ಭೋಪಾಲ್: ದೇಶದಲ್ಲಿ ಚೀತಾಗಳ ಸಂತತಿಯ ಪುನರುಜ್ಜೀವನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ನಮೀಬಿಯಾದಿಂದ ತಂದ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನೊ ನ್ಯಾಷನಲ್ ಪಾರ್ಕ್‌ಗೆ ಬಿಟ್ಟಿದ್ದಾರೆ. ಹೀಗೆ, ಎಂಟು ಚೀತಾಗಳನ್ನು ಕಾಡಿಗೆ ಬಿಡಲು ನ್ಯಾಷನಲ್ ಪಾರ್ಕ್‌ನಲ್ಲಿ ಮೋದಿ ಹಾಗೂ ನೂರಾರು ಗಣ್ಯರಿಗಾಗಿ ಒಂದು ವೇದಿಕೆ ರಚಿಸಲಾಗಿತ್ತು. ಆದರೆ, ವೇದಿಕೆ ನಿರ್ಮಾಣಕ್ಕಾಗಿ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ ಈ ವರದಿಯು ನಿಜವೇ ಎಂಬುದು ಸದ್ಯದ ಪ್ರಶ್ನೆ (Fact Check) ಆಗಿದೆ.
ಏನಿದೆ ವಾಸ್ತವ?
ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ (ಪಿಐಬಿ)ದ ಫ್ಯಾಕ್ಟ್ ಚೆಕ್ ವಿಭಾಗವು ವರದಿಯ ನಿಜಾಂಶದ ಕುರಿತು ಮಾಹಿತಿ ನೀಡಿದೆ. “ಕುನೊ ವನ್ಯಜೀವಿ ಸಂರಕ್ಷಣಾ ಪ್ರದೇಶದಲ್ಲಿ ಹಲವಾರು ಮರಗಳನ್ನು ಧರೆಗುರುಳಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಸುಳ್ಳು. ಮೋದಿ ಸೇರಿ ಹಲವು ಗಣ್ಯರಿಗಾಗಿ ರಚಿಸಿದ ವೇದಿಕೆಯ ನಿರ್ಮಾಣಕ್ಕಾಗಿ ಮರಗಳನ್ನು ಕಡಿದಿಲ್ಲ” ಎಂದು ಸ್ಪಷ್ಟಪಡಿಸಿದೆ.
ಹಾಗೇಯೇ, “ಗಣ್ಯರ ವಾಸ್ತವ್ಯಕ್ಕೆ ಸೆಸೈಪುರ ಎಫ್‌ಆರ್‌ಎಚ್ ಹಾಗೂ ಟೂರಿಸಂ ಜಂಗಲ್ ಲಾಡ್ಜ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು” ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು ಮೋದಿ ಅವರು ಚೀತಾಗಳನ್ನು ಕುನೊ ನ್ಯಾಷನಲ್ ಪಾರ್ಕ್‌ಗೆ ಬಿಟ್ಟ ಬಳಿಕ ಕ್ಯಾಮೆರಾ ಲೆನ್ಸ್‌ನ ಮುಚ್ಚಳ ತೆಗೆಯದೆಯೇ ಚೀತಾಗಳ ಫೋಟೊ ತೆಗೆದರು ಎಂಬ ಕುರಿತು ಹಲವು ಫೋಟೊಗಳು ಜಾಲತಾಣದಲ್ಲಿ ಹರಿದಾಡಿದ್ದವು. ಬಳಿಕ ಅದು ತಿರುಚಿದ ಫೋಟೊ ಎಂಬುದು ದೃಢಪಟ್ಟಿತ್ತು.
ಇದನ್ನೂ ಓದಿ | Fact Check | ಕ್ಯಾಮೆರಾ ಲೆನ್ಸ್ ಮುಚ್ಚಳ ತೆಗೆಯದೆಯೇ ಚೀತಾ ಫೋಟೊ ಕ್ಲಿಕ್ಕಿಸಿದರೇ ನರೇಂದ್ರ ಮೋದಿ?