ಅವರನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಎಸಿಸಿ ಅಧ್ಯಕ್ಷರನ್ನು ಅದರ ಸದಸ್ಯ ರಾಷ್ಟ್ರಗಳ ನಡುವೆ ರೊಟೇಶನ್ ವ್ಯವಸ್ಥೆಯ ಮೂಲಕ ನೇಮಕ ಮಾಡಲಾಗುತ್ತದೆ. ಪ್ರಸ್ತುತ ಭಾರತೀಯ ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಜಯ್ ಶಾ ಅವರ ಅಧಿಕಾರಾವಧಿ ಜನವರಿಯಲ್ಲಿ ಒಂದು ವರ್ಷ ವಿಸ್ತರಿಸಲಾಗಿತ್ತು. ಅಮಿತ್ ಶಾ ಅವರ ಅಧಿಕಾರಾವಧಿ 2025 ರ ಜನವರಿಯಲ್ಲಿ ಕೊನೆಗೊಂಡ ನಂತರ ಮೊಹ್ಸಿನ್ ನಖ್ವಿ ಎಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಜ್ಮುಲ್ ಹಸನ್ ಅವರು 2021ರ ಜನವರಿವರೆಗೆ ಎಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ 2022 ರ ಟಿ 20 ಏಷ್ಯಾ ಕಪ್ ಮತ್ತು 2023 ರ ಏಕದಿನ ಏಷ್ಯಾ ಕಪ್ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಯಶಸ್ವಿಯಾಗಿ ಆಯೋಜಿಸಿದೆ